ಅಪೋಸ್ತಲರ ಕೃತ್ಯಗಳು 7:29 · ಕನ್ನಡ ಬೈಬಲ್
ಈ ಮಾತನ್ನು ಕೇಳಿ ಮೋಶೆಯು ಓಡಿಹೋಗಿ ಮಿದ್ಯಾನ್ ದೇಶದಲ್ಲಿ ಪ್ರವಾಸಿಯಾದನು. ಅಲ್ಲಿ ಅವನಿಂದ ಇಬ್ಬರು ಕುಮಾರರು ಹುಟ್ಟಿದರು.
Cross references
ನಿರ್ಗಮಕಾಂಡ 2:14
ಅದಕ್ಕ ವನು--ಯಾರು ನಿನ್ನನ್ನು ನಮ್ಮ ಮೇಲೆ ಪ್ರಭುವ ನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ನೇಮಿಸಿ ದ್ದಾರೆ? ಆ ಐಗುಪ್ತ್ಯನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಂದುಹಾಕಬೇಕೆಂದಿದ್ದೀಯೋ ಅಂದನು. ಆಗ ಮೋಶೆಯು ಭಯಪಟ್ಟು--ನಿಶ್ಚಯವಾಗಿ ಈ ಕಾರ್ಯವು ತಿಳಿದುಬಂತು ಎಂದು ಅಂದುಕೊಂಡನು.
ನಿರ್ಗಮಕಾಂಡ 4:19
ಇದಲ್ಲದೆ ಕರ್ತನು ಮಿದ್ಯಾನಿನಲ್ಲಿ ಮೋಶೆಗೆ--ಐಗುಪ್ತಕ್ಕೆ ಹಿಂತಿರುಗಿ ಹೋಗು; ನಿನ್ನ ಪ್ರಾಣವನ್ನು ಹುಡುಕಿದ ಜನರೆಲ್ಲಾ ಸತ್ತಿದ್ದಾರೆ ಅಂದನು.
ನಿರ್ಗಮಕಾಂಡ 18:2
ತನ್ನ ಬಳಿಗೆ ಕಳುಹಿಸಲ್ಪಟ್ಟಿದ್ದ ಮೋಶೆಯ ಹೆಂಡತಿ ಚಿಪ್ಪೋರಳನ್ನೂ ಆಕೆಯ ಇಬ್ಬರು ಕುಮಾರರನ್ನೂ ಕರೆದುಕೊಂಡು ಬಂದನು.