ಆದಿಕಾಂಡ 31:23 · ಕನ್ನಡ ಬೈಬಲ್
ಆಗ ಅವನು ತನ್ನ ಸಹೋದರರನ್ನು ಕರಕೊಂಡು ಅವನನ್ನು ಬೆನ್ನಟ್ಟಿ ಏಳು ದಿನ ಪ್ರಯಾಣಮಾಡಿ ಗಿಲ್ಯಾದ್ ಪರ್ವತದಲ್ಲಿ ಅವನನ್ನು ಸಂಧಿಸಿದನು.
Cross references
ಆದಿಕಾಂಡ 13:8
ಅಬ್ರಾಮನು ಲೋಟನಿಗೆ--ನನಗೂ ನಿನಗೂ ನನ್ನ ದನಕಾಯುವವರಿಗೂ ನಿನ್ನ ದನಕಾಯುವವರಿಗೂ ಜಗಳವಿರಬಾರದು; ನಾವು ಸಹೋದರರು.
ಆದಿಕಾಂಡ 24:27
ನನ್ನ ಯಜಮಾನನಾದ ಅಬ್ರಹಾಮನ ಕರ್ತನಾದ ದೇವರು ಸ್ತುತಿಹೊಂದಲಿ; ಆತನು ನನ್ನ ಯಜಮಾನನನ್ನು ಅನಾಥನನ್ನಾಗಿ ಬಿಡದೆ ತನ್ನ ಕೃಪೆಯನ್ನೂ ಸತ್ಯವನ್ನೂ ತೋರಿಸಿದ್ದಾನೆ. ನಾನು ಮಾರ್ಗದಲ್ಲಿರುವಾಗ ಕರ್ತನು ನನ್ನನ್ನು ನನ್ನ ಯಜಮಾನನ ಸಹೋದರನ ಮನೆಗೆ ನಡಿಸಿದ್ದಾನೆ ಅಂದನು.
ನಿರ್ಗಮಕಾಂಡ 2:11
ಆ ದಿನಗಳಲ್ಲಿ ಮೋಶೆಯು ದೊಡ್ಡವನಾದ ಮೇಲೆ ತನ್ನ ಸಹೋದರರ ಬಳಿಗೆ ಹೋಗಿ ಅವರ ಬಿಟ್ಟೀ ಕೆಲಸಗಳನ್ನು ನೋಡುತ್ತಿದ್ದನು. ಆಗ ತನ್ನ ಸಹೋದರರಲ್ಲಿ ಒಬ್ಬನಾದ ಇಬ್ರಿಯನನ್ನು ಒಬ್ಬ ಐಗುಪ್ತ್ಯನು ಹೊಡೆಯುವದನ್ನು ಕಂಡನು.
ನಿರ್ಗಮಕಾಂಡ 2:13
ಎರಡನೇ ದಿನ ಅವನು ಮತ್ತೆ ಹೊರಗೆ ಹೋದಾಗ ಇಗೋ, ಇಬ್ರಿಯರಾದ ಇಬ್ಬರು ಮನುಷ್ಯರು ಜಗಳವಾಡು ತ್ತಿದ್ದರು. ತಪ್ಪು ಮಾಡಿದವನಿಗೆ ಅವನು--ಯಾಕೆ ನಿನ್ನ ಜೊತೆಯವನನ್ನು ಹೊಡೆಯುತ್ತೀ ಅಂದನು.