Home Bibles ☰ Books ಆದಿಕಾಂಡ 18:28 · ಕನ್ನಡ ಬೈಬಲ್
ಆದಿಕಾಂಡ 18:28 · ಕನ್ನಡ ಬೈಬಲ್

ಒಂದು ವೇಳೆ ಐವತ್ತು ನೀತಿವಂತರಲ್ಲಿ ಐದು ಕಡಿಮೆ ಇದ್ದರೆ ಆ ಐದು ಮಂದಿ ಇಲ್ಲದ್ದರಿಂದ ಆ ಪಟ್ಟಣವನ್ನು ನಾಶಮಾಡುವಿಯೋ ಎಂದು ಪ್ರತ್ಯುತ್ತರವಾಗಿ ಅಂದನು. ಆದಕ್ಕೆ ಆತನು--ನಾಲ್ವತ್ತೈದು ಮಂದಿ ಅಲ್ಲಿ ಸಿಕ್ಕಿದರೆ ನಾನು ನಾಶಮಾಡುವದಿಲ್ಲ ಅಂದನು.

Cross references

ಆದಿಕಾಂಡ 18:26

ಅದಕ್ಕೆ ಕರ್ತನು--ನನಗೆ ಸೊದೋಮ್‌ ಪಟ್ಟಣದೊಳಗೆ ಐವತ್ತು ಮಂದಿ ನೀತಿವಂತರು ಸಿಕ್ಕಿದರೆ ಅವರಿಗೊಸ್ಕರ ಆ ಸ್ಥಳವನ್ನೆಲ್ಲಾ ಉಳಿಸುವೆನು ಅಂದನು.

ಆದಿಕಾಂಡ 18:29

ಅಬ್ರಹಾಮನು ಆತನ ಸಂಗಡ ಇನ್ನೂ ಮಾತನಾಡಿ--ಒಂದು ವೇಳೆ ಅಲ್ಲಿ ನಾಲ್ವತ್ತು ಮಂದಿ ಸಿಕ್ಕಾರು ಅಂದನು. ಅದಕ್ಕೆ ಆತನು--ನಾಲ್ವತ್ತು ಮಂದಿಗೋಸ್ಕರ ಅದನ್ನು ನಾನು ನಾಶಮಾಡುವದಿಲ್ಲ ಅಂದನು.

ಅಂಕೆಗಳ ಪುಸ್ತಕ 14:17

ಈಗ ನೀನು ಹೇಳಿದ ಪ್ರಕಾರ ನನ್ನ ಕರ್ತನ ಶಕ್ತಿಯು ದೊಡ್ಡದಾಗಿರಲಿ ಎಂದು ನಾನು ಬೇಡುತ್ತೇನೆ.

1 ಅರಸುಗಳು 20:32

ಹಾಗೆಯೆ ಅವರು ಗೋಣಿಯನ್ನು ತಮ್ಮ ನಡುವುಗಳಲ್ಲಿ ಕಟ್ಟಿಕೊಂಡು ಹಗ್ಗಗಳನ್ನು ತಮ್ಮ ತಲೆ ಗಳಿಗೆ ಸುತ್ತಿಕೊಂಡು ಇಸ್ರಾಯೇಲಿನ ಅರಸನ ಬಳಿಗೆ ಬಂದು--ನನ್ನ ಪ್ರಾಣ ಬದುಕಲೆಂದು ನಿನ್ನ ಸೇವಕನಾದ ಬೆನ್ಹದದನು ಹೇಳುತ್ತಾನೆ ಅಂದರು. ಅದಕ್ಕೆ ಅವನುಅವನು ಇನ್ನೂ ಬದುಕಿರುತ್ತಾನೋ? ಅವನು ನನ್ನ ಸಹೋದರನು ಅಂದನು.

ಯೋಬ 23:3

ನಾನು ತಿಳಿದುಕೊಂಡು ಆತನನ್ನು ಕಂಡುಕೊಂಡರೆ ಎಷ್ಟೋ ಒಳ್ಳೇದು! ಆತನ ಪೀಠದ ತನಕ ಬರುವೆನು.

Interlinear

Choose Theme