ಪೂರ್ವದಲ್ಲಿ ಹವ್ರಾನ್, ದಮಸ್ಕ, ಗಿಲ್ಯಾದ್ ಇವು ಗಳಿಗೂ ಇಸ್ರಾಯೇಲ್ ದೇಶಕ್ಕೂ ಮಧ್ಯೆ ಯೊರ್ದನ್ ಹೊಳೆಯ ಮೇರೆಯಿಂದ ಮೂಡಣ ಸಮುದ್ರದಿಂದ ನೀವು ಅಳೆಯಬೇಕು; ಇದೇ ಮೂಡಣ ಮೇರೆಯಾ ಗಿದೆ.
Cross references
ಲೋಟನು ತನ್ನ ಕಣ್ಣುಗಳನ್ನು ಎತ್ತಿ ಯೊರ್ದನಿನ ಮೈದಾನವನ್ನೆಲ್ಲಾ ನೋಡಿದನು. ಯಾಕಂದರೆ ಕರ್ತನು ಸೊದೋಮನ್ನೂ ಗೊಮೋರ ವನ್ನೂ ನಾಶಮಾಡುವದಕ್ಕಿಂತ ಮುಂಚೆ ಅದೆಲ್ಲಾ ಚೋಗರಿನ ವರೆಗೆ ನೀರಾವರಿಯಾಗಿದ್ದು ಕರ್ತನ ತೋಟದಂತೆಯೂ ಐಗುಪ್ತದೇಶದಂತೆಯೂ ಇತ್ತು.
ಆಗ ಅವನು ತನ್ನ ಸಹೋದರರನ್ನು ಕರಕೊಂಡು ಅವನನ್ನು ಬೆನ್ನಟ್ಟಿ ಏಳು ದಿನ ಪ್ರಯಾಣಮಾಡಿ ಗಿಲ್ಯಾದ್ ಪರ್ವತದಲ್ಲಿ ಅವನನ್ನು ಸಂಧಿಸಿದನು.
ಆ ಕುಪ್ಪೆಗೆ ಲಾಬಾನನು ಯಗರಸಾಹದೂತ ಎಂದು ಹೆಸರಿಟ್ಟನು; ಯಾಕೋ ಬನು ಗಲೇದ್ ಎಂದೂ ಹೆಸರಿಟ್ಟನು;
ಇದಲ್ಲದೆ ರೂಬೇನನ ಮಕ್ಕಳಿಗೂ ಗಾದನ ಮಕ್ಕಳಿಗೂ ಬಹಳ ಅಧಿಕವಾದ ಪಶುಗಳು ಇದ್ದವು; ಅವರು ಯಗ್ಜೇರೂ ಗಿಲ್ಯಾದೂ ಎಂಬ ದೇಶ ಗಳನ್ನು ನೋಡಿದಾಗ ಅಗೋ, ಆ ಸ್ಥಳವು ಪಶುಗಳ ಸ್ಥಳವಾಗಿತ್ತು.
ಆ ವರುಷ ಮೊದಲುಗೊಂಡ ಅವರು ಹದಿನೆಂಟು ವರುಷ ಯೊರ್ದನಿಗೆ ಆಚೆ ಗಿಲ್ಯಾದಿನಲ್ಲಿ ಅಮೋರಿಯರ ದೇಶದಲ್ಲಿರುವ ಇಸ್ರಾಯೇಲ್ ಮಕ್ಕಳ ನ್ನೆಲ್ಲಾ ಬಾಧಿಸಿ ಕುಂದಿಸಿದರು.
ಇಗೋ, ನದಿಯಲ್ಲಿ ಅವನು ಕುಡಿಯುತ್ತಾನೆ. ಅವಸರ ಮಾಡನು. ಯೊರ್ದನ್ ತನ್ನ ಬಾಯಿಯಲ್ಲಿ ಎಳೆಯುವಂತೆ ಅದು ಭರವಸೆ ಇಟ್ಟಿದೆ.ಅದು ಅದನ್ನು ತನ್ನ ಕಣ್ಣುಗಳಿಂದ ತೆಗೆದುಬಿಡುತ್ತದೆ; ಅದರ ಮೂಗು ಉರ್ಲುಗಳಿಂದ ತಿವಿಯುತ್ತದೆ.
ಆದರೆ ಉತ್ತರ ದಿಕ್ಕಿನ ಸೈನ್ಯವನ್ನು ನಿಮಗೆ ದೂರಮಾಡಿ ಅವನನ್ನು ಒಣ ಭೂಮಿಗೂ ಅರಣ್ಯಕ್ಕೂ ಅವನ ಮುಂಭಾಗವನ್ನು ಪೂರ್ವದ ಸಮುದ್ರಕ್ಕೂ ಅವನ ಹಿಂಭಾಗವನ್ನು ಪಶ್ಚಿಮ ಸಮು ದ್ರಕ್ಕೂ ಓಡಿಸಿ ಬಿಡುವೆನು; ಅವನ ದುರ್ವಾಸನೆಯು ಏರುವದು; ಅವನ ನಾತವು ಏರುವದು; ಅವನು ದೊಡ್ಡದಾದವುಗಳನ್ನು ಮಾಡಿದ್ದಾನೆ.