Home Bibles ಆದಿಕಾಂಡ 42:24 · ಕನ್ನಡ ಬೈಬಲ್
ಆದಿಕಾಂಡ 42:24 · ಕನ್ನಡ ಬೈಬಲ್

ಆಗ ಅವನು ಅವರ ಕಡೆಯಿಂದ ಹೊರಟುಹೋಗಿ ಅತ್ತು ಮತ್ತೆ ಅವರ ಬಳಿಗೆ ಬಂದು ಅವರ ಸಂಗಡ ಮಾತನಾಡಿ ಅವರಲ್ಲಿ ಸಿಮೆಯೋನನನ್ನು ಹಿಡಿಸಿ ಅವರ ಕಣ್ಣೆದುರಿನಲ್ಲಿ ಬಂಧಿಸಿ ಸೆರೆಯಲ್ಲಿ ಹಾಕಿಸಿದನು..

Cross references

ಆದಿಕಾಂಡ 34:25

ಮೂರನೆಯ ದಿನದಲ್ಲಿ ಅವರಿಗೆ ನೋವು ಉಂಟಾದಾಗ ಯಾಕೋಬನ ಮಕ್ಕಳಲ್ಲಿ ಇಬ್ಬರು ಅಂದರೆ ದೀನಳ ಸಹೋದರರಾದ ಸಿಮೆಯೋನನೂ ಲೇವಿಯೂ ತಮ್ಮ ತಮ್ಮ ಕತ್ತಿಗಳನ್ನು ತಕ್ಕೊಂಡು ಧೈರ್ಯವಾಗಿ ಪಟ್ಟಣಕ್ಕೆ ಬಂದು ಗಂಡಸರನ್ನೆಲ್ಲಾ ಕೊಂದುಹಾಕಿದರು.

ಆದಿಕಾಂಡ 43:14

ಸರ್ವಶಕ್ತನಾದ ದೇವರು ನಿಮ್ಮ ಬೇರೆ ಸಹೋದರ ನನ್ನೂ ಬೆನ್ಯಾವಿಾನನನ್ನೂ ಕಳುಹಿಸಿ ಕೊಡುವಹಾಗೆ ಆ ಮನುಷ್ಯನು ನಿಮ್ಮ ಮೇಲೆ ಕರುಣೆ ತೋರಿಸುವಂತೆ ಮಾಡಲಿ. ನಾನಂತೂ ಮಕ್ಕಳನ್ನು ಕಳಕೊಂಡವನಾಗಿರಬೇಕಾದರೆ ಹಾಗೆಯೇ ಆಗಲಿ ಅಂದನು.

ಆದಿಕಾಂಡ 43:23

ಅದಕ್ಕವನು--ನಿಮಗೆ ಸಮಾಧಾನವಿರಲಿ, ಭಯ ಪಡಬೇಡಿರಿ. ನಿಮ್ಮ ದೇವರೂ ನಿಮ್ಮ ತಂದೆಯ ದೇವರೂ ನಿಮ್ಮ ಚೀಲಗಳಲ್ಲಿ ನಿಮಗೆ ದ್ರವ್ಯವನ್ನು ಕೊಟ್ಟಿದ್ದಾನೆ. ನಿಮ್ಮ ಹಣವು ನನಗೆ ಮುಟ್ಟಿತು ಎಂದು ಹೇಳಿ ಸಿಮೆಯೋನನನ್ನು ಅವರ ಬಳಿಗೆ ತಂದನು.

ಆದಿಕಾಂಡ 43:30

ಆಗ ಯೋಸೇಫನ ಕರುಳು ತನ್ನ ತಮ್ಮನ ಮೇಲೆ ಮರುಗಿದ್ದರಿಂದ ಅವನು ಅವಸರದಲ್ಲಿ ಎದ್ದು ಅಳುವದಕ್ಕೆ ಸ್ಥಳವನ್ನು ಹುಡುಕಿ ತನ್ನ ಕೋಣೆಯೊಳಗೆ ಹೋಗಿ ಅಲ್ಲಿ ಅತ್ತನು.

ಆದಿಕಾಂಡ 45:1

ಆಗ ಯೋಸೇಫನು ತನ್ನ ಸುತ್ತಲೂ ನಿಂತಿದ್ದವರ ಮುಂದೆ ಮನಸ್ಸನ್ನು ಬಿಗಿ ಹಿಡುಕೊಳ್ಳಲಾರದೆ--ಎಲ್ಲರನ್ನೂ ನನ್ನ ಬಳಿಯಿಂದ ಹೊರಗೆ ಹೋಗುವಂತೆ ಮಾಡಿರಿ ಎಂದು ಕೂಗಿದನು. ಯೋಸೇಫನು ತನ್ನ ಸಹೋದರರಿಗೆ ತನ್ನನ್ನು ಪ್ರಕಟಿಸಿ ಕೊಂಡಾಗ ಅಲ್ಲಿ ಬೇರೆ ಯಾರೂ ಇರಲಿಲ್ಲ.

ಆದಿಕಾಂಡ 45:2

ಆಗ ಅವನು ತನ್ನ ಸ್ವರವೆತ್ತಿ ಅತ್ತಾಗ ಐಗುಪ್ತ್ಯರೂ ಫರೋಹನ ಮನೆಯವರೂ ಕೇಳಿಸಿಕೊಂಡರು.

ಆದಿಕಾಂಡ 45:14

ಅವನು ತನ್ನ ತಮ್ಮನಾದ ಬೆನ್ಯಾವಿಾನನ ಕೊರಳನ್ನು ಅಪ್ಪಿ ಕೊಂಡು ಅತ್ತನು; ಬೆನ್ಯಾವಿಾನನೂ ಅವನ ಕೊರಳನ್ನು ಅಪ್ಪಿಕೊಂಡು ಅತ್ತನು.

ಆದಿಕಾಂಡ 49:5

ಸಿಮೆಯೋ ನನೂ ಲೇವಿಯೂ ಸಹೋದರರು; ಕ್ರೂರತ್ವದ ಆಯುಧಗಳು ಅವರ ನಿವಾಸಗಳಲ್ಲಿ ಇವೆ.

ಯೆಶಾಯ 63:9

ಅವರಿಗೆ ಆದ ಎಲ್ಲಾ ಶ್ರಮೆಯಲ್ಲಿ ಆತನಿಗೆ ಶ್ರಮೆ ಆಯಿತು; ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು; ತನ್ನ ಪ್ರೀತಿಯಲ್ಲಿಯೂ ತನ್ನ ಕನಿಕರ ದಲ್ಲಿಯೂ ಆತನೇ ಅವರನ್ನು ವಿಮೋಚಿಸಿದನು; ಪೂರ್ವಕಾಲದ ದಿನಗಳಲ್ಲೆಲ್ಲಾ ಅವರನ್ನು ಎತ್ತಿಕೊಂಡು ಹೊತ್ತುಕೊಂಡನು.

ಲೂಕ 19:41

ತರುವಾಯ ಆತನು ಸವಿಾಪಿಸಿದಾಗ ಪಟ್ಟಣ ವನ್ನು ನೋಡಿ ಅದರ ವಿಷಯವಾಗಿ ಅತ್ತು--

ರೋಮಾಪುರದವರಿಗೆ 12:15

ಸಂತೋಷಪಡುವವರ ಸಂಗಡ ಸಂತೋಷಪಡಿರಿ; ಅಳುವವರ ಸಂಗಡ ಅಳಿರಿ.

1 ಕೊರಿಂಥದವರಿಗೆ 12:26

ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ; ಇಲ್ಲವೆ ಒಂದು ಅಂಗಕ್ಕೆ ಮರ್ಯಾದೆ ಬಂದರೆ ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ.

ಹೆಬ್ರಿಯರಿಗೆ 4:15

ಯಾಕಂದರೆ ನಮಗಿ ರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿ ಯಾದರೂ ಪಾಪರಹಿತನಾಗಿದ್ದನು.ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾ ಸಿಂಹಾಸನದ ಬಳಿಗೆ ಬರೋಣ.

ಯೂದ 1:22

ತಾರತಮ್ಯ ನೋಡಿ ಕೆಲವರಿಗೆ ಕನಿಕರವನ್ನು ತೋರಿ ಸಿರಿ.

Interlinear

Choose Theme