ಇಸ್ರಾಯೇಲ್ಯರ ಮನೆ ತನದವರೊಂದಿಗೆ ಮಾತನಾಡಿ ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳು--ಇಗೋ, ನಾನು ನನ್ನ ಪರಿಶುದ್ಧ ಸ್ಥಳವನ್ನೂ ನಿಮ್ಮ ಬಲದ ಶ್ರೇಷ್ಠತ್ವವನ್ನೂ ನಿಮ್ಮ ನೇತ್ರಾನಂದಕರವಾದದ್ದನ್ನೂ ನಿಮ್ಮ ಮನಸ್ಸು ಅಭಿಲಾಷಿಸುವದನ್ನೂ ನಾನು ಅಪವಿತ್ರಪಡಿಸುವೆನು; ನೀವು ಬಿಟ್ಟಿರುವ ನಿಮ್ಮ ಕುಮಾರರೂ ಕುಮಾರ್ತೆಯರೂ ಕತ್ತಿಯಿಂದ ಬೀಳುವರು.
Cross references
ಅನ್ಯ ದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ ನಾನು ಆಗ ಇಸ್ರಾಯೇಲಿಗೆ ಕೊಟ್ಟ ಭೂಮಿಯಲ್ಲಿಂದ ಅವ ರನ್ನು ಕಡಿದುಬಿಟ್ಟು ನನ್ನ ಹೆಸರಿಗೋಸ್ಕರ ಪರಿಶುದ್ಧ ಮಾಡಿದ ಈ ಮಂದಿರವನ್ನು ನನ್ನ ಎದುರಿನಿಂದ ತೆಗೆದು ಬಿಡುವೆನು.
ಒಂದ ನ್ನೇ ಕರ್ತನಿಂದ ಬಯಸಿದೆನು, ಅದನ್ನೇ ಹುಡುಕುವೆನು; ಕರ್ತನ ರಮ್ಯತೆಯನ್ನು ದೃಷ್ಟಿಸುವದೂ ಆತನ ಮಂದಿರ ದಲ್ಲಿ ವಿಚಾರಿಸುವದೂ ನನ್ನ ಜೀವನದ ದಿನಗಳಲ್ಲೆಲ್ಲಾ ಕರ್ತನ ಆಲಯದಲ್ಲಿ ವಾಸಮಾಡುವದೂ ಆಗಿದೆ.
ನಿನ್ನ ಪರಿಶುದ್ಧ ಆಲಯದಲ್ಲಿ ಬೆಂಕಿ ಹಚ್ಚುತ್ತಾರೆ; ನಿನ್ನ ಹೆಸರಿನ ನಿವಾಸವನ್ನು ಭೂಮಿಗೆ ಕೆಡವಿ ಹೊಲೆ ಮಾಡುತ್ತಾರೆ.
ದೇವರೇ, ಅನ್ಯಜನಾಂಗಗಳು ನಿನ್ನ ಬಾಧ್ಯತೆಯೊಳಗೆ ಬಂದು, ನಿನ್ನ ಪರಿಶುದ್ಧ ಮಂದಿರವನ್ನು ಅಪವಿತ್ರ ಮಾಡಿ, ಯೆರೂಸಲೇಮನ್ನು ಹಾಳು ದಿಬ್ಬಗಳಾಗಿ ಮಾಡಿದ್ದಾರೆ.
ಸೈನ್ಯಗಳ ಓ ಕರ್ತನೇ, ನಿನ್ನ ನಿವಾಸಗಳು ಎಷ್ಟೋ ರಮ್ಯವಾಗಿವೆ!
ಸೈನ್ಯಗಳ ಓ ಕರ್ತನೇ, ನನ್ನ ಅರಸನೇ, ನನ್ನ ದೇವರೇ, ಹೌದು ಗುಬ್ಬಿಯು ಮನೆಯನ್ನೂ ಬಾನಕ್ಕೀಯು ತನ್ನ ಮರಿಗ ಳನ್ನಿಡುವ ಗೂಡನ್ನೂ ನಿನ್ನ ಬಲಿಪೀಠಗಳ ಬಳಿಯಲ್ಲಿ ಕಂಡುಕೊಂಡವೆ.
ಘನವೂ ಪ್ರಭೆಯೂ ಆತನ ಮುಂದೆ ಅವೆ; ಬಲವೂ ಸೌಂದರ್ಯವೂ ಆತನ ಪರಿಶುದ್ಧ ಸ್ಥಳದಲ್ಲಿ ಅವೆ.
ಕರ್ತನನ್ನೂ ಆತನ ಬಲವನ್ನೂ ಹುಡುಕಿರಿ. ಆತನ ಮುಖ ವನ್ನು ಯಾವಾಗಲೂ ಹುಡುಕಿರಿ.
ಓ ಕರ್ತನೇ, ನೀನು ಬಲವುಳ್ಳ ನಿನ್ನ ಮಂಜೂಷದೊಂದಿಗೆ ನಿನ್ನ ವಿಶ್ರಾಂತಿಗೆ ಎದ್ದೇಳು.
ಆದರೆ ಕರ್ತನನ್ನು ಬಿಟ್ಟವರೇ, ನೀವು ನನ್ನ ಪರಿ ಶುದ್ಧ ಪರ್ವತವನ್ನು ಮರೆತವರೇ, ಸೈನ್ಯಕ್ಕೆ ಮೇಜನ್ನು ಸಿದ್ಧಮಾಡಿ ಅವರಿಗೆ ಪಾನದರ್ಪಣೆ ಮಾಡುವವರೇ ಆಗಿದ್ದೀರಿ.
ನನ್ನ ಹೆಸರಿನಲ್ಲಿ ಕರೆಯಲ್ಪಟ್ಟ ಈ ಆಲಯವು ನಿಮ್ಮ ಕಣ್ಣುಗಳಲ್ಲಿ ಕಳ್ಳರ ಗವಿಯಾಯಿತೋ? ಇಗೋ, ನಾನೇ ಅದನ್ನು ನೋಡಿದ್ದೇನೆಂದು ಕರ್ತನು ಅನ್ನುತ್ತಾನೆ.
ನಾವು ಯಾಕೆ ಸುಮ್ಮನೆ ಕೂತುಕೊಳ್ಳುವದು? ನೀವು ಕೂಡಿಕೊಳ್ಳಿರಿ, ನಾವು ಕೋಟೆಯುಳ್ಳ ಪಟ್ಟಣಗಳಲ್ಲಿ ಪ್ರವೇಶಿಸೋಣ, ಅಲ್ಲಿ ಮೌನವಾಗಿರೋಣ. ನಾವು ನಮ್ಮ ಕರ್ತನಿಗೆ ವಿರೋಧ ವಾಗಿ ಪಾಪಮಾಡಿದ ಕಾರಣ ನಮ್ಮ ದೇವರಾದ ಕರ್ತನು ನಮ್ಮನ್ನು ಮೌನವಾಗಿ ಮಾಡಿ ನಮಗೆ ವಿಷದ ನೀರನ್ನು ಕುಡಿಯಕೊಟ್ಟಿದ್ದಾನೆ.
ಕುರುಬರು ಪಶು ಗಳಂತಾದರು; ಅವರು ಕರ್ತನನ್ನು ಹುಡುಕಲಿಲ್ಲ, ಆದದರಿಂದ ಅವರು ಸಫಲವಾಗುವದಿಲ್ಲ; ಅವರ ಮಂದೆಗಳೆಲ್ಲಾ ಚದರಿಸಲ್ಪಡುವವು.
ಹೊಲದಲ್ಲಿರುವ ನನ್ನ ಪರ್ವತವೇ, ನಿನ್ನ ಬದುಕನ್ನೂ ಎಲ್ಲಾ ಬೊಕ್ಕಸಗಳನ್ನೂ ಎಲ್ಲಾ ಪ್ರಾಂತ್ಯಗಳಲ್ಲಿ ಪಾಪಕ್ಕಾಗಿರುವ ನಿನ್ನ ಉನ್ನತ ಸ್ಥಳಗಳನ್ನೂ ನಾನು ಕೊಳ್ಳೆಗೆ ಒಪ್ಪಿಸುವೆನು.
ವೈರಿಯು ಆಕೆಯ ಎಲ್ಲಾ ರಮ್ಯವಾದ ವಸ್ತುಗಳ ಮೇಲೆ ತನ್ನ ಕೈ ಚಾಚಿದ್ದಾನೆ. ನಿನ್ನ ಸಭೆಯಲ್ಲಿ ಸೇರ ಬಾರದೆಂದು ನೀನು ಆಜ್ಞಾಪಿಸಿದ ಅನ್ಯ ಜನಾಂಗಗಳು ತನ್ನ ಪರಿಶುದ್ಧ ಸ್ಥಳದಲ್ಲಿ ಸೇರಿರುವದನ್ನು ನೋಡಿದ್ದಾಳೆ.
ಕರ್ತನು ಹೇಗೆ ತನ್ನ ಕೋಪದಲ್ಲಿ ಮೇಘದಿಂದ ಚೀಯೋನಿನ ಮಗಳನ್ನು ಮುಚ್ಚಿ, ಇಸ್ರಾಯೇಲಿನ ಸೌಂದರ್ಯವನ್ನು ಆಕಾಶದಿಂದ ಭೂಮಿಗೆ ಎಸೆದು ತನ್ನ ಕೋಪದ ದಿನದಲ್ಲಿ ತನ್ನ ಪಾದಪೀಠವನ್ನು ಜ್ಞಾಪಕಮಾಡಿಕೊಳ್ಳಲಿಲ್ಲಾ!
ಆತನು ತನ್ನ ಗುಡಾರವನ್ನು ತೋಟದಂತೆ ಬಲಾತ್ಕಾರವಾಗಿ ತೆಗೆದುಹಾಕಿದ್ದಾನೆ. ಆತನು ತನ್ನ ಸಭಾಸ್ಥಾನಗಳನ್ನು ನಾಶಮಾಡಿದ್ದಾನೆ; ಕರ್ತನು ಚೀಯೋನಿನಲ್ಲಿ ಪವಿತ್ರ ಹಬ್ಬಗಳನ್ನೂ ಸಬ್ಬತ್ತನ್ನೂ ಮರೆತುಬಿಡುವಂತೆ ಮಾಡಿದ್ದಾನೆ, ತನ್ನ ಕೋಪದ ಉರಿಯಲ್ಲಿ ಅರಸನನ್ನೂ ಯಾಜಕನನ್ನೂ ತುಚ್ಛೀಕರಿ ಸಿದ್ದಾನೆ.
ಎಳೇ ಪ್ರಾಯದವರೂ ಮುದುಕರೂ ಬೀದಿಗಳಲ್ಲಿ ಬಿದ್ದಿದ್ದಾರೆ; ನನ್ನ ಕನ್ಯೆಯರೂ ಯೌವನಸ್ಥರೂ ಕತ್ತಿಯಿಂದ ಹತರಾಗಿದ್ದಾರೆ; ನಿನ್ನ ಕೋಪದ ದಿನದಲ್ಲಿ ನೀನು ಅವರನ್ನು ಸಾಯಿಸಿರುವಿ; ಕನಿಕರಿಸದೆ ಕೊಂದುಹಾಕಿ ಬಿಟ್ಟಿದ್ದೀ.ಪರಿಶುದ್ಧ ದಿನದಲ್ಲಿ ಆದ ಹಾಗೆ ಸುತ್ತಲೂ ನನ್ನ ಭಯಾನಕಗಳನ್ನು ನೀನು ಕರೆದಿರುವಿ, ಆದರೆ ಕರ್ತನ ಕೋಪದ ದಿನದಲ್ಲಿ ತಪ್ಪಿಸಿಕೊಂಡು ಉಳಿದವನು ಒಬ್ಬನೂ ಇಲ್ಲ; ನಾನು ಸಾಕಿ ಬೆಳೆಸಿದವರನ್ನು ನನ್ನ ಶತ್ರುವು ನಿರ್ಮೂಲ ಮಾಡಿದ್ದಾನೆ.
ಅವನ ಆಭರಣದ ಸೌಂದರ್ಯವಾ ದರೋ ಅವನು ಅದನ್ನು ಘನತೆಗಾಗಿ ಇಟ್ಟನು. ಆದರೆ ಅವರು ತಮ್ಮ ಅಸಹ್ಯಗಳ ವಿಗ್ರಹಗಳನ್ನೂ ಹೇಸಿಗೆ ಗಳನ್ನೂ ಅದರಲ್ಲಿ ಮಾಡಿದ್ದರಿಂದ ಅದನ್ನು ನಾನು ಅವರಿಂದ ದೂರಮಾಡಿದ್ದೇನೆ.
ನನ್ನ ಮುಖವನ್ನು ನಾನು ಅವರ ಕಡೆಯಿಂದ ತಿರುಗಿಸುವೆನು; ನನ್ನ ರಹಸ್ಯ ಸ್ಥಳವನ್ನು ಅಪವಿತ್ರಪಡಿಸುವರು. ದರೋಡೆ ಕೋರರು ಅದರಲ್ಲಿ ಸೇರಿ ಅದನ್ನು ಅಪವಿತ್ರ ಪಡಿಸುವರು.
ಆತನು ಅವರಿಗೆ--ಆಲಯವನ್ನು ಅಶುದ್ಧ ಮಾಡಿರಿ, ಹತರಾದವರಿಂದ ಅಂಗಳಗಳನ್ನು ತುಂಬಿಸಿ, ಹೊರಡಿರಿ ಎಂದು ಹೇಳಿದನು. ಅವರು ಹೊರಟು ನಗರದಲ್ಲಿದ್ದವರನ್ನು ಹತಮಾಡಿದರು.
ಇದಲ್ಲದೆ ನನ್ನ ಅಸೂಯೆಯನ್ನು ನಿನಗೆ ವಿರುದ್ಧವಾಗಿ ಬರಮಾಡುವೆನು; ಅವರು ನಿನ್ನಲ್ಲಿ ಕೋಪತೀರಿಸಿ ಕೊಳ್ಳುವರು; ನಿನ್ನ ಮೂಗನ್ನೂ ಕಿವಿಗಳನ್ನೂ ತೆಗೆದು ಹಾಕುವರು; ನಿನ್ನಲ್ಲಿ ಉಳಿದವರು ಕತ್ತಿಯಿಂದ ಬೀಳು ವರು; ನಿನ್ನ ಗಂಡು ಹೆಣ್ಣು ಮಕ್ಕಳನ್ನು ಅಪಹರಿಸುವರು; ನಿನ್ನಲ್ಲಿ ಉಳಿದವರೆಲ್ಲರೂ ಅಗ್ನಿಗೆ ಆಹುತಿಯಾಗುವರು.
ಆ ಸಂಘದವರು ಅವರ ಮೇಲೆ ಕಲ್ಲೆಸೆದು ತಮ್ಮ ಕತ್ತಿಗಳಿಂದ ಕೊಯ್ದು ಅವರ ಕುಮಾರರನ್ನೂ ಕುಮಾರ್ತೆಯರನ್ನೂ ಕೊಂದು ಹಾಕಿ ಬೆಂಕಿಯಿಂದ ಅವರ ಮನೆಗಳನ್ನೆಲ್ಲಾ ಸುಟ್ಟು ಬಿಡುವರು.
ಮನುಷ್ಯಪುತ್ರನೇ, ಇಗೋ, ಒಂದೇ ಏಟಿನಿಂದ ನೇತ್ರಾನಂದವಾಗಿರುವದನ್ನು ನಿನ್ನಿಂದ ತೆಗೆಯುತ್ತೇನೆ; ಆದರೆ ನೀನು ದುಃಖಪಡಬೇಡ, ಅಳಬೇಡ, ನಿನ್ನ ಕಣ್ಣೀರು ಹರಿದು ಹೋಗದಿರಲಿ.
ಅವನು ಕೂಡಿಸುವ ಸೈನ್ಯವು ಆಶ್ರಯ ದುರ್ಗವಾದ ಪವಿತ್ರಾಲಯವನ್ನು ಹೊಲೆಗೆಡಿಸಿ, ನಿತ್ಯ ಯಜ್ಞವನ್ನು ನೀಗಿಸಿ, ಹಾಳು ಮಾಡುವ ಅಸಹ್ಯವಾದವುಗಳನ್ನು ಪ್ರತಿಷ್ಠಿಸುವದು.
ಸುಳ್ಳು ಸಾಕ್ಷಿಗಳನ್ನು ನಿಲ್ಲಿಸ ಲಾಗಿ ಅವರು--ಈ ಮನುಷ್ಯನು ಈ ಪರಿಶುದ್ಧ ಸ್ಥಳಕ್ಕೂ ನ್ಯಾಯಪ್ರಮಾಣಕ್ಕೂ ವಿರುದ್ಧವಾಗಿ ದೂಷಣೆಯ ಮಾತುಗಳನ್ನಾಡುವದನ್ನು ನಿಲ್ಲಿಸುವದೇ ಇಲ್ಲ.