Home Bibles ☰ Books ನಿರ್ಗಮಕಾಂಡ 5:18 · ಕನ್ನಡ ಬೈಬಲ್
ನಿರ್ಗಮಕಾಂಡ 5:18 · ಕನ್ನಡ ಬೈಬಲ್

ಆದದ ರಿಂದ ಈಗ ಹೋಗಿ ಕೆಲಸಮಾಡಿರಿ, ಹುಲ್ಲನ್ನು ನಿಮಗೆ ಕೊಡುವದಕ್ಕಾಗುವದಿಲ್ಲ. ಆದಾಗ್ಯೂ ನೇಮಿಸಿದ್ದ ಇಟ್ಟಿಗೆಗಳನ್ನು ನೀವು ಕೊಡಬೇಕು ಅಂದನು.

Cross references

2 ದಿನವೃತ್ತಾಂತ 10:11

ನಿನ್ನ ಸಂಗಡ ಮಾತನಾಡಿ ಹೇಳಿದ ಈ ಜನರಿಗೆ ನೀನು ಹೀಗೆ ಹೇಳಬೇಕು--ನನ್ನ ಕಿರು ಬೆರಳು ನನ್ನ ತಂದೆಯ ನಡುವಿಗಿಂತ ದಪ್ಪವಾಗಿರು ವದು. ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹೊರಿಸಿದನು; ನಾನಾದರೋ ನಿಮ್ಮ ನೊಗವನ್ನು ಹೆಚ್ಚು ಭಾರವಾಗಿ ಮಾಡುವೆನು. ನನ್ನ ತಂದೆಯು ನಿಮ್ಮನ್ನು ಬೆತ್ತಗಳಿಂದ ಶಿಕ್ಷಿಸಿದನು; ಆದರೆ ನಾನು ನಿಮ್ಮನ್ನು ಚೇಳುಗಳಿಂದ ಶಿಕ್ಷಿಸುವೆನು ಎಂದು ಹೇಳು ಅಂದರು.

ಸಭಾಪ್ರಸಂಗಿ 4:1

ಹೀಗೆ ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನಡೆಯುತ್ತಿರುವ ಹಿಂಸೆಗಳನ್ನೆಲ್ಲಾ ನಾನು ಯೋಚಿಸಿದೆನು; ಹಿಂಸಿಸಲ್ಪಟ್ಟವರ ಕಣ್ಣೀರನ್ನೂ ಅವರನ್ನು ಆದರಿಸುವವರು ಯಾರೂ ಇಲ್ಲದಿರುವ ದನ್ನೂ ನೋಡಿದೆನು; ಅವರನ್ನು ಹಿಂಸೆಪಡಿಸುವವರ ಕಡೆಗೆ ಶಕ್ತಿ ಇತ್ತು; ಆದರೆ ಇವರನ್ನು ಆದರಿಸುವವನು ಯಾವನೂ ಇಲ್ಲ.

ಯೆಹೆಜ್ಕೇಲ 18:18

ಆತನ ತಂದೆಯ ವಿಷಯವಾದರೋ ಅವನು ಬಹಳ ಬಲಾತ್ಕಾರ ಮಾಡಿ ದ್ದರಿಂದಲೂ ತನ್ನ ಸಹೋದರನನ್ನು ಹಿಂಸಿಸಿ ಸುಲಿಗೆ ಮಾಡಿದ್ದರಿಂದಲೂ ತನ್ನ ಜನರ ಮಧ್ಯದಲ್ಲಿ ಕೆಟ್ಟದನ್ನು ಮಾಡಿದ್ದರಿಂದಲೂ ಇಗೋ, ಅವನು ಅಕ್ರಮದಲಿ ಸಾಯುವನು.

ದಾನಿಯೇಲ 2:9

ಆದರೆ ನೀವು ಕನಸ್ಸನ್ನು ನನಗೆ ತಿಳಿಸದೆ ಹೋದರೆ ನಿಮಗೆ ಒಂದೇ ನಿರ್ಣಯ ಉಂಟು; ಕಾಲ ಬದಲಾಗುವ ವರೆಗೂ ನೀವು ನನ್ನ ಮುಂದೆ ಕೆಟ್ಟ ಸುಳ್ಳು ಮಾತುಗಳನ್ನು ಮಾತನಾಡಲು ಸಿದ್ಧಮಾಡಿಕೊಂಡಿರುವಿರಿ; ಆದದರಿಂದ ಕನಸನ್ನು ನನಗೆ ತಿಳಿಸಿ, ಅದರ ಅರ್ಥವನ್ನೂ ನನಗೆ ತಿಳಿಸಬಲ್ಲಿ ರೆಂದು ನಾನು ತಿಳಿದುಕೊಂಡಿರುತ್ತೇನೆ ಎಂದು ಹೇಳಿ ದನು.

Interlinear

Choose Theme