ಮೋಶೆಯು ತನ್ನ ಮಾವನ ಮಾತನ್ನು ಕೇಳಿ ಅವನು ಹೇಳಿದ್ದನ್ನೆಲ್ಲಾ ಮಾಡಿದನು.
Cross references
ತನ್ನ ಬಳಿಗೆ ಕಳುಹಿಸಲ್ಪಟ್ಟಿದ್ದ ಮೋಶೆಯ ಹೆಂಡತಿ ಚಿಪ್ಪೋರಳನ್ನೂ ಆಕೆಯ ಇಬ್ಬರು ಕುಮಾರರನ್ನೂ ಕರೆದುಕೊಂಡು ಬಂದನು.
ಆದದರಿಂದ ಈಗ ನನ್ನ ಮಾತನ್ನು ಕೇಳು, ನಿನಗೆ ಆಲೋಚನೆ ಹೇಳುತ್ತೇನೆ; ದೇವರು ನಿನ್ನ ಸಂಗಡ ಇರಲಿ; ನೀನು ಜನರಿಗಾಗಿ ದೇವರ ಪಕ್ಷದಲ್ಲಿದ್ದು ಅವರ ವ್ಯಾಜ್ಯಗಳನ್ನು ಆತನ ಮುಂದೆ ತರಬೇಕು.
ಆಗ ಎಲಾಮನ ಕುಮಾರರಲ್ಲಿ ಒಬ್ಬನಾದ ಯೆಹೀಯೇಲನ ಮಗನಾದ ಶೆಕೆನ್ಯನು ಎಜ್ರನಿಗೆ ಪ್ರತ್ತ್ಯುತ್ತರವಾಗಿ--ನಾವು ದೇಶದ ಜನಗಳಲ್ಲಿ ಅನ್ಯ ಸ್ತ್ರೀಯರನ್ನು ತೆಗೆದು ಕೊಂಡದ್ದರಿಂದ ನಮ್ಮ ದೇವರಿಗೆ ವಿರೋಧವಾಗಿ ಅಕೃತ್ಯಮಾಡಿದ್ದೇವೆ. ಆದಾಗ್ಯೂ ಈಗ ಈ ಕಾರ್ಯವನ್ನು ಕುರಿತು ಇಸ್ರಾಯೇಲ್ಯರಲ್ಲಿ ನಿರೀಕ್ಷೆ ಉಂಟು.
ಆಗ ಎಜ್ರನು ಎದ್ದು, ಪ್ರಧಾನಯಾಜಕರೂ ಲೇವಿಯರೂ ಸಮಸ್ತ ಇಸ್ರಾ ಯೇಲ್ಯರೂ ಈ ಮಾತಿನ ಪ್ರಕಾರವಾಗಿ ಮಾಡಲು ಅವರು ಆಣೆ ಇಡುವ ಹಾಗೆ ಮಾಡಿದನು. ಅವರು ಆಣೆ ಇಟ್ಟರು.
ಅವರನ್ನು ಸುರಕ್ಷಿತವಾಗಿ ನಡಿಸಿದಕಾರಣ ಅವರು ಹೆದರಲಿಲ್ಲ; ಆದರೆ ಸಮುದ್ರವು ಅವರ ಶತ್ರುಗಳನ್ನು ಮುಚ್ಚಿಬಿಟ್ಟಿತು.
ಜ್ಞಾನಿಯು ಕೇಳಿ ಜ್ಞಾನ ವನ್ನು ಹೆಚ್ಚಿಸಿಕೊಳ್ಳುವನು; ತಿಳುವಳಿಕೆಯ ಮನುಷ್ಯನು ಜ್ಞಾನದ ಆಲೋಚನೆಗಳನ್ನು ಸಂಪಾದಿಸಿಕೊಳ್ಳುವನು.
ಕಣ್ಣು ಕೈಗೆ--ನೀನು ನನಗೆ ಅವಶ್ಯವಿಲ್ಲವೆಂದೂ ತಲೆಯು ಕಾಲು ಗಳಿಗೆ--ನೀವು ನನಗೆ ಅವಶ್ಯವಿಲ್ಲವೆಂದೂ ಹೇಳುವದ ಕ್ಕಾಗುವದಿಲ್ಲ.