Home Bibles ಯೆಹೆಜ್ಕೇಲ 22:24 · ಕನ್ನಡ ಬೈಬಲ್
ಯೆಹೆಜ್ಕೇಲ 22:24 · ಕನ್ನಡ ಬೈಬಲ್

ಮನುಷ್ಯಪುತ್ರನೇ, ಅದಕ್ಕೆ ಹೀಗೆ ಹೇಳು ಅಶುದ್ಧರಾಗದಂಥ ರೌದ್ರದ ದಿವಸ ಗಳಲ್ಲಿ ಮಳೆ ಸುರಿಯುವಂತಹ ದೇಶವು ನೀನೇ,

Cross references

2 ದಿನವೃತ್ತಾಂತ 28:22

ಇದಲ್ಲದೆ ಅರಸನಾದ ಆಹಾಜನು ತನ್ನ ಇಕ್ಕಟ್ಟಿನ ಕಾಲದಲ್ಲಿ ಮತ್ತಷ್ಟು ಕರ್ತನಿಗೆ ವಿರೋಧ ವಾಗಿ ಅಪರಾಧ ಮಾಡಿದನು.

2 ದಿನವೃತ್ತಾಂತ 36:14

ಇದಲ್ಲದೆ ಯಾಜಕರಲ್ಲಿರುವ ಎಲ್ಲಾ ಪ್ರಧಾನರೂ ಜನರೂ ಜನಾಂಗಗಳ ಅಸಹ್ಯ ಗಳನ್ನು ಹಿಂಬಾಲಿಸಿ ಬಹಳವಾಗಿ ಅಪರಾಧ ಮಾಡಿ ಕರ್ತನು ಯೆರೂಸಲೇಮಿನಲ್ಲಿ ಪರಿಶುದ್ಧ ಮಾಡಿದ ಆತನ ಆಲಯವನ್ನು ಹೊಲೆ ಮಾಡಿದರು.

ಯೆಶಾಯ 1:5

ನೀವು ಹೆಚ್ಚೆಚ್ಚಾಗಿ ತಿರುಗಿಬಿದ್ದು ಯಾಕೆ ನೀವು ಇನ್ನು ಹೊಡೆಯಿಸಿಕೊಳ್ಳುತ್ತೀರಿ. ತಲೆ ಯೆಲ್ಲಾ ರೋಗ, ಹೃದಯವೆಲ್ಲಾ ದುರ್ಬಲ.

ಯೆಶಾಯ 9:13

ಹೀಗಿದ್ದಾಗ್ಯೂ ಆ ಜನರು ತಮ್ಮನ್ನು ಹೊಡೆ ದಾತನ ಕಡೆಗೆ ತಿರುಗದೆಯೂ ಇಲ್ಲವೆ ಸೈನ್ಯಗಳ ಕರ್ತನನ್ನು ಹುಡುಕದೆಯೂ ಇದ್ದಾರೆ.

ಯೆರೆಮಿಯ 2:30

ನಾನು ನಿಮ್ಮ ಮಕ್ಕಳನ್ನು ಹೊಡೆದದ್ದು ವ್ಯರ್ಥವಾಯಿತು. ಅವರು ಶಿಕ್ಷೆಯನ್ನು ತಕ್ಕೊಳ್ಳಲಿಲ್ಲ. ನಿಮ್ಮ ಸ್ವಂತ ಕತ್ತಿಯು ನಾಶಮಾಡುವ ಸಿಂಹದಂತೆ ನಿಮ್ಮ ಪ್ರವಾದಿಗಳನ್ನು ನುಂಗಿಬಿಟ್ಟಿವೆ.

ಯೆರೆಮಿಯ 5:3

ಅವಳ ಬಳಿಗೆ ಕುರುಬರು ತಮ್ಮ ಮಂದೆಗಳ ಸಂಗಡ ಬರುವರು; ಅವಳ ಸುತ್ತಲು ತಮ್ಮ ಗುಡಾರಗಳನ್ನು ಹಾಕುವರು; ತಮ್ಮ ತಮ್ಮ ಸ್ಥಳಗಳಲ್ಲಿ ಮೇಯಿಸುವರು.

ಯೆರೆಮಿಯ 6:29

ಯೆರೂಸಲೇಮೇ, ನಿನ್ನ ಕೂದಲನ್ನು ಕತ್ತರಿಸಿ ಬಿಸಾಡಿಬಿಡು; ಉನ್ನತ ಸ್ಥಳಗಳಲ್ಲಿ ಗೋಳಾಟವನ್ನು ಎತ್ತು; ಕರ್ತನು ತನ್ನ ಉಗ್ರದ ಸಂತತಿಯನ್ನು ನಿರಾಕರಿಸಿ ತಳ್ಳಿ ಬಿಟ್ಟಿದ್ದಾನೆ;

ಯೆಹೆಜ್ಕೇಲ 24:13

ನಿನ್ನ ಅಶುದ್ಧ ತ್ವವು ದುಷ್ಕರ್ಮವುಳ್ಳದ್ದು; ನಾನು ನಿನ್ನನ್ನು ಪರಿಶುದ್ಧ ಮಾಡಿದರೂ ನೀನು ಶುದ್ಧವಾಗದ ಕಾರಣ ನಾನು ನನ್ನ ರೋಷವನ್ನು ನಿನ್ನ ಮೇಲೆ ಕಳುಹಿಸುವಷ್ಟು ಕಾಲದ ವರೆಗೂ ಇನ್ನು ಮೇಲೆ ನೀನು ನಿನ್ನ ಅಪವಿತ್ರತ್ವದಿಂದ ಇನ್ನು ಶುದ್ಧವಾಗುವದಿಲ್ಲ.

ಸೆಫನ್ಯ 3:2

ಅವಳು ಶಬ್ದಕ್ಕೆ ವಿಧೇಯಳಾಗಲಿಲ್ಲ, ಶಿಕ್ಷೆಗೆ ಒಳಪಡಲಿಲ್ಲ, ಕರ್ತನಲ್ಲಿ ಭರವಸವಿಡ ಲಿಲ್ಲ. ತನ್ನ ದೇವರ ಸವಿಾಪಕ್ಕೆ ಬರಲಿಲ್ಲ.

Interlinear

Choose Theme