ಹೀಗೆ ಅವರಿಬ್ಬರೂ ಅಲ್ಲಿ ಪ್ರಮಾಣಮಾಡಿದ್ದರಿಂದ ಆ ಸ್ಥಳಕ್ಕೆ ಬೇರ್ಷೆಬ ಎಂದು ಅವನು ಹೆಸರಿಟ್ಟನು.
Cross references
ಅಬ್ರಹಾಮನು ಬೆಳಿಗ್ಗೆ ಎದ್ದು ರೊಟ್ಟಿಯನ್ನೂ ನೀರಿನ ತಿತ್ತಿಯನ್ನೂ ತೆಗೆದುಕೊಂಡು ಹಾಗರಳಿಗೆ ಕೊಟ್ಟು ಅವುಗಳನ್ನು ಆಕೆಯ ಹೆಗಲಿನ ಮೇಲೆ ಇರಿಸಿ ಆ ಹುಡುಗನ ಸಂಗಡ ಅವಳನ್ನು ಕಳುಹಿಸಿಬಿಟ್ಟನು. ಆಕೆಯು ಹೋಗಿ ಬೇರ್ಷೆಬದ ಕಾಡಿನಲ್ಲಿ ಅಲೆದಾಡುವವ ಳಾದಳು.
ಅಲ್ಲಿಂದ ಅವನು ಬೇರ್ಷೆಬಕ್ಕೆ ಏರಿಹೋದನು.
ಅದಕ್ಕೆ ಅವನು ಷಿಬಾ ಎಂದು ಹೆಸರಿಟ್ಟನು. ಆದದರಿಂದ ಇಂದಿನ ವರೆಗೂ ಬೇರ್ಷೆಬ ಎಂದು ಆ ಪಟ್ಟಣಕ್ಕೆ ಹೆಸರಾಯಿತು.
ಇಸ್ರಾಯೇಲನು ತನಗಿದ್ದದ್ದನ್ನೆಲ್ಲಾ ತಕ್ಕೊಂಡು ಬೇರ್ಷೆಬಕ್ಕೆ ಬಂದು ತನ್ನ ತಂದೆಯಾದ ಇಸಾಕನ ದೇವರಿಗೆ ಬಲಿಗಳನ್ನು ಅರ್ಪಿಸಿ ದನು.
ಹಚರ್‌ಷೊವಾಲ್, ಬೇರ್ಷೆಬ, ಬಿಜ್ಯೋತ್ಯಾ
ಆಗ ಇಸ್ರಾಯೇಲ್ ಮಕ್ಕಳೆಲ್ಲರು ಹೊರಟು ಗಿಲ್ಯಾದು ಸಹಿತವಾಗಿ ದಾನ್ ಪಟ್ಟಣವು ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ ಸಭೆಯು ಒಬ್ಬ ಮನುಷ್ಯನ ಹಾಗೆ ಮಿಚ್ಪೆಯಲ್ಲಿ ಕರ್ತನ ಮುಂದೆ ಕೂಡಿಕೊಂಡಿತು.
ನಾನು ಹೇಳುವ ಆಲೋಚನೆ ಏನಂದರೆ, ದಾನಿ ನಿಂದ ಬೇರ್ಷೆಬದ ವರೆಗೂ ಇರುವ ಸಮುದ್ರದ ಮರಳಿನಷ್ಟು ಅಸಂಖ್ಯವಾದ ಇಸ್ರಾಯೇಲ್ಯರು ನಿನ್ನ ಬಳಿಯಲ್ಲಿ ಕೂಡಿಸಲ್ಪಟ್ಟ ತರುವಾಯ ನೀನೇ ಯುದ್ಧಕ್ಕೆ ಹೋಗಬೇಕು.
ಅವರು ತೂರಿನ ಭದ್ರ ಸ್ಥಳಕ್ಕೂ ಹಿವ್ವಿಯರ ಕಾನಾ ನ್ಯರ ಎಲ್ಲಾ ಪಟ್ಟಣಗಳಿಗೂ ಅಲ್ಲಿಂದ ಯೆಹೂದದ ದಕ್ಷಿಣಕ್ಕೂ ಬೇರ್ಷೆಬಕ್ಕೂ ಬಂದರು.
ಹೀಗೆಯೇ ದಾನ್ ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ ಸೊಲೊಮೋನನ ಸಮಸ್ತ ದಿವಸಗಳಲ್ಲಿ ಯೆಹೂದ ಮತ್ತು ಇಸ್ರಾಯೆಲಿನಲ್ಲಿರುವ ಪ್ರತಿ ಮನು ಷ್ಯನು ತನ್ನ ದ್ರಾಕ್ಷೇ ಗಿಡದ ಕೆಳಗೂ ತನ್ನ ಅಂಜೂರ ಗಿಡದ ಕೆಳಗೂ ಭರವಸದಿಂದ ವಾಸವಾಗಿದ್ದನು.
ಅವನು ಅದನ್ನು ಕೇಳಿ ಎದ್ದು ತನ್ನ ಪ್ರಾಣಕ್ಕೋಸ್ಕರ ಯೆಹೂದಕ್ಕೆ ಸೇರಿದ ಬೇರ್ಷೆಬಕ್ಕೆ ಹೊರಟುಹೋಗಿ ಅಲ್ಲಿ ತನ್ನ ಸೇವಕನನ್ನು ಬಿಟ್ಟನು.
ಹಚರ್ಷೂವಲಿ ನಲ್ಲಿಯೂ ಬೇರ್ಷೆಬದಲ್ಲಿಯೂ