ಆಗ ಅವರು ತಮ್ಮ ವಸ್ತ್ರಗಳನ್ನು ಹರಿದುಕೊಂಡು ತಮ್ಮ ತಮ್ಮ ಕತ್ತೆಗಳ ಮೇಲೆ ಚೀಲಗಳನ್ನು ಹೇರಿಸಿ ಪಟ್ಟಣಕ್ಕೆ ಮರಳಿ ಬಂದರು.
Cross references
ರೂಬೇನನು ತಗ್ಗಿನ ಬಳಿಗೆ ತಿರಿಗಿ ಬಂದಾಗ ಇಗೋ, ಯೋಸೇಫನು ತಗ್ಗಿನಲ್ಲಿ ಇಲ್ಲದ್ದರಿಂದ ತನ್ನ ವಸ್ತ್ರಗಳನ್ನು ಹರಿದು ಕೊಂಡನು.
ಆಗ ಯಾಕೋಬನು ತನ್ನ ವಸ್ತ್ರಗಳನ್ನು ಹರಿದುಕೊಂಡು ತನ್ನ ನಡುವಿಗೆ ಗೋಣಿಯನ್ನು ಕಟ್ಟಿಕೊಂಡು ತನ್ನ ಮಗನಿಗೋಸ್ಕರ ಬಹುದಿನ ದುಃಖಪಟ್ಟನು.
ಆಗ ದೇಶವನ್ನು ಪಾಳತಿ ನೋಡಿದವರಲ್ಲಿದ್ದ ನೂನನ ಮಗನಾದ ಯೆಹೋಶುವನೂ ಯೆಫುನ್ನೆಯ ಮಗನಾದ ಕಾಲೇಬನೂ ತಮ್ಮ ವಸ್ತ್ರಗಳನ್ನು ಹರಕೊಂಡು
ಇಗೋ, ಮೂರನೆಯ ದಿನದಲ್ಲಿ ತನ್ನ ವಸ್ತ್ರಗಳನ್ನು ಹರಿದುಕೊಂಡು ತನ್ನ ತಲೆಯ ಮೇಲೆ ಮಣ್ಣು ಹಾಕಿಕೊಂಡಿದ್ದ ಒಬ್ಬ ಮನುಷ್ಯನು ಸೌಲನ ಬಳಿಯಿಂದಲೂ ಪಾಳೆಯಿಂದಲೂ ಹೊರಟು ದಾವೀ ದನ ಬಳಿಗೆ ಬಂದು ನೆಲದ ಮೇಲೆ ಬಿದ್ದು ಅವ ನಿಗೆ ವಂದಿಸಿದನು.
ಆಗ ದಾವೀದನೂ ಅವನ ಸಂಗಡ ಇದ್ದ ಎಲ್ಲಾ ಜನರೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು
ಆಗ ತನ್ನ ತಲೆಯಮೇಲೆ ಬೂದಿಯನ್ನು ಹಾಕಿಕೊಂಡು ತಾನು ಧರಿಸಿಕೊಂಡಿದ್ದ ವಿವಿಧವಾದ ವಸ್ತ್ರವನ್ನು ಹರಿದು ತನ್ನ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡು ಅಳುತ್ತಾ ಹೋದಳು.