ನಿರ್ಗಮಕಾಂಡ 5:19 · ಕನ್ನಡ ಬೈಬಲ್
ದಿನದಿನವೂ ಒಪ್ಪಿಸಬೇಕಾದ ಇಟ್ಟಿಗೆಗಳ ಲೆಕ್ಕ ಕಡಿಮೆಯಾಗಬಾರದೆಂದು ಅಪ್ಪಣೆಯಾದದ್ದರಿಂದ ಇಸ್ರಾಯೇಲ್ ಅಧಿಕಾರಿಗಳು ತಾವು ದುರವಸ್ಥೆಯಲ್ಲಿ ದ್ದೇವೆಂದು ತಿಳುಕೊಂಡರು.
Cross references
ದ್ವಿತೀಯೋಪದೇಶಕಾಂಡ 32:36
ಕರ್ತನು ತನ್ನ ಜನರಿಗೆ ನ್ಯಾಯತೀರಿಸುವನು; ಅವರ ಬಲಹೋಯಿತೆಂದೂ ಬಚ್ಚಿಡಲ್ಪಟ್ಟವರೂ ಉಳಿ ದವರೂ ಇಲ್ಲವೆಂದೂ ನೋಡಿದಾಗ ತನ್ನ ದಾಸರಿಗೋಸ್ಕರ ಪಶ್ಚಾತ್ತಾಪಪಡುವನು.
ಸಭಾಪ್ರಸಂಗಿ 4:1
ಹೀಗೆ ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನಡೆಯುತ್ತಿರುವ ಹಿಂಸೆಗಳನ್ನೆಲ್ಲಾ ನಾನು ಯೋಚಿಸಿದೆನು; ಹಿಂಸಿಸಲ್ಪಟ್ಟವರ ಕಣ್ಣೀರನ್ನೂ ಅವರನ್ನು ಆದರಿಸುವವರು ಯಾರೂ ಇಲ್ಲದಿರುವ ದನ್ನೂ ನೋಡಿದೆನು; ಅವರನ್ನು ಹಿಂಸೆಪಡಿಸುವವರ ಕಡೆಗೆ ಶಕ್ತಿ ಇತ್ತು; ಆದರೆ ಇವರನ್ನು ಆದರಿಸುವವನು ಯಾವನೂ ಇಲ್ಲ.
ಸಭಾಪ್ರಸಂಗಿ 5:8
ಬಡವರ ಹಿಂಸೆಯನ್ನೂ ಒಬ್ಬ ಅಧಿಪತಿಯಲ್ಲಿ ನೀತಿ ನ್ಯಾಯಗಳ ಬಲಾತ್ಕಾರದ ವಕ್ರತೆಯನ್ನೂ ನೀನು ನೋಡಿದರೆ ಆ ಸಂಗತಿಯಲ್ಲಿ ಆಶ್ಚರ್ಯಪಡಬೇಡ; ಉನ್ನತೋನ್ನತನು ಲಕ್ಷಿಸುತ್ತಾನೆ; ಅವರಿಗಿಂತ ಉನ್ನತವಾ ದವರು ಇದ್ದಾರೆ.