ಅವನು ಅಲ್ಲಿ ಬಹಳ ದಿನಗಳಿದ್ದ ಮೇಲೆ ಆದದ್ದೇನಂದರೆ, ಫಿಲಿಷ್ಟಿಯರ ಅರಸನಾದ ಅಬೀಮೆಲೆ ಕನು ಕಿಟಕಿಯಿಂದ ನೋಡುತ್ತಿದಾಗ ಅಗೋ, ಇಸಾಕನು ತನ್ನ ಹೆಂಡತಿಯಾದ ರೆಬೆಕ್ಕಳ ಸಂಗಡ ಸರಸವಾಡುತ್ತಿದ್ದನು.
Cross references
ಸೀಸೆರನ ತಾಯಿ ಕಿಟಿಕಿಯಿಂದ ನೋಡಿದಳು, ಕಿಂಡಿ ಯಿಂದ ಕೂಗಿದಳು--ಅವನ ರಥವು ಬರುವದಕ್ಕೆ ಇಷ್ಟು ಆಲಸ್ಯವಾದದ್ದೇನು? ಅವನ ರಥಗಳ ಗಾಲಿ ಗಳು ಹಿಂದುಳಿದು ಇರುವದೇನು?
ನಿನ್ನ ಬುಗ್ಗೆಯು ಆಶೀರ್ವದಿಸಲ್ಪಡಲಿ; ನಿನ್ನ ಯೌವನ ಕಾಲದ ಹೆಂಡತಿಯೊಂದಿಗೆ ಆನಂದಿಸು.
ನನ್ನ ಮನೆಯ ಕಿಟಿಕಿಯ ಜಾಲರಿಯಿಂದ ದೃಷ್ಟಿ ಸುವವನಾಗಿ ಜ್ಞಾನಹೀನರಾದವರಲ್ಲಿ ನೋಡಿದಾಗ
ನಿನ್ನ ನಿರ್ಥಕವಾದ ಎಲ್ಲಾ ದಿನಗಳಲ್ಲಿ ಸೂರ್ಯನ ಕೆಳಗೆ ಆತನು ನಿನಗೆ ಕೊಟ್ಟ ಜೀವನದ ಎಲ್ಲಾ ದಿನಗಳಲ್ಲಿ ನೀನು ಪ್ರೀತಿಸುವ ನಿನ್ನ ಹೆಂಡತಿ ಯೊಡನೆ ಆನಂದದಿಂದ ವಾಸಿಸು; ಸೂರ್ಯನ ಕೆಳಗೆ ನೀನು ಪಡುವ ಕಷ್ಟದಲ್ಲಿಯೂ ಇದೇ ನಿನ್ನ ಪಾಲಾಗಿದೆ.
ನನ್ನ ಪ್ರಿಯನು ಜಿಂಕೆಯ ಹಾಗೆ ಇಲ್ಲವೆ ದುಪ್ಪಿಯ ಮರಿಯ ಹಾಗೆ ಇದ್ದಾನೆ. ಇಗೋ, ಅವನು ನಮ್ಮ ಗೋಡೆಯ ಹಿಂದೆ ನಿಂತು ಜಲಾಂತರಗಳಿಂದ ತನ್ನನ್ನು ತೋರಿಸಿ ಕಿಟಕಿಗಳಿಂದ ನೋಡುತ್ತಾನೆ.
ಯೌವನಸ್ಥನು ಕನ್ಯಾಸ್ತ್ರೀಯನ್ನು ಮದುವೆಮಾಡಿ ಕೊಳ್ಳುವ ಪ್ರಕಾರ ನಿನ್ನ ಕುಮಾರರು ನಿನ್ನನ್ನು ಮದುವೆ ಮಾಡಿಕೊಳ್ಳುವರು; ಮದಲಿಂಗನು ಮದಲಗಿತ್ತಿಯಲ್ಲಿ ಆನಂದಪಡುವ ಪ್ರಕಾರ ನಿನ್ನ ದೇವರು ನಿನ್ನಲ್ಲಿ ಆನಂದಪಡುವನು.