Home Bibles ☰ Books ಆದಿಕಾಂಡ 30:26 · ಕನ್ನಡ ಬೈಬಲ್
ಆದಿಕಾಂಡ 30:26 · ಕನ್ನಡ ಬೈಬಲ್

ನಾನು ಯಾರಿಗೊಸ್ಕರ ನಿನಗೆ ಸೇವೆ ಮಾಡಿದೆನೋ ಆ ನನ್ನ ಹೆಂಡತಿಯರನ್ನೂ ನನ್ನ ಮಕ್ಕಳನ್ನೂ ನನ್ನೊಂದಿಗೆ ಕಳುಹಿಸಿಕೊಡು. ನಾನು ನಿನಗೆ ಮಾಡಿದ ಸೇವೆಯನ್ನು ನೀನು ಬಲ್ಲವನಾಗಿದ್ದೀ ಅಂದನು.

Cross references

ಆದಿಕಾಂಡ 29:19

ಅದಕ್ಕೆ ಲಾಬಾನನು--ಅವಳನ್ನು ಬೇರೊಬ್ಬನಿಗೆ ಕೊಡುವದಕ್ಕಿಂತ ನಿನಗೆ ಕೊಡುವದು ಒಳ್ಳೆಯದು. ಆದದರಿಂದ ನನ್ನ ಸಂಗಡ ವಾಸವಾಗಿರು ಅಂದನು.

ಆದಿಕಾಂಡ 29:20

ಈ ಪ್ರಕಾರ ಯಾಕೋ ಬನು ರಾಹೇಲಳಿಗೋಸ್ಕರ ಏಳು ವರುಷ ಸೇವೆ ಮಾಡಿದನು. ಅವನು ಆಕೆಯನ್ನು ಪ್ರೀತಿಮಾಡಿದ್ದರಿಂದ ಏಳು ವರುಷಗಳು ಅವನಿಗೆ ಸ್ವಲ್ಪ ದಿನಗಳಾಗಿ ತೋರಿದವು.

ಆದಿಕಾಂಡ 29:30

ಇದಲ್ಲದೆ ಅವನು ರಾಹೇಲಳ ಬಳಿಗೂ ಬಂದು ಲೇಯಳಿಗಿಂತ ರಾಹೇಲಳನ್ನು ಹೆಚ್ಚು ಪ್ರೀತಿಮಾಡಿ ಇನ್ನೂ ಏಳು ವರುಷ ಅವನ ಬಳಿಯಲ್ಲಿ ಸೇವೆಮಾಡಿದನು.

ಆದಿಕಾಂಡ 30:29

ಅದಕ್ಕೆ ಯಾಕೋಬನು ಅವನಿಗೆ--ನಾನು ನಿನಗೆ ಮಾಡಿದ ಸೇವೆಯನ್ನೂ ನಿನ್ನ ಮಂದೆಯು ನನ್ನ ಬಳಿಯಲ್ಲಿ ಹೇಗೆ ಇತ್ತೆಂಬದ್ದನ್ನೂ ನೀನು ಬಲ್ಲೆ.

ಆದಿಕಾಂಡ 31:6

ನಾನು ಪೂರ್ಣ ಬಲದಿಂದ ನಿಮ್ಮ ತಂದೆಯ ಸೇವೆಮಾಡಿದ್ದು ನಿಮಗೆ ತಿಳಿದಿದೆ.

ಆದಿಕಾಂಡ 31:26

ಲಾಬಾನನು ಯಾಕೋಬನಿಗೆ--ನೀನು ಏನು ಮಾಡಿದಿ? ನನಗೆ ತಿಳಿಸದೆ ನೀನು ಕಳ್ಳನ ಹಾಗೆ ಓಡಿಬಂದಿಯಲ್ಲಾ. ನನ್ನ ಕುಮಾರ್ತೆಯರನ್ನು ಕತ್ತಿಯಿಂದ ಸೆರೆಹಿಡಿದವರ ಹಾಗೆ ತೆಗೆದುಕೊಂಡು ಬಂದಿಯಲ್ಲಾ.

ಆದಿಕಾಂಡ 31:31

ಅದಕ್ಕೆ ಯಾಕೋಬನು ಪ್ರತ್ಯುತ್ತರವಾಗಿ ಲಾಬಾನ ನಿಗೆ--ನೀನು ಒಂದು ವೇಳೆ ನಿನ್ನ ಕುಮಾರ್ತೆಯರನ್ನು ನನ್ನಿಂದ ಬಲಾತ್ಕಾರದಿಂದ ಹಿಂದಕ್ಕೆ ತಕ್ಕೊಳ್ಳುವಿ ಎಂದು ನಾನು ಅಂದುಕೊಂಡು ಭಯಪಟ್ಟೆನು.

ಆದಿಕಾಂಡ 31:38

ಈ ಇಪ್ಪತ್ತು ವರುಷ ನಾನು ನಿನ್ನ ಸಂಗಡ ಇದ್ದೆನು. ನಿನ್ನ ಕುರಿಗಳೂ ಮೇಕೆಗಳೂ ಕಂದು ಹಾಕಲಿಲ್ಲ. ನಿನ್ನ ಕುರಿ ಹೋತಗಳನ್ನು ನಾನು ತಿನ್ನಲಿಲ್ಲ.

ಹೊಶೇಯ 12:12

ಯಾಕೋಬನು ಸಿರಿಯಾ ದೇಶಕ್ಕೆ ಓಡಿಹೋದನು; ಇಸ್ರಾಯೇಲನು ಹೆಂಡತಿಯ ನಿಮಿತ್ತ ಸೇವೆಮಾಡಿ ಹೆಂಡತಿಯ ನಿಮಿತ್ತ ಕುರಿಗಳನ್ನು ಕಾದನು.

Interlinear

Choose Theme