Home Bibles ☰ Books ನಿರ್ಗಮಕಾಂಡ 18:3 · ಕನ್ನಡ ಬೈಬಲ್
ನಿರ್ಗಮಕಾಂಡ 18:3 · ಕನ್ನಡ ಬೈಬಲ್

ಆ ಕುಮಾರರಲ್ಲಿ ಒಬ್ಬನಿಗೆ ಗೇರ್ಷೋಮ್‌ ಎಂದು ಹೆಸರಿತ್ತು; ಅವನು--ನಾನು ಪರದೇಶದಲ್ಲಿ ಅನ್ಯನಾಗಿ ದ್ದೆನು ಅಂದನು.

Cross references

ನಿರ್ಗಮಕಾಂಡ 2:22

ಆಕೆಯು ಮಗನನ್ನು ಹೆತ್ತಾಗ ಮೋಶೆಯು ಅವನಿಗೆ ಗೇರ್ಷೋಮ್‌ ಎಂದು ಹೆಸರಿ ಟ್ಟನು. ಯಾಕಂದರೆ ಅವನು--ನಾನು ಪರದೇಶದಲ್ಲಿ ಅನ್ಯನಾಗಿದ್ದೇನೆ ಅಂದನು.

ನಿರ್ಗಮಕಾಂಡ 4:20

ಆಗ ಮೋಶೆಯು ತನ್ನ ಹೆಂಡತಿಯನ್ನೂ ಮಕ್ಕಳನ್ನೂ ಕರ ಕೊಂಡು ಕತ್ತೆಯಮೇಲೆ ಹತ್ತಿಸಿ ಐಗುಪ್ತ ದೇಶಕ್ಕೆ ಹಿಂತಿರುಗಿ ಬಂದನು. ಇದಲ್ಲದೆ ಮೋಶೆಯು ದೇವರ ಕೋಲನ್ನು ಕೈಯಲ್ಲಿ ತಕ್ಕೊಂಡನು.

1 ದಿನವೃತ್ತಾಂತ 23:15

ಮೋಶೆಯ ಕುಮಾರರು--ಗೇರ್ಷೋಮನು ಎಲೀ ಯೆಜೆರನು.

ಕೀರ್ತನೆಗಳು 39:12

ಓ ಕರ್ತನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ಮೊರೆಗೆ ಕಿವಿಗೊಡು; ನನ್ನ ಕಣ್ಣೀರಿಗೆ ಮೌನ ವಾಗಿರಬೇಡ. ನಾನು ನಿನ್ನ ಸಂಗಡ ಪರದೇಶಸ್ಥನು; ನನ್ನ ತಂದೆಗಳೆಲ್ಲರ ಹಾಗೆ ಪ್ರವಾಸಿಯಾಗಿದ್ದೇನೆ.ಕರ್ತನೇ ನನ್ನನ್ನು ಉಳಿಸು; ಆಗ ನಾನು ಇಲ್ಲಿಂದ ಹೋಗಿಬಿಟ್ಟು ಇಲ್ಲದೆ ಹೋಗುವದಕ್ಕಿಂತ ಮುಂಚೆ ಬಲವನ್ನು ತಿರಿಗಿ ಪಡೆಯುವೆನು.

ಅಪೋಸ್ತಲರ ಕೃತ್ಯಗಳು 7:29

ಈ ಮಾತನ್ನು ಕೇಳಿ ಮೋಶೆಯು ಓಡಿಹೋಗಿ ಮಿದ್ಯಾನ್‌ ದೇಶದಲ್ಲಿ ಪ್ರವಾಸಿಯಾದನು. ಅಲ್ಲಿ ಅವನಿಂದ ಇಬ್ಬರು ಕುಮಾರರು ಹುಟ್ಟಿದರು.

ಹೆಬ್ರಿಯರಿಗೆ 11:13

ಇವರೆಲ್ಲರು ವಾಗ್ದಾನಗಳ ಫಲವನ್ನು ಹೊಂದದೆ ಅವುಗಳನ್ನು ದೂರದಿಂದ ನೋಡಿ ನಿಶ್ಚಯದೊಡನೆ ಅಪ್ಪಿಕೊಂಡು ನಂಬಿಕೆಯುಳ್ಳವರಾಗಿ ಮೃತರಾದರು; ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿ ಗಳೂ ಆಗಿದ್ದೇವೆಂದು ಒಪ್ಪಿಕೊಂಡರು.

1 ಪೇತ್ರ 2:11

ಅತಿ ಪ್ರಿಯರೇ, ಪರದೇಶಸ್ಥರೂ ಪ್ರವಾಸಿಗಳೂ ಆಗಿರುವ ನೀವು ನಿಮ್ಮ ಆತ್ಮಕ್ಕೆ ವಿರೋಧವಾಗಿ ಯುದ್ಧಮಾಡುವ ಶಾರೀರಿಕ ದುರಾಶೆಗಳಿಗೆ ದೂರವಾಗಿ ರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

Interlinear

Choose Theme