ಸುಣ್ಣ ಹಚ್ಚುತ್ತಿರುವವನಿಗೆ--ಅದು ಬೀಳುವದೆಂದು ಹೇಳು; ಅಲ್ಲಿ ವಿಪರೀತ ಮಳೆ ಬರುವದು ಮತ್ತು ದೊಡ್ಡ ಕಲ್ಮಳೆಯು ಬೀಳುವದು; ಬಿರುಗಾಳಿಯು ಅದನ್ನು ಸೀಳಿಬಿಡುವದು.
Cross references
ಮೂಡಣಗಾಳಿ ಅವನನ್ನು ಎತ್ತಿಕೊಂಡು ಹೋಗು ತ್ತದೆ; ಅವನು ಹೋಗಿಬಿಡುತ್ತಾನೆ; ಬಿರುಗಾಳಿ ಅವನನ್ನು ಅವನ ಸ್ಥಳದಿಂದ ಹಾರಿಸಿ ಬಿಡುತ್ತದೆ.
ಅವುಗಳನ್ನು ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ ಸಮರ ಮತ್ತು ಯುದ್ಧಗಳ ದಿವಸಕ್ಕಾಗಿಯೂ ಇಟ್ಟುಕೊಂಡಿದ್ದೇನೆ.
ದುಷ್ಟರ ಮೇಲೆ ಉರ್ಲುಗಳನ್ನೂ ಬೆಂಕಿಯನ್ನೂ ಗಂಧಕವನ್ನೂ ಉರಿಗಾಳಿಯನ್ನೂ ಆತನು ಸುರಿಸುವನು. ಇದು ಅವರ ಪಾನದ ಬಟ್ಟ ಲಾಗಿರುವದು;ನೀತಿಯ ಕರ್ತನು ನೀತಿಯನ್ನು ಪ್ರೀತಿ ಮಾಡುತ್ತಾನೆ; ಆತನ ಮುಖವು ಯಥಾರ್ಥನನ್ನು ದೃಷ್ಟಿಸುತ್ತದೆ.
ಕರ್ತನು ಆಕಾಶಗಳಲ್ಲಿ ಗುಡುಗಿದನು; ಮಹೋನ್ನತನು ಕಲ್ಮಳೆಯಿಂದಲೂ ಉರಿಗೆಂಡಗಳಿಂದಲೂ ತನ್ನ ಶಬ್ದವನ್ನು ಕೊಟ್ಟನು
ಇದಕ್ಕೋಸ್ಕರ ಭಕ್ತರೆಲ್ಲರು ನಿನ್ನನ್ನು ಕಂಡುಕೊಳ್ಳುವ ಕಾಲದಲ್ಲಿ ನಿನಗೆ ಪ್ರಾರ್ಥನೆ ಮಾಡುವರು; ನಿಶ್ಚಯವಾಗಿ ಬಹಳ ನೀರಿನ ಪ್ರವಾಹ ಗಳು ಅವನ ಸವಿಾಪಕ್ಕೆ ಬರುವದಿಲ್ಲ.
ನೀನು ದೀನರಿಗೆ ಕೋಟೆಯೂ ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣಾ ದುರ್ಗವೂ ಭೀಕರರ ಶ್ವಾಸವು ಬಿಸಿಲಿಗೋಸ್ಕರ ನೆರಳೂ ಗೋಡೆಗೆ ಬಡಿದು ಬಿಡುವ ಬಿರುಗಾಳಿಯಂತಿರುವಾಗ ಬಿರುಗಾಳಿಗೋ ಸ್ಕರ ಆಶ್ರಯವೂ ಆಗಿದ್ದೀ.
ಇಗೋ, ಕರ್ತನಿಗೆ ಒಬ್ಬ ಮಹಾ ಬಲಿಷ್ಠನು ಇದ್ದಾನೆ. ಅವನು ರಭಸವಾಗಿ ಸುರಿಯುವ ಕಲ್ಮಳೆಯಂತೆಯೂ ಹೊಡೆದುಬಿಡುವ ಬಿರುಗಾಳಿ ಯಂತೆಯೂ ಪ್ರಳಯಮಾಡುವ ಪ್ರಚಂಡ ಮಳೆ ಯನ್ನು ತರುವ ಬಿರುಗಾಳಿಯಂತೆಯೂ ಅದನ್ನು ಕೈ ಯಿಂದ ನೆಲಕ್ಕೆ ಬೀಳಿಸುವನು.
ಮರಣದ ಸಂಗಡ ಒಡಂಬಡಿಕೆಯನ್ನು ಮಾಡಿದ್ದೇವೆ. ಪಾತಾಳದ (ನರಕದ)ಸಂಗಡ ಒಪ್ಪಂದ ಮಾಡಿಕೊಂಡಿದ್ದೇವೆ; ವಿಪರೀತವಾದ ಶಿಕ್ಷೆ ಯು ಹಾದುಹೋಗುವಾಗ ನಮ್ಮ ಮೇಲೆ ಬಾರದು; ಸುಳ್ಳನ್ನು ನಮ್ಮ ಆಶ್ರಯವಾಗಿ ಮಾಡಿಕೊಂಡು ಮೋಸದಲ್ಲಿ ಅಡಗಿಕೊಂಡಿದ್ದೇವೆ ಎಂದು ನೀವು ಅನ್ನುತ್ತೀರಲ್ಲಾ?
ಮರಣದೊಂದಿಗೆ ನೀವು ಮಾಡಿಕೊಂಡ ಒಡಂಬಡಿಕೆ ರದ್ದಾಗುವದು. ಪಾತಾಳದ ಸಂಗಡ ನೀವು ಮಾಡಿಕೊಂಡ ಒಪ್ಪಂದವು ನಿಲ್ಲುವದಿಲ್ಲ; ವಿಪರೀತ ಬಾಧೆಯು ಹಾದುಹೋಗುವಾಗ ನೀವು ಅದರಿಂದ ತುಳಿಯಲ್ಪಡುವಿರಿ.
ಸೈನ್ಯಗಳ ಕರ್ತನ ಕಡೆಯಿಂದಲೇ ನೀನು ಗುಡುಗಿನಿಂದಲೂ ಮಹಾಶಬ್ದದಿಂದಲೂ ಬಿರುಗಾಳಿ, ಸುಳಿಗಾಳಿಯಿಂದಲೂ ದಹಿಸುವ ಅಗ್ನಿಜ್ವಾಲೆಯಿಂದ ಲೂ ವಿಚಾರಿಸಲ್ಪಡುವಿ.
ಆದರೆ ಕಲ್ಮಳೆ ಸುರಿಯುವಾಗ ವನವು ಹಾಳಾಗು ವದು; ಪಟ್ಟಣವು ತಗ್ಗಾದ ಸ್ಥಳಕ್ಕೆ ತಗ್ಗಿಸಲ್ಪಡುವದು.ಎಲ್ಲಾ ನೀರುಗಳ ಬಳಿಯಲ್ಲಿ ಬಿತ್ತುತ್ತಲೂ ಎತ್ತು ಕತ್ತೆಗಳನ್ನು (ಕಾವಲಿಗೆ) ಮೇಯ ಬಿಡುತ್ತಲೂ ಇರುವ ನೀವು ಧನ್ಯರೇ ಸರಿ.
ನಾನು ಅವನಿಗೆ ವಿರುದ್ಧ ವಾಗಿ ವ್ಯಾಧಿಯಿಂದಲೂ ರಕ್ತದಿಂದಲೂ ವಾದಿಸು ತ್ತೇನೆ. ನಾನು ಅವನ ಮೇಲೆ ಅವನ ದಂಡುಗಳ ಮೇಲೆ ಮಳೆಯನ್ನು ಸುರಿಸುವೆನು. ಅವನೊಂದಿಗಿರುವ ಅನೇಕ ಜನರ ಮೇಲೆ ಬೆಂಕಿಯನ್ನೂ ಗಂಧಕವನ್ನೂ ನುಣುಪಾದ ಕಲ್ಲುಗಳಿಂದ ತುಂಬಿ ಹರಿಯುವಂತಹ ಮಹಾ ಮಳೆಯನ್ನು ಸುರಿಸುವೆನು.ಹೀಗೆ ನನ್ನೊಂದಿಗೆ ನಾನೇ ಹೆಚ್ಚಿಸಿಕೊಂಡು ಮತ್ತು ನನಗೆ ನಾನೇ ಪರಿಶುದ್ಧಪಡಿಸಿಕೊಂಡು ಅನೇಕ ಜನಾಂಗಗಳ ಕಣ್ಣುಗಳ ಮುಂದೆ ನಾನು ತಿಳಿಯಪಡಿಸಿಕೊಳ್ಳುತ್ತೇನೆ. ಅವರು ನಾನೇ ಕರ್ತನೆಂದು ತಿಳಿದುಕೊಳ್ಳುವರು.
ಕರ್ತನು ಕೋಪಿಸುವದರಲ್ಲಿ ನಿಧಾನ ಮಾಡುವವನಾದರೂ ಶಕ್ತಿಯಲ್ಲಿ ಮಹತ್ತಾದವನು; ದುರ್ಮಾರ್ಗದವರನ್ನು ಎಷ್ಟು ಮಾತ್ರಕ್ಕೂ ನಿರ್ಮಲರೆಂದು ತೀರ್ಮಾನಿಸ ದವನು; ಕರ್ತನ ಮಾರ್ಗವು ಸುಳಿಗಾಳಿಯಲ್ಲಿಯೂ ಬಿರುಗಾಳಿಯಲ್ಲಿಯೂ ಉಂಟು; ಮೇಘಗಳು ಆತನ ಕಾಲುಗಳ ಧೂಳೇ.
ಕರ್ತನು ಒಳ್ಳೆಯವನು; ಇಕ್ಕಟ್ಟಿನ ದಿನದಲ್ಲಿ ಬಲವಾದ ಕೋಟೆಯಾಗಿದ್ದಾನೆ; ತನ್ನಲ್ಲಿ ನಂಬಿಕೆಯಿಡು ವವರನ್ನು ಬಲ್ಲನು.
ಮಳೆಯು ಸುರಿದು ಪ್ರವಾಹಗಳು ಬಂದು ಗಾಳಿಯು ಬೀಸಿ ಆ ಮನೆಗೆ ಬಡಿದವು; ಆದರೂ ಅದು ಬೀಳಲಿಲ್ಲ; ಯಾಕಂದರೆ ಅದರ ಅಸ್ತಿವಾರವು ಬಂಡೆಯ ಮೇಲೆ ಹಾಕಲ್ಪಟ್ಟಿತು.
ಹೇಗಂದರೆ ಮಳೆಯು ಸುರಿದು ಪ್ರವಾಹಗಳು ಬಂದು ಗಾಳಿಯು ಬೀಸಿ ಆ ಮನೆಗೆ ಬಡಿದವು; ಆಗ ಅದು ಬಿತ್ತು; ಮತ್ತು ಅದರ ಬೀಳುವಿಕೆಯು ದೊಡ್ಡದಾಗಿತ್ತು.
ಅವನು ಆಳವಾಗಿ ಅಗಿದು ಬಂಡೆಯ ಮೇಲೆ ಅಸ್ತಿವಾರವನ್ನು ಹಾಕಿ ಮನೆಯನ್ನು ಕಟ್ಟಿದ ಮನುಷ್ಯನಿಗೆ ಸಮಾನನಾಗಿದ್ದಾನೆ; ಪ್ರಳಯವು ಎದ್ದು ಪ್ರವಾಹವು ಆ ಮನೆಗೆ ರಭಸ ವಾಗಿ ಬಡಿದರೂ ಅದನ್ನು ಕದಲಿಸಲಿಕ್ಕಾಗದೆ ಹೋಯಿತು; ಯಾಕಂದರೆ ಅದು ಬಂಡೆಯ ಮೇಲೆ ಕಟ್ಟಲ್ಪಟ್ಟಿತು.ಆದರೆ (ನನ್ನ ಮಾತುಗಳನ್ನು) ಕೇಳಿ ಅದರಂತೆ ಮಾಡದೆ ಇರುವವನು ಅಸ್ತಿವಾರ ವಿಲ್ಲದೆ ಮಣ್ಣಿನ ಮೇಲೆ ಮನೆಯನ್ನು ಕಟ್ಟಿದ ಮನುಷ್ಯನಿಗೆ ಹೋಲಿಕೆಯಾಗಿದ್ದಾನೆ; ಪ್ರವಾಹವು ಅದಕ್ಕೆ ರಭಸವಾಗಿ ಬಡಿದದ್ದರಿಂದ ಕೂಡಲೆ ಅದು ಬಿತ್ತು; ಇದರಿಂದ ಆ ಮನೆಯ ನಾಶನವು ದೊಡ್ಡದಾಗಿತ್ತು.