Home Bibles ಆದಿಕಾಂಡ 36:24 · ಕನ್ನಡ ಬೈಬಲ್
ಆದಿಕಾಂಡ 36:24 · ಕನ್ನಡ ಬೈಬಲ್

ಸಿಬೆಯೋನನ ಮಕ್ಕಳು ಯಾರಂದರೆ: ಅಯ್ಯಾ ಮತ್ತು ಅನಾಹ ಎಂಬವರು. ತನ್ನ ತಂದೆಯಾದ ಸಿಬೆಯೋನನ ಕತ್ತೆಗಳನ್ನು ಕಾಯುವಾಗ ಅರಣ್ಯದಲ್ಲಿ ಹೇಸರಕತ್ತೆಗಳನ್ನು ಕಂಡುಕೊಂಡವನು ಈ ಅನಾಹನೇ.

Cross references

ಲೇವ್ಯಕಾಂಡ 19:19

ನೀನು ನನ್ನ ನಿಯಮಗಳನ್ನು ಕೈಕೊಳ್ಳಬೇಕು. ನಿನ್ನ ಪಶುಗಳನ್ನು ಬೇರೆ ಜಾತಿಯೊಂದಿಗೆ ಕೂಡಗೊಡಿಸಬೇಡ; ನಿನ್ನ ಹೊಲದಲ್ಲಿ ಮಿಶ್ರಿತವಾದ ಬೀಜಗಳನ್ನು ಬಿತ್ತಬೇಡ. ಇದಲ್ಲದೆ ನಾರೂ ಉಣ್ಣೆಯೂ ಕೂಡಿಸಿದ ಬಟ್ಟೆ ನಿನ್ನ ಮೇಲೆ ಇರಬಾರದು.

ದ್ವಿತೀಯೋಪದೇಶಕಾಂಡ 2:10

ಅದರೊಳಗೆ ಪೂರ್ವದಲ್ಲಿ ಏಮಿಯರು ವಾಸವಾಗಿದ್ದರು. ಅವರು ಅನಾಕ್ಯರ ಹಾಗೆ ದೊಡ್ಡವ ರಾಗಿಯೂ ಬಹಳವಾದವರಾಗಿಯೂ ಉದ್ದವಾದವ ರಾಗಿಯೂ ಇರುವ ಜನರು.

2 ಸಮುವೇಲ 13:29

ಅಬ್ಷಾಲೋ ಮನು ಆಜ್ಞಾಪಿಸಿದ ಹಾಗೆಯೇ ಅವನ ಸೇವಕರು ಅಮ್ನೋನನಿಗೆ ಮಾಡಿದರು. ಆಗ ಅರಸನ ಮಕ್ಕಳೆ ಲ್ಲರೂ ಎದ್ದು ತಮ್ಮ ತಮ್ಮ ಹೇಸರ ಕತ್ತೆಗಳನ್ನೇರಿ ಓಡಿಹೋದರು.

2 ಸಮುವೇಲ 18:9

ಆಗ ಅಬ್ಷಾಲೋಮನು ದಾವೀದನ ಸೇವಕರಿಗೆ ಎದುರಾಗಿ ಬಂದನು. ಆದರೆ ಅಬ್ಷಾಲೋಮನು ಹೇಸರ ಕತ್ತೆಯ ಮೇಲೆ ಏರಿದ್ದನು. ಆ ಹೇಸರ ಕತ್ತೆಯು ಒಂದು ದೊಡ್ಡ ಏಲಾ ಮರದ ಬಲವಾದ ಕೊಂಬೆಗಳ ಕೆಳಗೆ ಬಂದಾಗ ಅವನ ತಲೆಯು ಆ ಮರದ ಕೊಂಬೆ ಯಲ್ಲಿ ಸಿಕ್ಕಿಕೊಂಡಿತು. ಆದದರಿಂದ ಅವನು ಹತ್ತಿದ್ದ ಹೇಸರ ಕತ್ತೆಯು ಹೊರಟು ಹೋಯಿತು.

1 ಅರಸುಗಳು 1:38

ಹಾಗೆಯೇ ಯಾಜಕನಾದ ಚಾದೋಕನೂ ಪ್ರವಾದಿಯಾದ ನಾತಾನನೂ ಯೆಹೋಯಾದಾವನ ಮಗನಾದ ಬೆನಾಯನೂ ಕೆರೆತ್ಯರೂ ಪೆಲೇತ್ಯರೂ ಹೋಗಿ ಸೊಲೊಮೋನನನ್ನು ಅರಸನಾದ ದಾವೀ ದನ ಹೇಸರ ಕತ್ತೆಯ ಮೇಲೆ ಏರಿಸಿ ಗೀಹೋನಿಗೆ ಕರತಂದರು.

1 ಅರಸುಗಳು 1:44

ಇದಲ್ಲದೆ ಅರಸನು ಅವನ ಸಂಗಡ ಯಾಜಕನಾದ ಚಾದೋಕನನ್ನೂ ಪ್ರವಾದಿಯಾದ ನಾತಾನನನ್ನೂ ಯೆಹೋಯಾದಾವನ ಮಗನಾದ ಬೆನಾಯನನ್ನೂ ಕೆರೇತ್ಯರನ್ನೂ ಪೆಲೇತ್ಯರನ್ನೂ ಕಳುಹಿ ಸಿದ್ದಾನೆ.

1 ಅರಸುಗಳು 4:28

ಹೀಗೆಯೇ ಪ್ರತಿ ಮನುಷ್ಯನು ತನ್ನ ವಂತಿನ ಪ್ರಕಾರ ಕುದುರೆಗಳಿಗೋಸ್ಕರವೂ ಸವಾರಿ ಒಂಟೆಗಳಿ ಗೋಸ್ಕರವೂ ಅವುಗಳ ಸ್ಥಳಕ್ಕೆ ಜವೆಗೋಧಿಯನ್ನೂ ಹುಲ್ಲನ್ನೂ ತಂದನು.

ಜೆಕರ್ಯ 14:15

ಆ ಗುಡಾರಗಳಲ್ಲಿರುವ ಕುದುರೆ, ಹೇಸರಕತ್ತೆ, ಒಂಟೆ, ಕತ್ತೆ ಮೊದಲಾದ ಎಲ್ಲಾ ಪಶುಗಳ ಬಾಧೆಯು ಈ ಬಾಧೆಯ ಹಾಗೆಯೇ ಇರುವದು.

Interlinear

Choose Theme