Home Bibles ನಿರ್ಗಮಕಾಂಡ 18:23 · ಕನ್ನಡ ಬೈಬಲ್
ನಿರ್ಗಮಕಾಂಡ 18:23 · ಕನ್ನಡ ಬೈಬಲ್

ಈ ಕಾರ್ಯವನ್ನು ಮಾಡುವದಕ್ಕೆ ದೇವರು ನಿನಗೆ ಅಪ್ಪಣೆಕೊಟ್ಟರೆ ನೀನು ಇದನ್ನು ನಿರ್ವಹಿಸಲು ಶಕ್ತ ನಾಗುವಿ. ಈ ಜನರೆಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಸಮಾಧಾನದಿಂದ ಹೋಗುವರು ಅಂದನು.

Cross references

ಆದಿಕಾಂಡ 18:33

ಕರ್ತನು ಅಬ್ರಹಾಮನ ಸಂಗಡ ಮಾತನಾಡು ವದನ್ನು ಮುಗಿಸಿದ ಕೂಡಲೆ ಹೊರಟುಹೋದನು. ಅಬ್ರಹಾಮನು ತನ್ನ ಸ್ಥಳಕ್ಕೆ ತಿರುಗಿಕೊಂಡನು.

ಆದಿಕಾಂಡ 21:10

ಅಬ್ರ ಹಾಮನಿಗೆ--ಈ ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು; ಈ ದಾಸಿಯ ಮಗನು ನನ್ನ ಮಗನಾದ ಇಸಾಕನ ಸಂಗಡ ಬಾಧ್ಯನಾಗಬಾರದು ಅಂದಳು.

ಆದಿಕಾಂಡ 30:25

ರಾಹೇಲಳು ಯೋಸೇಫನನ್ನು ಹೆತ್ತಾಗ ಯಾಕೋಬನು ಲಾಬಾನನಿಗೆ--ನಾನು ನನ್ನ ಸ್ಥಳಕ್ಕೂ ಸ್ವದೇಶಕ್ಕೂ ಹೋಗುವ ಹಾಗೆ ನನ್ನನ್ನು ಕಳುಹಿಸಿ ಕೊಡು.

ನಿರ್ಗಮಕಾಂಡ 16:29

ಅವನು--ನೋಡಿರಿ, ಕರ್ತನು ನಿಮಗೆ ಸಬ್ಬತ್‌ ದಿನವನ್ನು ಕೊಟ್ಟಿದ್ದರಿಂದಲೇ ಆರನೆಯ ದಿನ ದಲ್ಲಿ ನಿಮಗೆ ಎರಡು ದಿನಗಳ ರೊಟ್ಟಿಯನ್ನು ಕೊಟ್ಟಿ ದ್ದಾನೆ. ಪ್ರತಿಯೊಬ್ಬನು ತನ್ನ ತನ್ನ ಸ್ಥಳದಲ್ಲಿ ಇರಲಿ, ಏಳನೆಯ ದಿನದಲ್ಲಿ ಯಾರೂ ತನ್ನ ಸ್ಥಳವನ್ನು ಬಿಟ್ಟು ಹೋಗಬಾರದು ಎಂದು ಹೇಳಿದನು.

ನಿರ್ಗಮಕಾಂಡ 18:18

ನೀನೂ ನಿನ್ನ ಸಂಗಡ ಇರುವ ಜನರೂ ಖಂಡಿತ ಬಳಲುವಿರಿ, ಯಾಕಂದರೆ ಇದು ನಿನಗೆ ಬಹು ಭಾರ; ನೀನು ಸ್ವತಃ ಇದನ್ನು ಮಾಡಲಾರಿ.

1 ಸಮುವೇಲ 8:6

ಆದರೆ--ನಮಗೆ ನ್ಯಾಯತೀರಿಸುವ ಒಬ್ಬ ಅರಸನನ್ನು ನೇಮಿಸು ಎಂದು ಅವರು ಹೇಳಿದ ವಾರ್ತೆಯು ಸಮುವೇಲನಿಗೆ ಮನ ನೋಯಿಸುವಂತದ್ದಾಗಿತ್ತು. ಅವನು ಕರ್ತನಿಗೆ ಪ್ರಾರ್ಥನೆ ಮಾಡಿದನು.

1 ಸಮುವೇಲ 8:22

ಆದರೆ ಕರ್ತನು ಸಮುವೇಲನಿಗೆ--ಅವರ ಮಾತನ್ನು ಕೇಳಿ ಅವರಿಗೆ ಅರಸನನ್ನು ನೇಮಿಸು ಅಂದನು. ಆಗ ಸಮುವೇಲನು ಇಸ್ರಾಯೇಲ್‌ ಜನರಿಗೆ--ನಿಮ್ಮ ನಿಮ್ಮ ಪಟ್ಟಣಗಳಿಗೆ ಹೋಗಿರಿ ಅಂದನು.

2 ಸಮುವೇಲ 18:3

ಆದರೆ ಜನರು ಅವನಿಗೆ--ನೀನು ನಮ್ಮ ಸಂಗಡ ಬರಬೇಡ; ಯಾಕಂದರೆ ನಾವು ಓಡಿ ಹೋದರೂ ಅವರು ನಮ್ಮನ್ನು ಲಕ್ಷಿಸುವದಿಲ್ಲ; ನಮ್ಮಲ್ಲಿ ಅರ್ಧ ಜನರು ಸತ್ತುಹೋದರೂ ಅವರು ನಮ್ಮನ್ನು ಲಕ್ಷಿಸುವದಿಲ್ಲ. ನೀನಾದರೆ ನಮ್ಮಲ್ಲಿ ಹತ್ತು ಸಾವಿರ ಜನಕ್ಕೆ ಸರಿಯಾಗಿದ್ದೀ. ಈಗ ನೀನು ಪಟ್ಟಣದಲ್ಲಿದ್ದು ನಮಗೆ ಸಹಾಯವಾಗಿರುವದು ಉತ್ತಮ ಅಂದರು.

2 ಸಮುವೇಲ 19:39

ಜನರೆಲ್ಲರು ಯೊರ್ದನನ್ನು ದಾಟಿದರು. ಅರಸನು ದಾಟಿ ಬಂದಾಗ ಬರ್ಜಿಲ್ಲೈ ಯನ್ನು ಮುದ್ದಿಟ್ಟು ಅವನನ್ನು ಆಶೀರ್ವದಿಸಿದನು.

2 ಸಮುವೇಲ 21:17

ಆದರೆ ಚೆರೂಯಳ ಮಗನಾದ ಅಬೀಷೈಯು ಅವನಿಗೆ ಸಹಾಯವಾಗಿ ಬಂದು ಫಿಲಿಷ್ಟಿಯನನ್ನು ಹೊಡೆದು ಕೊಂದುಹಾಕಿ ದನು. ಆಗ ದಾವೀದನ ಜನರು ಅವನಿಗೆ--ನೀನು ಇಸ್ರಾಯೇಲಿನ ಬೆಳಕನ್ನು ಆರಿಸಿಬಿಡದ ಹಾಗೆ ಇನ್ನು ಮೇಲೆ ನಮ್ಮ ಸಂಗಡ ಯುದ್ಧಕ್ಕೆ ಹೊರಡಬೇಡ ಎಂದು ಅವನಿಗೆ ಆಣೆಯಿಟ್ಟರು.

ಅಪೋಸ್ತಲರ ಕೃತ್ಯಗಳು 15:2

ಆದದರಿಂದ ಅವರ ಮತ್ತು ಪೌಲ ಬಾರ್ನಬರ ಮಧ್ಯೆ ದೊಡ್ಡ ಭಿನ್ನಾಭಿ ಪ್ರಾಯವೂ ವಾಗ್ವಾದವೂ ಉಂಟಾದಾಗ ಪೌಲ ಬಾರ್ನಬರೂ ಅವರಲ್ಲಿ ಬೇರೆ ಕೆಲವರೂ ಈ ಪ್ರಶ್ನೆಗಾಗಿ ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಹಿರಿಯರ ಬಳಿಗೆ ಹೋಗಬೇಕೆಂದು ಅವರು ನಿರ್ಧರಿಸಿದರು.

ಗಲಾತ್ಯದವರಿಗೆ 2:2

ಪ್ರಕಟನೆಗನುಸಾರವಾಗಿ ಅಲ್ಲಿಗೆ ಹೋಗಿ ಅನ್ಯಜನ ರಲ್ಲಿ ನಾನು ಸಾರುವ ಸುವಾರ್ತೆಯನ್ನು ಅಲ್ಲಿದ್ದವರಿಗೆ ತಿಳಿಸಿದೆನು; ಆದರೆ ನಾನು ಪಡುತ್ತಿರುವ ಪ್ರಯಾಸ ವಾಗಲಿ ಪಟ್ಟ ಪ್ರಯಾಸವಾಗಲಿ ನಿಷ್ಫಲವಾಗಬಾರ ದೆಂದು ಮಾನಿಷ್ಠರಿಗೆ ಏಕಾಂತದಲ್ಲಿ ತಿಳಿಸಿದೆನು.

ಫಿಲಿಪ್ಪಿಯವರಿಗೆ 1:24

ಆದಾಗ್ಯೂ ನಾನಿನ್ನೂ ಶರೀರದಲ್ಲಿ ವಾಸಮಾಡಿಕೊಂಡಿರುವದು ನಿಮ ಗೋಸ್ಕರ ಬಹು ಅವಶ್ಯವಾದದ್ದು.

Interlinear

Choose Theme