Home Bibles ಯೆಹೆಜ್ಕೇಲ 9:7 · ಕನ್ನಡ ಬೈಬಲ್
ಯೆಹೆಜ್ಕೇಲ 9:7 · ಕನ್ನಡ ಬೈಬಲ್

ಆತನು ಅವರಿಗೆ--ಆಲಯವನ್ನು ಅಶುದ್ಧ ಮಾಡಿರಿ, ಹತರಾದವರಿಂದ ಅಂಗಳಗಳನ್ನು ತುಂಬಿಸಿ, ಹೊರಡಿರಿ ಎಂದು ಹೇಳಿದನು. ಅವರು ಹೊರಟು ನಗರದಲ್ಲಿದ್ದವರನ್ನು ಹತಮಾಡಿದರು.

Cross references

2 ದಿನವೃತ್ತಾಂತ 36:17

ಆದದರಿಂದ ಆತನು ಅವರ ಮೇಲೆ ಕಸ್ದೀಯರ ಅರಸನನ್ನು ಬರಮಾಡಿದನು. ಅವನು ಅವರ ಪರಿಶುದ್ಧ ಸ್ಥಾನವಾದ ಆಲಯದಲ್ಲಿ ಅವರ ಪ್ರಾಯಸ್ಥರನ್ನು ಕತ್ತಿಯಿಂದ ಕೊಂದುಹಾಕಿದನು. ಪ್ರಾಯಸ್ಥನ ಮೇಲಾದರೂ ಕನ್ಯಾ ಸ್ತ್ರೀಯ ಮೇಲಾ ದರೂ ವೃದ್ಧನ ಮೇಲಾದರೂ ಅತೀ ವೃದ್ಧನ ಮೇಲಾ ದರೂ ಕನಿಕರಪಡಲಿಲ್ಲ. ಆತನು ಸಮಸ್ತವನ್ನು ಅವನ ಕೈಯಲ್ಲಿ ಒಪ್ಪಿಸಿದನು.

ಕೀರ್ತನೆಗಳು 79:1

ದೇವರೇ, ಅನ್ಯಜನಾಂಗಗಳು ನಿನ್ನ ಬಾಧ್ಯತೆಯೊಳಗೆ ಬಂದು, ನಿನ್ನ ಪರಿಶುದ್ಧ ಮಂದಿರವನ್ನು ಅಪವಿತ್ರ ಮಾಡಿ, ಯೆರೂಸಲೇಮನ್ನು ಹಾಳು ದಿಬ್ಬಗಳಾಗಿ ಮಾಡಿದ್ದಾರೆ.

ವಿಲಾಪಗಳು 2:4

ಆತನು ಶತ್ರುವಿನ ಹಾಗೆ ತನ್ನ ಬಿಲ್ಲನ್ನು ಬೊಗ್ಗಿಸಿದ್ದಾನೆ, ವೈರಿಯ ಹಾಗೆ ತನ್ನ ಬಲಗೈ ಎತ್ತಿ ನಿಂತುಕೊಂಡು ಕಣ್ಣಿಗೆ ರಮ್ಯವಾಗಿ ಕಾಣುವ ಎಲ್ಲವುಗಳನ್ನು ಕೊಂದುಹಾಕಿದ್ದಾನೆ. ಆತನು ತನ್ನ ರೋಷವೆಂಬ ಅಗ್ನಿಯನ್ನು ಚೀಯೋನ್‌ ಮಗಳ ಗುಡಾರದಲ್ಲಿ ಸುರಿದಿದ್ದಾನೆ.

ವಿಲಾಪಗಳು 2:20

ಓ ಕರ್ತನೇ, ನೋಡು, ನೀನು ಇದನ್ನು ಯಾರಿಗೆ ಮಾಡಿದಿಯೋ ಯೋಚಿಸು. ಸ್ತ್ರೀಯರು ತಮ್ಮ ಫಲವಾದ ಗೇಣುದ್ದದ ಕೂಸುಗಳನ್ನು ತಿನ್ನಬೇಕೇ? ಯಾಜಕನು ಪ್ರವಾದಿಯು ಕರ್ತನ ಪರಿಶುದ್ಧ ಸ್ಥಳದಲ್ಲಿ ಕೊಲ್ಲಲ್ಪಡಬೇಕೋ?

ಯೆಹೆಜ್ಕೇಲ 7:20

ಅವನ ಆಭರಣದ ಸೌಂದರ್ಯವಾ ದರೋ ಅವನು ಅದನ್ನು ಘನತೆಗಾಗಿ ಇಟ್ಟನು. ಆದರೆ ಅವರು ತಮ್ಮ ಅಸಹ್ಯಗಳ ವಿಗ್ರಹಗಳನ್ನೂ ಹೇಸಿಗೆ ಗಳನ್ನೂ ಅದರಲ್ಲಿ ಮಾಡಿದ್ದರಿಂದ ಅದನ್ನು ನಾನು ಅವರಿಂದ ದೂರಮಾಡಿದ್ದೇನೆ.

ಲೂಕ 13:1

ಇದಲ್ಲದೆ ಪಿಲಾತನು ಗಲಿಲಾಯದವರ ರಕ್ತವನ್ನು ಅವರ ಬಲಿಗಳೊಂದಿಗೆ ಬೆರಸಿದ ವಿಷಯವನ್ನು ಆತನಿಗೆ ತಿಳಿಸಿದ ಕೆಲವರು ಆ ಸಮಯ ದಲ್ಲಿ ಅಲ್ಲಿದ್ದರು.

Interlinear

Choose Theme