ಯೋಸೇಫನು ಇನ್ನು ಮನೆಯಲ್ಲಿದ್ದಾಗಲೇ ಯೆಹೂದನೂ ಅವನ ಸಹೋದ ರರೂ ಬಂದು ಅವನ ಮುಂದೆ ಅಡ್ಡಬಿದ್ದರು.
Cross references
ಇಗೋ, ನಾವು ಹೊಲದಲ್ಲಿ ಸಿವುಡುಗಳನ್ನು ಕಟ್ಟುತ್ತಾ ಇದ್ದೆವು; ಆಗ ಇಗೋ, ನನ್ನ ಸಿವುಡು ಎದ್ದು ನಿಂತಿತು; ಆಗ ಇಗೋ, ನಿಮ್ಮ ಸಿವುಡುಗಳು ತಿರುಗಿ ಕೊಂಡು ನನ್ನ ಸಿವುಡಿಗೆ ಅಡ್ಡಬಿದ್ದವು ಅಂದನು.
ಇದಲ್ಲದೆ ಅವನು ಇನ್ನೊಂದು ಕನಸನ್ನು ಕಂಡು ತನ್ನ ಸಹೋದರರಿಗೆ--ಇಗೋ, ಇನ್ನೊಂದು ಕನಸನ್ನು ಕಂಡಿದ್ದೇನೆ; ಇಗೋ, ಸೂರ್ಯನೂ ಚಂದ್ರನೂ ಹನ್ನೊಂದು ನಕ್ಷತ್ರಗಳೂ ನನಗೆ ಅಡ್ಡಬಿದ್ದವು ಅಂದನು.
ಯೋಸೇಫನು ಬೆನ್ಯಾವಿಾನನನ್ನು ಅವರ ಸಂಗಡ ಕಂಡಾಗ ತನ್ನ ಮನೆ ಉಗ್ರಾಣಿಕನಿಗೆ--ಈ ಮನುಷ್ಯರನ್ನು ಮನೆಗೆ ಕರಕೊಂಡು ಹೋಗಿ ಕುರಿಯನ್ನು ಕೊಯ್ದು ಅಡಿಗೆ ಸಿದ್ಧಮಾಡು. ಯಾಕಂದರೆ ಈ ಮನುಷ್ಯರು ಮಧ್ಯಾಹ್ನ ದಲ್ಲಿ ನನ್ನ ಸಂಗಡ ಊಟಮಾಡಬೇಕು ಅಂದನು.
ಅವರು ಅಲ್ಲಿ ಊಟಮಾಡಬೇಕೆಂದು ಕೇಳಿದ್ದರಿಂದ ಯೋಸೇಫನು ಮಧ್ಯಾಹ್ನದಲ್ಲಿ ಮನೆಗೆ ಬರುವಷ್ಟರಲ್ಲಿ ಕಾಣಿಕೆಯನ್ನು ಸಿದ್ಧಮಾಡಿಕೊಂಡರು.
ಅವನ ಸಹೋದರರು ಸಹ ಬಂದು ಅವನ ಮುಂದೆ ಅಡ್ಡಬಿದ್ದು ಇಗೋ, ನಿನ್ನ ದಾಸರಾಗಿ ದ್ದೇವೆ ಅಂದರು.
ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತವಾಗಿ ಏರಿಸಿ ಎಲ್ಲಾ ಹೆಸರುಗಳಿಗಿಂತ ಉನ್ನತವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.