Home Bibles ಆದಿಕಾಂಡ 21:30 · ಕನ್ನಡ ಬೈಬಲ್
ಆದಿಕಾಂಡ 21:30 · ಕನ್ನಡ ಬೈಬಲ್

ಅದಕ್ಕೆ ಅಬ್ರಹಾಮನುನಾನೇ ಈ ಬಾವಿಯನ್ನು ತೊಡಿಸಿದ್ದೇನೆಂಬದಕ್ಕೆ ಸಾಕ್ಷಿಗಾಗಿ ಈ ಏಳು ಹೆಣ್ಣು ಕುರಿಮರಿಗಳನ್ನು ನೀನು ನನ್ನ ಕೈಯಿಂದ ತೆಗೆದುಕೊಳ್ಳಬೇಕು ಅಂದನು.

Cross references

ಆದಿಕಾಂಡ 26:18

ಇದಲ್ಲದೆ ಇಸಾಕನು ತನ್ನ ತಂದೆಯಾದ ಅಬ್ರಹಾ ಮನ ದಿನಗಳಲ್ಲಿ ಅಗಿದಂಥ ಬಾವಿಗಳನ್ನು ತಿರಿಗಿ ಅಗಿದನು. ಯಾಕಂದರೆ ಅಬ್ರಹಾಮನು ಸತ್ತ ಮೇಲೆ ಫಿಲಿಷ್ಟಿಯರು ಅವುಗಳನ್ನು ಮುಚ್ಚಿದ್ದರು. ಅವುಗಳಿಗೆ ತನ್ನ ತಂದೆಯು ಕೊಟ್ಟ ಹೆಸರುಗಳ ಪ್ರಕಾರವೇ ಅವನು ಅವುಗಳಿಗೆ ಹೆಸರು ಕೊಟ್ಟನು.

ಆದಿಕಾಂಡ 31:44

ಆದದರಿಂದ ನೀನು ಈಗ ಬಾ, ನಾನೂ ನೀನೂ ಒಡಂಬಡಿಕೆಯನ್ನು ಮಾಡೋಣ; ಅದು ನನಗೂ ನಿನಗೂ ಮಧ್ಯದಲ್ಲಿ ಸಾಕ್ಷಿಯಾಗಿರಲಿ ಅಂದನು.

ಆದಿಕಾಂಡ 31:52

ನಾನು ಈ ಕುಪ್ಪೆಯನ್ನು ದಾಟಿ ನಿನ್ನ ಹತ್ತಿರ ಬರುವದಿಲ್ಲ; ನೀನು ಈ ಕುಪ್ಪೆಯನ್ನು ಮತ್ತು ಸ್ತಂಭವನ್ನು ಕೇಡಿಗಾಗಿ ದಾಟುವದಿಲ್ಲವೆಂಬದಕ್ಕೆ ಈ ಕುಪ್ಪೆಯೂ ಸ್ತಂಭವೂ ಸಾಕ್ಷಿಯಾಗಿವೆ.

ಯೆಹೋಶುವ 22:27

ನಾವು ಕರ್ತನ ಸನ್ನಿಧಿಯಲ್ಲಿ ದಹನ ಬಲಿಗಳಿಂದಲೂ ಯಜ್ಞಗಳಿಂದಲೂ ಸಮಾಧಾನದ ಬಲಿಗಳಿಂದಲೂ ಆತನನ್ನು ಸೇವಿಸುವ ಹಾಗೆಯೂ ನಮಗೂ ನಿಮಗೂ ನಮ್ಮ ತರುವಾಯ ನಮ್ಮ ಸಂತತಿ ಯವರಿಗೂ ಮಧ್ಯದಲ್ಲಿ ಸಾಕ್ಷಿ ಉಂಟಾಗುವ ಹಾಗೆ ಯಜ್ಞವೇದಿಯನ್ನು ಕಟ್ಟಿಕೊಳ್ಳುವದಕ್ಕೆ ಮಾಡಿದೆವು.

ಯೆಹೋಶುವ 24:27

ಯೆಹೋಶುವನು ಜನ ರಿಗೆಲ್ಲಾ--ಇಗೋ, ಈ ಕಲ್ಲು ನಿಮ್ಮ ಮಧ್ಯದಲ್ಲಿ ಸಾಕ್ಷಿಯಾಗಿರಲಿ. ಯಾಕಂದರೆ ಅದು ಕರ್ತನು ನಮ್ಮ ಸಂಗಡ ಹೇಳಿದ ಎಲ್ಲಾ ವಚನಗಳನ್ನು ಕೇಳಿತು. ಆದದರಿಂದ ನೀವು ನಿಮ್ಮ ದೇವರನ್ನು ಅಲ್ಲಗಳೆಯದ ಹಾಗೆ ಇದೇ ನಿಮಗೆ ಸಾಕ್ಷಿಯಾಗಿರಲಿ ಎಂದು ಹೇಳಿದನು.

Interlinear

Choose Theme