Home Bibles ನ್ಯಾಯಾಧಿಪತಿಗಳು 5:28 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 5:28 · ಕನ್ನಡ ಬೈಬಲ್

ಸೀಸೆರನ ತಾಯಿ ಕಿಟಿಕಿಯಿಂದ ನೋಡಿದಳು, ಕಿಂಡಿ ಯಿಂದ ಕೂಗಿದಳು--ಅವನ ರಥವು ಬರುವದಕ್ಕೆ ಇಷ್ಟು ಆಲಸ್ಯವಾದದ್ದೇನು? ಅವನ ರಥಗಳ ಗಾಲಿ ಗಳು ಹಿಂದುಳಿದು ಇರುವದೇನು?

Cross references

ನ್ಯಾಯಾಧಿಪತಿಗಳು 4:15

ಕರ್ತನು ಸೀಸೆರನನ್ನೂ ಅವನ ಎಲ್ಲಾ ರಥಗಳನ್ನೂ ಎಲ್ಲಾ ಸೈನ್ಯವನ್ನೂ ಬಾರಾಕನ ಮುಂದೆ ಕತ್ತಿಯಿಂದ ಚದರಿಸಿದನು.

2 ಅರಸುಗಳು 1:2

ಇದಲ್ಲದೆ ಅಹಜ್ಯನು ಸಮಾರ್ಯ ದಲ್ಲಿರುವ ತನ್ನ ಮೇಲು ಮಾಳಿಗೆಯ ಜಾಲರು ಕಿಟಿಕಿ ಯಿಂದ ಬಿದ್ದು ರೋಗಿಷ್ಟನಾದದರಿಂದ ಸೇವಕರನ್ನು ಕರೆದು--ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನ ಬಳಿಗೆ ಹೋಗಿ--ನಾನು ಈ ರೋಗದಿಂದ ವಾಸಿಯಾ ಗುವೇನೋ ಇಲ್ಲವೋ ಎಂದು ವಿಚಾರಿಸಲು ಅವರನ್ನು ಕಳುಹಿಸಿದನು.

ಸಾಮೇತಿಗಳು 7:6

ನನ್ನ ಮನೆಯ ಕಿಟಿಕಿಯ ಜಾಲರಿಯಿಂದ ದೃಷ್ಟಿ ಸುವವನಾಗಿ ಜ್ಞಾನಹೀನರಾದವರಲ್ಲಿ ನೋಡಿದಾಗ

ಪರಮಗೀತ 2:9

ನನ್ನ ಪ್ರಿಯನು ಜಿಂಕೆಯ ಹಾಗೆ ಇಲ್ಲವೆ ದುಪ್ಪಿಯ ಮರಿಯ ಹಾಗೆ ಇದ್ದಾನೆ. ಇಗೋ, ಅವನು ನಮ್ಮ ಗೋಡೆಯ ಹಿಂದೆ ನಿಂತು ಜಲಾಂತರಗಳಿಂದ ತನ್ನನ್ನು ತೋರಿಸಿ ಕಿಟಕಿಗಳಿಂದ ನೋಡುತ್ತಾನೆ.

ಪರಮಗೀತ 8:14

ನನ್ನ ಪ್ರಿಯನೇ, ತ್ವರೆಮಾಡು, ಜಿಂಕೆಯ ಹಾಗೆ ಇಲ್ಲವೆ ಸುಗಂಧವುಳ್ಳ ಪರ್ವತಗಳ ಮೇಲಿರುವ ದುಪ್ಪಿ ಮರಿಯ ಹಾಗೆಯೆ ಇರು.

ಯಾಕೋಬ 5:7

ಸಹೋದರರೇ, ಕರ್ತನು ಬರುವ ತನಕ ದೀರ್ಘ ಶಾಂತಿಯಿಂದಿರ್ರಿ. ವ್ಯವಸಾಯಗಾರನನ್ನು ನೋಡಿರಿ; ಅವನು ಭೂಮಿಯ ಅಮೂಲ್ಯವಾದ ಫಲಕ್ಕಾಗಿ ಕಾದಿದ್ದು ಮುಂಗಾರು ಹಿಂಗಾರು ಮಳೆಗಳು ಬರುವ ತನಕ ದೀರ್ಘಶಾಂತಿಯಿಂದಿರುವನು.

Interlinear

Choose Theme