ಹೀಗಿರುವಲ್ಲಿ ಅವನು ತನ್ನ ಕೆಲಸ ಮಾಡುವದಕ್ಕೆ ಮನೆಯನ್ನು ಪ್ರವೇಶಿಸಿದಾಗ ಮನೆಯವರಲ್ಲಿ ಒಬ್ಬರೂ ಮನೆ ಯಲ್ಲಿರಲಿಲ್ಲ.
Cross references
ವ್ಯಭಿಚಾರಿಯ ಕಣ್ಣು ಮುಂಗತ್ತಲೆಗೆ ಕಾದುಕೊಂಡು -- ಯಾವ ಕಣ್ಣೂ ನನ್ನನ್ನು ನೋಡುವದಿಲ್ಲವೆಂದು ಹೇಳುತ್ತದೆ; ಮುಖ ವನ್ನು ಮುಚ್ಚಿಕೊಳ್ಳುತ್ತಾನೆ.
ಕದಿಯಲ್ಪಟ್ಟ ನೀರುಗಳು ಸಿಹಿಯಾಗಿವೆ ರಹಸ್ಯ ದಲ್ಲಿ ತಿನ್ನುವ ರೊಟ್ಟಿಯು ರುಚಿಯಾಗಿದೆ ಎಂದು ಹೇಳುತ್ತಾಳೆ.ಆದರೆ ಸತ್ತವರು ಅಲ್ಲಿದ್ದಾರೆಂದೂ ಪಾತಾಳದ ಅಗಾಧಗಳಲ್ಲಿ ಅವಳ ಅಥಿತಿಗಳು ಇದ್ದಾ ರೆಂದೂ ಅವನಿಗೆ ತಿಳಿಯದು.
ನ್ಯಾಯಕ್ಕೋಸ್ಕರ ನಿಮ್ಮನ್ನು ನಾನು ಸವಿಾಪಿ ಸುತ್ತೇನೆ; ಆಗ ಕಣಿಹೇಳುವವರಿಗೂ ವ್ಯಭಿಚಾರಿ ಗಳಿಗೂ ಸುಳ್ಳು ಪ್ರಮಾಣಮಾಡುವವರಿಗೂ ಸಂಬಳ ದಲ್ಲಿ ಕೂಲಿಯವನಿಗೂ ವಿಧವೆಗೂ ದಿಕ್ಕಿಲ್ಲದವನಿಗೂ ಬಲಾತ್ಕಾರ ಮಾಡುವವರಿಗೂ ಅನ್ಯನ ನ್ಯಾಯವನ್ನು ತಿರಿಗಿಸಿ ಬಿಡುವವರಿಗೂ ನನಗೆ ಭಯಪಡದವರಿಗೂ ವಿರೋಧವಾಗಿ ಶೀಘ್ರವಾದ ಸಾಕ್ಷಿಗಾರನಾಗಿರು ವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
ಆದರೆ ನಿಮ್ಮೊಳಗೆ ಜಾರತ್ವವಾಗಲಿ ಯಾವ ಅಶುದ್ಧತ್ವವಾಗಲಿ ಇಲ್ಲವೆ ಲೋಭವಾಗಲಿ ಪರಿಶುದ್ಧರಿಗೆ ತಕ್ಕ ಹಾಗೆ ಇವುಗಳ ಹೆಸರನ್ನು ಒಂದು ಸಲವಾದರೂ ಎತ್ತಬಾರದು.
ಅವರು ರಹಸ್ಯವಾಗಿ ನಡಿಸುವ ಕೆಲಸ ಗಳನ್ನು ಕುರಿತು ಮಾತನಾಡುವದಾದರೂ ನಾಚಿಕೆಗೆ ಕಾರಣವಾಗಿದೆ.