Home Bibles ಆದಿಕಾಂಡ 18:26 · ಕನ್ನಡ ಬೈಬಲ್
ಆದಿಕಾಂಡ 18:26 · ಕನ್ನಡ ಬೈಬಲ್

ಅದಕ್ಕೆ ಕರ್ತನು--ನನಗೆ ಸೊದೋಮ್‌ ಪಟ್ಟಣದೊಳಗೆ ಐವತ್ತು ಮಂದಿ ನೀತಿವಂತರು ಸಿಕ್ಕಿದರೆ ಅವರಿಗೊಸ್ಕರ ಆ ಸ್ಥಳವನ್ನೆಲ್ಲಾ ಉಳಿಸುವೆನು ಅಂದನು.

Cross references

ಯೆಶಾಯ 6:13

ಆದರೆ ಹತ್ತನೆಯ ಪಾಲು ಉಳಿದಿದ್ದರೂ ಸಹ ಅದು ಹಿಂತಿರುಗುವದ ರಿಂದ ಅದನ್ನು ತಿಂದು ಬಿಡುವದು; ಏಲಾಮರವೂ ಓಕ್‌ ಮರವೂ ತಮ್ಮ ಎಲೆಗಳನ್ನು ಬಿಡುವಾಗ ತಮ್ಮ ಸಾರವು ತಮ್ಮೊಳಗೆ ಇರುವಂತೆಯೇ ಪರಿಶುದ್ಧ ಸಂತಾನವು ಅದರ ಆಧಾರವಾಗಿರುವದು ಎಂದು ಉತ್ತರ ಕೊಟ್ಟನು.

ಯೆಶಾಯ 10:22

ತನ್ನ ಜನರಾದ ಇಸ್ರಾಯೇಲ್ಯರು ಸಮುದ್ರದ ಮರಳಿನಂತೆ ಇದ್ದರೂ ಅವರಲ್ಲಿ ಉಳಿದವರು ಮಾತ್ರ ಹಿಂತಿರು ಗುವರು; ನಾಶವಾಗುವದಕ್ಕೆ ವಿಧಿಸಲ್ಪಟ್ಟದ್ದು ನೀತಿ ಯೊಂದಿಗೆ ತುಂಬಿ ತುಳುಕುವದು.

ಯೆಶಾಯ 19:24

ಆ ದಿನದಲ್ಲಿ ಇಸ್ರಾಯೇಲು ಐಗುಪ್ತ್ಯರ ಸಂಗ ಡಲೂ ಅಶ್ಶೂರ್ಯರ ಸಂಗಡಲೂ ಮೂರನೆಯ ದಾಗಿ ದೇಶದ ಮಧ್ಯದಲ್ಲಿ ಆಶೀರ್ವಾದವಾಗಿರುವದು.ನನ್ನ ಪ್ರಜೆಯಾದ ಐಗುಪ್ತಕ್ಕೂ ನನ್ನ ಕೈಗಳ ಕೆಲಸ ವಾದ ಅಶ್ಶೂರ್ಯಕ್ಕೂ ನನ್ನ ಸ್ವಾಸ್ತ್ಯವಾದ ಇಸ್ರಾಯೇ ಲಿಗೂ ನಿಮಗೆ ಆಶೀರ್ವಾದ ಎಂದು ಹೇಳಿ ಅವರಿಗೆ ಆಶೀರ್ವಾದ ಕೊಡುವನು.

ಯೆಶಾಯ 65:8

ಕರ್ತನು ಹೇಳುವದೇನಂದರೆ--ದ್ರಾಕ್ಷೇಗೊನೆ ಯಲ್ಲಿ ಹೊಸದ್ರಾಕ್ಷಾರಸ ಕಂಡುಕೊಳ್ಳುವದನ್ನು ಒಬ್ಬನು ನೋಡಿ--ಕೆಡಿಸಬೇಡ, ಅದರಲ್ಲಿ ಆಶೀರ್ವಾದ ಉಂಟೆಂದು ಹೇಳುವದು ಹೇಗೋ ಹಾಗೆಯೇ ನನ್ನ ಸೇವಕರಿಗೋಸ್ಕರ ಅವರನ್ನೆಲ್ಲಾ ನಾನು ಕೆಡಿಸಿ ಬಿಡದ ಹಾಗೆ ಮಾಡುವೆನು.

ಯೆರೆಮಿಯ 5:1

ಓ ಬೆನ್ಯಾವಿಾನನ ಮಕ್ಕಳೇ! ಯೆರೂಸಲೇಮಿನೊಳಗಿಂದ ಓಡಿಹೋಗುವದಕ್ಕೆ ನೀವು ಕೂಡಿಕೊಳ್ಳಿರಿ, ತೆಕೋವದಲ್ಲಿ ತುತೂರಿ ಊದಿರಿ; ಬೇತ್‌ಹಕ್ಕೆರೆಮಿನಲ್ಲಿ ಬೆಂಕಿಯ ಗುರುತನ್ನು ಹಚ್ಚಿರಿ; ಯಾಕಂದರೆ ಕೇಡೂ ದೊಡ್ಡ ನಾಶನವೂ ಉತ್ತರದ ಕಡೆಯಿಂದ ತೋರುತ್ತವೆ.

ಯೆಹೆಜ್ಕೇಲ 22:30

ಬೇಲಿ ಕಟ್ಟುವ ಮನುಷ್ಯನನ್ನು ದೇಶಕ್ಕೋಸ್ಕರ ನಾನು ಅದನು ನಾಶಮಾಡದ ಹಾಗೆ ಪೌಳಿಯ ಒಡಕಿನಲ್ಲಿ ನಿಲ್ಲತಕ್ಕ ವನನ್ನು ಹುಡುಕಿದೆನು, ಆದರೆ ಸಿಕ್ಕಲಿಲ್ಲ.ಆದದ ರಿಂದ ನನ್ನ ರೋಷವನ್ನು ಅವರ ಮೇಲೆ ಸುರಿಸಿದ್ದೇನೆ; ನನ್ನ ಸಿಟ್ಟಿನ ಬೆಂಕಿಯಿಂದ ಅವರನ್ನು ಸಂಹರಿಸಿದ್ದೇನೆ; ಅವರ ಮಾರ್ಗವನ್ನು ಅವರ ತಲೆಗಳ ಮೇಲೆ ಮುಯ್ಯಿ ತೀರಿಸಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ.

ಮತ್ತಾಯ 24:22

ಆ ದಿವಸಗಳು ಕಡಿಮೆ ಮಾಡಲ್ಪಡದಿದ್ದರೆ ಯಾವನೂ ಉಳಿಯು ವದಿಲ್ಲ; ಆದರೆ ಆಯಲ್ಪಟ್ಟವರಿಗಾಗಿ ಆ ದಿವಸಗಳು ಕಡಿಮೆ ಮಾಡಲ್ಪಡುವವು.

Interlinear

Choose Theme