ವ್ಯಭಿಚಾರಿಯ ಕಣ್ಣು ಮುಂಗತ್ತಲೆಗೆ ಕಾದುಕೊಂಡು -- ಯಾವ ಕಣ್ಣೂ ನನ್ನನ್ನು ನೋಡುವದಿಲ್ಲವೆಂದು ಹೇಳುತ್ತದೆ; ಮುಖ ವನ್ನು ಮುಚ್ಚಿಕೊಳ್ಳುತ್ತಾನೆ.
Cross references
ಆಕೆಯು ವಿಧವೆಯ ವಸ್ತ್ರಗಳನ್ನು ತೆಗೆದಿಟ್ಟು ಮುಸುಕು ಹಾಕಿ ಮುಚ್ಚಿಕೊಂಡು ತಿಮ್ನಾತಿನ ಮಾರ್ಗದಲ್ಲಿರುವ ಬಹಿರಂಗ ಸ್ಥಳದಲ್ಲಿ ಕೂತು ಕೊಂಡಳು; ಯಾಕಂದರೆ ಶೇಲಹನು ದೊಡ್ಡವನಾ ಗಿದ್ದರೂ ತನ್ನನ್ನು ಅವನಿಗೆ ಹೆಂಡತಿಯಾಗಿ ಕೊಡಲಿಲ್ಲ ವೆಂದು ನೋಡಿದಳು.
ವ್ಯಭಿಚಾರ ಮಾಡಬಾರದು.
ದಾವೀದನು ದೂತರನ್ನು ಕಳುಹಿಸಿ ಅವಳನ್ನು ಕರೆಯಿಸಿದನು. ಅವಳು ಅವನ ಬಳಿಗೆ ಬಂದಾಗ ಅವಳು ತನ್ನ ಮೈಲಿಗೆಯನ್ನು ಕಳಕೊಂಡು ಶುಚಿಯಾಗಿದ್ದದರಿಂದ ದಾವೀದನು ಅವಳ ಸಂಗಡ ಮಲಗಿದನು.
ನೀನು ಅದನ್ನು ಮರೆಯಲ್ಲಿ ಮಾಡಿದಿ; ಆದರೆ ನಾನು ಈ ಕಾರ್ಯವನ್ನು ಇಸ್ರಾಯೇಲ್ಯರೆಲ್ಲರ ಮುಂದೆಯೂ ಸೂರ್ಯನ ಮುಂದೆಯೂ ಮಾಡುವೆನು ಅಂದನು.
ಆದರೆ ನೀನು ಹೇಳುತ್ತೀ--ದೇವರು ಏನು ಬಲ್ಲನು? ಆತನು ಕಾರ್ಗತ್ತಲಿಂದ ನ್ಯಾಯತೀರಿಸುವನೋ?
ದೇವರು ಮರೆತು ಬಿಟ್ಟಿ ದ್ದಾನೆ; ತನ್ನ ಮುಖವನ್ನು ಮರೆಮಾಡುತ್ತಾನೆ; ಆತನು ಎಂದೂ ನೋಡನು ಎಂದು ತನ್ನ ಹೃದಯದಲ್ಲಿ ಹೇಳಿಕೊಂಡಿದ್ದಾನೆ.
ಕಳ್ಳನನ್ನು ನೋಡಿದರೆ ಅವನೊಂದಿಗೆ ಒಪ್ಪುತ್ತೀ; ಜಾರರ ಸಂಗಡ ನಿನ್ನ ಪಾಲು ಇದೆ.
ಅವರು-- ದೇವರು ಹೇಗೆ ಬಲ್ಲನು? ಮಹೋನ್ನತನಲ್ಲಿ ತಿಳುವಳಿಕೆ ಉಂಟೋ ಎಂದು ಅಂದುಕೊಳ್ಳುತ್ತಾರೆ.
ಕರ್ತನು ನೋಡುವದಿಲ್ಲ; ಇಲ್ಲವೆ ಯಾಕೋಬನ ದೇವರು ಲಕ್ಷಿಸುವದಿಲ್ಲ ಅನ್ನುತ್ತಾರೆ.
ಒಬ್ಬ ಸ್ತ್ರೀಯೊಂದಿಗೆ ವ್ಯಭಿಚಾರ ಮಾಡುವವನು ವಿವೇಕವಿಲ್ಲದವನಾಗಿದ್ದಾನೆ. ಅದನ್ನು ಮಾಡುವವನು ತನ್ನ ಪ್ರಾಣವನ್ನೇ ನಾಶಪಡಿಸಿಕೊಳ್ಳುವನು.
ಯುವಕರ ಮಧ್ಯದಲ್ಲಿ ತಿಳುವಳಿಕೆಯಿಲ್ಲದ ಒಬ್ಬ ಯೌವನಸ್ಥನನ್ನು ಕಂಡೆನು.
ಸಂಜೆಯ ಮೊಬ್ಬಿನಲ್ಲಿ ಗಾಡಾಂಧಕಾರದಲ್ಲಿ ಅವಳ ಮನೆಗೆ ಹೋದನು.
ಆಗ ಆತನು ನನಗೆ ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರ ಪೂರ್ವಿಕರು ಕತ್ತಲೆ ಯಲ್ಲಿ ಪ್ರತಿಯೊಬ್ಬನೂ ತನ್ನ ಕೊಠಡಿಗಳಲ್ಲಿ ಚಿತ್ರಗಳನ್ನು ಮಾಡುವದನ್ನು ನೋಡಿದೆಯಾ?--ಕರ್ತನು ನಮ್ಮನ್ನು ನೋಡುವದಿಲ್ಲ, ಕರ್ತನು ಭೂಮಿಯನ್ನು ತೊರೆದು ಬಿಟ್ಟಿದ್ದಾನೆ ಎಂದು ಹೇಳುವರು.
ಆಗ ಆತನು ನನಗೆ ಹೇಳಿದ್ದೇನಂದರೆಇಸ್ರಾಯೇಲಿನ ಮತ್ತು ಯೆಹೂದ ಮನೆತನದವರ ಅಕ್ರಮವು ಅತಿ ದೊಡ್ಡದಾಗಿದೆ; ದೇಶವು ರಕ್ತದಿಂದ ತುಂಬಿದೆ; ಪಟ್ಟಣವು ವಕ್ರತ್ವದಿಂದ ತುಂಬಿದೆ; ಯಾಕಂದರೆ ಕರ್ತನು ಭೂಮಿಯನ್ನು ತೊರೆದುಬಿಟ್ಟಿದ್ದಾನೆ; ಕರ್ತನು ನೋಡುವದಿಲ್ಲ ಎಂದು ಅವರು ಹೇಳುತ್ತಾರೆ.