ಆಗ ಲಾಬಾನನು ತನ್ನ ಕುರಿಗಳ ಉಣ್ಣೆ ಕತ್ತರಿಸುವದಕೆ ಹೋಗಿದ್ದನು. ಆದದರಿಂದ ರಾಹೇಲಳು ತನ್ನ ತಂದೆಯ ವಿಗ್ರಹಗಳನ್ನು ಕದ್ದುಕೊಂಡಳು.
Cross references
ಆದರೆ ನೀನು ನನ್ನ ತಂದೆಯ ಮನೆಗೂ ನನ್ನ ಬಂಧುಗಳ ಬಳಿಗೂ ಹೋಗಿ ನನ್ನ ಮಗನಿಗೆ ಹೆಂಡತಿಯನ್ನು ತಕ್ಕೊಳ್ಳಬೇಕೆಂದು ನನ್ನಿಂದ ಪ್ರಮಾಣ ಮಾಡಿಸಿದ್ದಾನೆ.
ಈಗ ನೀನು ನಿನ್ನ ತಂದೆಯ ಮನೆಯನ್ನು ಬಹಳವಾಗಿ ಆಶಿಸಿದ್ದರಿಂದ ಹೋಗಬೇಕಾಯಿತು. ಆದರೆ ನೀನು ನನ್ನ ದೇವರುಗಳನ್ನು ಕದ್ದದ್ದು ಯಾಕೆ ಅಂದನು.
ಆದರೆ ಯಾರ ಬಳಿಯಲ್ಲಿ ನಿನ್ನ ದೇವರುಗಳನ್ನು ಕಂಡುಕೊಳ್ಳುವಿಯೋ ಅವರು ಬದುಕದೆ ಇರಲಿ; ನನ್ನ ಬಳಿಯಲ್ಲಿ ನಿನ್ನದೇನಾದರೂ ಇದ್ದರೆ ನಮ್ಮ ಸಹೋದರರ ಮುಂದೆ ವಿಚಾರಿಸಿ ಅದನ್ನು ತೆಗೆದುಕೋ ಅಂದನು. ಆದರೆ ರಾಹೇಲಳು ಅವುಗಳನ್ನು ಕದ್ದು ಕೊಂಡದ್ದು ಯಾಕೋಬನಿಗೆ ತಿಳಿದಿರಲಿಲ್ಲ.
ಆದರೆ ರಾಹೇಲಳು ವಿಗ್ರಹಗಳನ್ನು ತಕ್ಕೊಂಡು ಒಂಟೆಯ ಸಾಮಗ್ರಿಯಲ್ಲಿಟ್ಟು ಅದರ ಮೇಲೆ ಕೂತುಕೊಂಡಳು. ಲಾಬಾನನು ಗುಡಾರವನ್ನೆಲ್ಲಾ ಹುಡುಕಿದಾಗ್ಯೂ ಅವನು ಅವುಗಳನ್ನು ಕಂಡುಕೊಳ್ಳಲಿಲ್ಲ.
ಆಗ ಯಾಕೋಬನು ತನ್ನ ಮನೆಯವರಿಗೂ ತನ್ನ ಸಂಗಡ ಇದ್ದವರೆಲ್ಲರಿಗೂ--ನಿಮ್ಮ ಮಧ್ಯದಲ್ಲಿರುವ ಅನ್ಯದೇವ ರುಗಳನ್ನು ತೆಗೆದುಹಾಕಿ ಶುದ್ಧರಾಗಿರಿ; ನೀವು ನಿಮ್ಮ ಬಟ್ಟೆಗಳನ್ನು ಬದಲಾಯಿಸಿರಿ;
ಆಗ ತಾಮಾರಳಿಗೆ--ಇಗೋ, ನಿನ್ನ ಮಾವನು ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವದಕ್ಕೆ ತಿಮ್ನಾತಿಗೆ ಹೋಗುತ್ತಿದ್ದಾನೆ ಎಂದು ತಿಳಿಸಿದಾಗ
ಯೆಹೋಶುವನು ಎಲ್ಲಾ ಜನರಿಗೆ--ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ--ಪೂರ್ವ ದಲ್ಲಿ ನಿಮ್ಮ ತಂದೆಗಳು, ಅಬ್ರಹಾಮನೂ ನಾಹೋ ರನೂ ಅವರ ತಂದೆಯಾದ ತೆರಹನೂ ನದಿಯ ಆಚೆ ವಾಸವಾಗಿದ್ದು ಅನ್ಯದೇವರುಗಳನ್ನು ಆರಾಧಿಸುತ್ತಿದ್ದರು.
ಆದರೆ ಅವನು ಆ ಹಣವನ್ನು ತನ್ನ ತಾಯಿಗೆ ತಿರಿಗಿ ಕೊಟ್ಟನು. ಆಗ ಅವನ ತಾಯಿ ಇನ್ನೂರು ಬೆಳ್ಳಿಯ ನಾಣ್ಯಗಳನ್ನು ತಕ್ಕೊಂಡು ಅಕ್ಕಸಾಲಿಗನ ಕೈಯಲ್ಲಿ ಕೊಟ್ಟಳು. ಅವನು ಅವುಗಳಿಂದ ಕೆತ್ತಿದ ವಿಗ್ರಹವನ್ನೂ ಎರಕದ ವಿಗ್ರಹ ವನ್ನೂ ಮಾಡಿದನು. ಅವು ವಿಾಕನ ಮನೆಯಲ್ಲಿದ್ದವು.
ಈ ವಿಾಕ ಎಂಬ ಮನುಷ್ಯನಿಗೆ ದೇವರುಗಳ ಮನೆ ಇದ್ದದರಿಂದ ಅವನು ಒಂದು ಏಫೋದನ್ನೂ ಪ್ರತಿಮೆಗಳನ್ನೂ ಮಾಡಿ ತನ್ನ ಕುಮಾರರಲ್ಲಿ ಒಬ್ಬನನ್ನು ಪ್ರತಿಷ್ಠೆಮಾಡಿದನು. ಅವನು ಇವನಿಗೆ ಯಾಜಕ ನಾದನು.
ಆಗ ಲಯಿಷಿನ ದೇಶವನ್ನು ಪಾಳತಿ ನೋಡಿಬಂದ ಆ ಐದು ಮಂದಿ ಮನುಷ್ಯರು ತಮ್ಮ ಸಹೋದರರರಿಗೆ ಉತ್ತರ ಕೊಟ್ಟುಈ ಮನೆಗಳಲ್ಲಿ ಏಫೋದೂ ಪ್ರತಿಮೆಗಳೂ ಕೆತ್ತಿದ ವಿಗ್ರಹವೂ ಎರಕದ ವಿಗ್ರಹವೂ ಉಂಟೆಂದು ನೀವು ಅರಿಯಿರಾ? ನೀವು ಈಗ ಮಾಡಬೇಕಾದದ್ದೇನೆಂದು ತಿಳುಕೊಳ್ಳಿರಿ ಅಂದರು.
ದೇವರ ಮನೆ ಶಿಲೋವಿ ನಲ್ಲಿ ಇರುವ ಮಟ್ಟಿಗೂ ವಿಾಕನು ಮಾಡಿದ ವಿಗ್ರಹ ವನ್ನು ಅವರು ಇಟ್ಟುಕೊಂಡಿದ್ದರು.
ತರುವಾಯ ವಿಾಕಲಳು ಒಂದು ಗೊಂಬೆಯನ್ನು ತೆಗೆದುಕೊಂಡು ಮಂಚದ ಮೇಲೆ ಮಲಗಿಸಿ ಅದರ ತಲೇ ಭಾಗದಲ್ಲಿ ಒಂದು ಹೋತದ ಉಣ್ಣೆಯ ತಲೆದಿಂಬನ್ನು ಹಾಕಿ ಅದನ್ನು ವಸ್ತ್ರದಿಂದ ಮುಚ್ಚಿದಳು.
ಕರ್ಮೆಲಿನಲ್ಲಿ ಸ್ವಾಸ್ತ್ಯಗಳಿರುವ ಮಾವೋನಿನ ವನಾದ ಒಬ್ಬ ಮನುಷ್ಯನಿದ್ದನು. ಆ ಮನುಷ್ಯನು ಬಹು ದೊಡ್ಡವನಾಗಿದ್ದನು; ಅವನಿಗೆ ಮೂರು ಸಾವಿರ ಕುರಿಗಳೂ ಸಾವಿರ ಮೇಕೆಗಳೂ ಇದ್ದವು. ಅವನು ಕರ್ಮೆಲಿನಲ್ಲಿ ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುತ್ತಿ ದ್ದನು.
ಎರಡು ವರುಷ ಪೂರ್ಣಮುಗಿದ ತರುವಾಯ ಏನಾಯಿತಂದರೆ, ಅಬ್ಷಾಲೋಮನಿಗೆ ಎಫ್ರಾಯಾಮ್ ಬಳಿಯಲ್ಲಿರುವ ಬಾಳ್‌ಹಾಚೋರಿನಲ್ಲಿ ಕುರಿಗಳ ಉಣ್ಣೆ ಕತ್ತರಿಸುವವರಿದ್ದರು. ಆದದರಿಂದ ಅಬ್ಷಾಲೋಮನು ಅರಸನ ಮಕ್ಕಳನ್ನೆಲ್ಲಾ ಔತಣಕ್ಕೆ ಕರೆದನು.
ಇದಲ್ಲದೆ ಯಾಜಕನಾದ ಹಿಲ್ಕೀಯನು ಕರ್ತನ ಮನೆಯಲ್ಲಿ ಕಂಡುಕೊಂಡ ಪುಸ್ತಕದಲ್ಲಿ ಬರೆಯಲ್ಪಟ್ಟ ನ್ಯಾಯ ಪ್ರಮಾಣದ ಮಾತುಗಳನ್ನು ಯೋಷೀಯನು ಈಡೇ ರಿಸುವ ಹಾಗೆ ಯೆಹೂದ ದೇಶದಲ್ಲಿಯೂ ಯೆರೂ ಸಲೇಮಿನಲ್ಲಿಯೂ ಕಂಡು ಹಿಡಿಯಲ್ಪಟ್ಟ ಯಕ್ಷಿಣಿ ಗಾರರನ್ನೂ ಮಂತ್ರಗಾರರನ್ನೂ ವಿಗ್ರಹಗಳನ್ನೂ ಮಣ್ಣು ದೇವರುಗಳನ್ನೂ ಎಲ್ಲಾ ಅಸಹ್ಯಕರವಾದವುಗಳನ್ನೂ ತೆಗೆದುಹಾಕಿ ಬಿಟ್ಟನು.
ಬಾಬೆಲಿನ ಅರಸನು ಮಾರ್ಗವು ಒಡೆಯುವ ಸ್ಥಳದಲ್ಲಿ (ಎರಡು ದಾರಿಯ ಮಗ್ಗುಲಲ್ಲಿ) ಶಕುನವನ್ನು ನೋಡುವದಕ್ಕೆ ನಿಂತಿದ್ದಾನೆ; ಬಾಣಗಳನ್ನು ಅಲ್ಲಾಡಿಸಿ ದನು; ಮೂರ್ತಿಗಳ ಹತ್ತಿರ ವಿಚಾರಿಸಿದನು. ಪಿತ್ತ ಚೀಲವನ್ನು ನೋಡಿದನು.
ಇಸ್ರಾಯೇಲಿನ ಮಕ್ಕಳು ಬಹಳ ದಿವಸಗಳ ವರೆಗೆ ಅರಸನಿಲ್ಲದೆ ಪ್ರಧಾ ನನಿಲ್ಲದೆ ಬಲಿ ಇಲ್ಲದೆ ವಿಗ್ರಹವಿಲ್ಲದೆ ಎಫೋದ್ ಇಲ್ಲದೆ ವಿಗ್ರಹಗಳು ಇಲ್ಲದೆ ಇರುವರು.ಆಮೇಲೆ ಇಸ್ರಾಯೇಲಿನ ಮಕ್ಕಳು ತಿರುಗಿಕೊಂಡು ಅವರ ದೇವ ರಾದ ಕರ್ತನನ್ನು ಮತ್ತು ಅವರ ಅರಸನಾದ ದಾವೀದ ನನ್ನು ಹುಡುಕಿಕೊಂಡು ಅಂತ್ಯ ದಿವಸಗಳಲ್ಲಿ ಕರ್ತನನ್ನೂ ಆತನ ದಯೆಯನ್ನೂ ಭಯದಿಂದ ಮರೆಹೋಗುವರು.