Home Bibles ನಿರ್ಗಮಕಾಂಡ 16:3 · ಕನ್ನಡ ಬೈಬಲ್
ನಿರ್ಗಮಕಾಂಡ 16:3 · ಕನ್ನಡ ಬೈಬಲ್

ಇಸ್ರಾಯೇಲ್‌ ಮಕ್ಕಳು ಅವರಿಗೆ--ನಾವು ಐಗುಪ್ತದೇಶದಲ್ಲಿ ಮಾಂಸದ ಪಾತ್ರೆ ಗಳ ಬಳಿಯಲ್ಲಿ ಕೂತುಕೊಂಡು ಸಾಕಾಗುವಷ್ಟು ರೊಟ್ಟಿ ಯನ್ನು ತಿನ್ನುತ್ತಿದ್ದಾಗ ಕರ್ತನ ಕೈಯಿಂದ ಸತ್ತುಹೋಗಿದ್ದರೆ ಒಳ್ಳೆದಾಗಿತ್ತು. ಈ ಸಭೆಯನ್ನೆಲ್ಲಾ ಸಾಯಿಸುವಂತೆ ನಮ್ಮನ್ನು ಈ ಅರಣ್ಯಕ್ಕೆ ಬರಮಾಡಿದ್ದೀರಿ ಅಂದರು.

Cross references

ನಿರ್ಗಮಕಾಂಡ 2:23

ಹೀಗಿರಲಾಗಿ ಬಹಳ ದಿನಗಳಾದ ಮೇಲೆ ಐಗುಪ್ತದ ಅರಸನು ಸತ್ತನು. ಇಸ್ರಾಯೇಲ್‌ ಮಕ್ಕಳು ದಾಸತ್ವದ ಕಾರಣದಿಂದ ನಿಟ್ಟುಸುರುಬಿಟ್ಟು ಕೂಗು ತ್ತಿದ್ದರು. ದಾಸತ್ವದ ನಿಮಿತ್ತವಾಗಿ ಅವರ ಕೂಗು ದೇವರ ಬಳಿಗೆ ಬಂತು.

ನಿರ್ಗಮಕಾಂಡ 5:21

ಅವ ರಿಗೆ--ಕರ್ತನು ನಿಮ್ಮನ್ನು ನೋಡಿ ನ್ಯಾಯತೀರಿಸಲಿ; ನೀವೇ ಫರೋಹನ ಮುಂದೆಯೂ ಅವನ ದಾಸರ ಮುಂದೆಯೂ ನಮ್ಮನ್ನು ಅವರು ಹೇಸಿಕೊಳ್ಳುವಂತೆ ಮಾಡಿದಿರಿ, ನಮ್ಮನ್ನು ಸಂಹರಿಸುವದಕ್ಕೆ ನೀವು ಅವರ ಕೈಗೆ ಕತ್ತಿಯನ್ನು ಕೊಟ್ಟಿರಿ ಅಂದರು.

ನಿರ್ಗಮಕಾಂಡ 14:11

ಅವರು ಮೋಶೆಗೆ--ಐಗುಪ್ತದಲ್ಲಿ ಸಮಾಧಿ ಗಳು ಇಲ್ಲದ ಕಾರಣ ನಾವು ಅರಣ್ಯದಲ್ಲಿ ಸಾಯುವ ಹಾಗೆ ನಮ್ಮನ್ನು ಕರಕೊಂಡು ಬಂದಿಯೋ? ಯಾಕೆ ನೀನು ಈ ಪ್ರಕಾರ ನಮಗೆ ಮಾಡಿ ನಮ್ಮನ್ನು ಐಗುಪ್ತ ದಿಂದ ಕರಕೊಂಡು ಬಂದಿ?

ನಿರ್ಗಮಕಾಂಡ 17:3

ಅಲ್ಲಿ ಜನರು ದಾಹಗೊಂಡು ಮೋಶೆಗೆ ವಿರುದ್ಧವಾಗಿ ಗುಣು ಗುಟ್ಟಿ--ನಮ್ಮನ್ನೂ ನಮ್ಮ ಮಕ್ಕಳನ್ನೂ ನಮ್ಮ ದನಗಳನ್ನೂ ದಾಹದಿಂದ ಕೊಲ್ಲುವದಕ್ಕಾಗಿ ಯಾಕೆ ಐಗುಪ್ತದೊಳ ಗಿಂದ ಇಲ್ಲಿಗೆ ಬರಮಾಡಿದಿ ಅಂದರು.

ಅಂಕೆಗಳ ಪುಸ್ತಕ 11:4

ಆಗ ಅವರೊಳಗಿದ್ದ ಮಿಶ್ರವಾದ ಗುಂಪಿನ ಜನರು ದುರಾಶೆಪಟ್ಟರು. ಇಸ್ರಾಯೇಲ್‌ ಮಕ್ಕಳು ಸಹ ತಿರಿಗಿ ಅತ್ತು--ನಮಗೆ ತಿನ್ನುವದಕ್ಕೆ ಮಾಂಸವನ್ನು ಕೊಡು ವವರು ಯಾರು?

ಅಂಕೆಗಳ ಪುಸ್ತಕ 11:5

ನಾವು ಐಗುಪ್ತದೇಶದಲ್ಲಿ ಉಚಿತ ವಾಗಿ ತಿಂದ ವಿಾನು ಸವತೆಕಾಯಿ ಕರ್ಬೂಜ ಕಾಡುಳ್ಳಿ ನೀರುಳ್ಳಿ ಬೆಳ್ಳುಳ್ಳಿ ಇವುಗಳನ್ನು ಜ್ಞಾಪಿಸಿಕೊಳ್ಳುತ್ತೇವೆ.

ಅಂಕೆಗಳ ಪುಸ್ತಕ 11:15

ನೀನು ಈ ಪ್ರಕಾರ ನನಗೆ ಮಾಡುವದಾ ಗಿದ್ದು ನಾನು ನಿನ್ನ ದೃಷ್ಟಿಯಲ್ಲಿ ದಯೆ ಹೊಂದಿದವ ನಾದರೆ ನನ್ನ ಕೇಡನ್ನು ನೋಡದಂತೆ ನನ್ನನ್ನು ಕೊಂದುಬಿಡು ಎಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.

ಅಂಕೆಗಳ ಪುಸ್ತಕ 11:20

ಅದು ನಿಮ್ಮ ಮೂಗಿನಿಂದ ಬಂದು ನಿಮಗೆ ಅಸಹ್ಯವಾಗುವ ತನಕ ಪೂರ್ತಿ ಒಂದು ತಿಂಗಳ ವರೆಗೆ ಮಾಂಸವನ್ನು ತಿನ್ನುವಿರಿ. ನಿಮ್ಮ ಮಧ್ಯದಲ್ಲಿರುವ ಕರ್ತನನ್ನು ನೀವು ಅಲಕ್ಷ್ಯಮಾಡಿ ಆತನ ಎದುರಿನಲ್ಲಿ ಅತ್ತು--ನಾವು ಯಾಕೆ ಐಗುಪ್ತದಿಂದ ಬಂದೆವು ಎಂದು ಹೇಳುತ್ತೀರಲ್ಲಾ ಅಂದನು.

ಅಂಕೆಗಳ ಪುಸ್ತಕ 14:2

ಇಸ್ರಾಯೇಲ್‌ ಮಕ್ಕಳೆಲ್ಲರೂ ಮೋಶೆಗೂ ಆರೋನ ರಿಗೂ ವಿರೋಧವಾಗಿ ಗುಣುಗುಟ್ಟಿದರು. ಸಭೆಯಲ್ಲಾ ಅವರಿಗೆ--ನಾವು ಐಗುಪ್ತ ದೇಶದಲ್ಲಿ ಸತ್ತಿದ್ದರೆ ಇಲ್ಲವೆ ಈ ಅರಣ್ಯದಲ್ಲಿ ಸತ್ತರೆ ನಮಗೆ ಒಳ್ಳೇದಾಗಿತ್ತು.

ಅಂಕೆಗಳ ಪುಸ್ತಕ 16:13

ನೀನು ಅರಣ್ಯ ದಲ್ಲಿ ನಮ್ಮನ್ನು ಸಾಯಿಸುವದಕ್ಕೆ ಹಾಲೂ ಜೇನೂ ಹರಿಯುವ ದೇಶದೊಳಗಿಂದ ನಮ್ಮನ್ನು ಕರೆದುಕೊಂಡು ಬಂದದ್ದು ನಿನಗೆ ಅಲ್ಪವಾಯಿತೋ? ಮತ್ತು ನೀನು ಅರಸನಾಗಿ ನಮ್ಮನ್ನು ಆಳಬೇಕೋ?

ಅಂಕೆಗಳ ಪುಸ್ತಕ 16:41

ಆದರೆ ಮರುದಿನದಲ್ಲಿ ಇಸ್ರಾಯೇಲ್‌ ಮಕ್ಕಳ ಸಭೆಯಲ್ಲಾ ಮೋಶೆ ಆರೋನರಿಗೆ ವಿರೋಧವಾಗಿ ಗುಣುಗುಟ್ಟುತ್ತಾ--ನೀವು ಕರ್ತನ ಜನರನ್ನು ಕೊಂದು ಹಾಕಿದ್ದೀರಿ ಅಂದರು.

ಅಂಕೆಗಳ ಪುಸ್ತಕ 20:3

ಜನರು ಮೋಶೆಯ ಸಂಗಡ ವ್ಯಾಜ್ಯವಾಡಿ ಹೇಳಿದ್ದೇನಂದರೆ--ನಮ್ಮ ಸಹೋದರರು ಕರ್ತನ ಮುಂದೆ ಸತ್ತುಹೋದಾಗಲೇ ನಾವು ಸಹ ಸತ್ತು ಹೋಗಿದ್ದರೆ ಚೆನ್ನಾಗಿತ್ತು.

ಅಂಕೆಗಳ ಪುಸ್ತಕ 20:4

ನಾವೂ ನಮ್ಮ ಪಶುಗಳೂ ಸಾಯುವ ಹಾಗೆ ನೀವು ಯಾಕೆ ಕರ್ತನ ಸಭೆಯನ್ನು ಈ ಅರಣ್ಯಕ್ಕೆ ತಂದಿರಿ?

ಅಂಕೆಗಳ ಪುಸ್ತಕ 21:5

ಆದಕಾರಣ ಜನರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತನಾಡಿ--ನಾವು ಅರಣ್ಯದಲ್ಲಿ ಸಾಯುವಹಾಗೆ ನಮ್ಮನ್ನು ಐಗುಪ್ತದೇಶದಿಂದ ಯಾಕೆ ಬರಮಾಡಿದ್ದೀರಿ? ಇಲ್ಲಿ ರೊಟ್ಟಿ ಇಲ್ಲ, ನೀರೂ ಇಲ್ಲ; ನಾವು ಈ ನಿಸ್ಸಾರ ವಾದ ರೊಟ್ಟಿಯನ್ನು ತಿಂದು ಅಸಹ್ಯಪಡುತ್ತೇವೆ ಅಂದರು.

ದ್ವಿತೀಯೋಪದೇಶಕಾಂಡ 8:3

ನಿನ್ನನ್ನು ಕುಂದಿಸಿ ಹಸಿ ಯುವಂತೆ ಆತನು ಮಾಡಿದನು. ರೊಟ್ಟಿ ಮಾತ್ರದಿಂದ ಮನುಷ್ಯನು ಬದುಕುವದಿಲ್ಲವೆಂದೂ ಕರ್ತನ ಬಾಯಿ ಯೊಳಗಿಂದ ಹೊರಡುವ ಪ್ರತಿಯೊಂದು ಮಾತಿ ನಿಂದಲೂ ಮನುಷ್ಯನು ಬದುಕುತ್ತಾನೆಂದು ನಿನಗೆ ತಿಳಿಸುವ ಹಾಗೆ ನೀನು ತಿಳಿಯದಂಥ ಮತ್ತು ನಿನ್ನ ಪಿತೃಗಳು ತಿಳಿಯದಂಥ ಮನ್ನವನ್ನು ನಿನಗೆ ಉಣ್ಣಲು ಕೊಟ್ಟನು.

ದ್ವಿತೀಯೋಪದೇಶಕಾಂಡ 28:67

ನಿನ್ನ ಹೃದಯದಲ್ಲಿ ಆಗುವ ಹೆದರಿಕೆಯ ನಿಮಿತ್ತವೂ ನಿನ್ನ ಕಣ್ಣುಗಳು ನೋಡುವ ನೋಟದ ನಿಮಿತ್ತವೂ ಮುಂಜಾನೆಯಲ್ಲಿ--ಅಯ್ಯೋ, ಸಂಜೆ ಆಗ ಬೇಕು ಅನ್ನುವಿ. ಸಂಜೆಯಲ್ಲಿ--ಅಯ್ಯೋ, ಮುಂಜಾನೆ ಆಗಬೇಕು ಅನ್ನುವಿ.ಇದಲ್ಲದೆ ಕರ್ತನು--ನೀನು ಇನ್ನು ಮೇಲೆ ನೋಡುವದಿಲ್ಲವೆಂದು ನಾನು ಹೇಳಿದ ಮಾರ್ಗದಿಂದ ಹಡಗುಗಳಲ್ಲಿ ನಿನ್ನನ್ನು ಐಗುಪ್ತ್ಯಕ್ಕೆ ತಿರಿಗಿ ಬರಮಾಡುವೆನು; ಅಲ್ಲಿ ದಾಸ ರಾಗಿಯೂ ದಾಸಿಗಳಾಗಿಯೂ ನಿಮ್ಮ ಶತ್ರುಗಳಿಗೆ ಮಾರಲ್ಪಡುವಿರಿ. ಆದರೆ ಕೊಂಡುಕೊಳ್ಳುವವ ನೊಬ್ಬನೂ ಇರುವದಿಲ್ಲ.

ಯೆಹೋಶುವ 7:7

ಇದಲ್ಲದೆ ಯೆಹೋಶುವನು--ಅಯ್ಯೋ, ಓ ಕರ್ತನಾದ ದೇವರೇ, ನಮ್ಮನ್ನು ನಾಶಮಾಡುವ ಹಾಗೆ ಅಮೋರಿ ಯರ ಕೈಯಲ್ಲಿ ಒಪ್ಪಿಸಿ ಕೊಡುವದಕ್ಕಾಗಿ ನೀನು ಈ ಜನರು ಯೊರ್ದನನ್ನು ದಾಟಮಾಡಿದ್ದೇನು? ನಮಗೆ ಇಷ್ಟೇ ಸಾಕೆಂದು ನಾವು ಯೊರ್ದನಿನ ಆಚೆಯಲ್ಲಿ ಇದ್ದರೆ ಒಳ್ಳೇದಾಗಿತ್ತು.

2 ಸಮುವೇಲ 18:33

ಆಗ ಅರಸನು ನಡುಗುತ್ತಾ ಊರ ಬಾಗಲು ಮೇಲಿರುವ ಕೊಠಡಿಗೆ ಏರಿ ಹೋದನು; ಹೋಗು ವಾಗ ಅತ್ತು--ನನ್ನ ಮಗನಾದ ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನಾದ ಅಬ್ಷಾಲೋಮನೇ ನಿನಗೆ ಬದಲಾಗಿ ನಾನು ಸತ್ತಿದ್ದರೆ ಉತ್ತಮವಾಗುತ್ತಿತ್ತು. ಅಬ್ಷಾಲೋಮನೇ, ನನ್ನ ಮಗನೇ ನನ್ನ ಮಗನೇ, ಅಂದನು.

ಯೋಬ 3:1

ಹೀಗಾದ ಮೇಲೆ ಯೋಬನು ತನ್ನ ಬಾಯಿತೆರದು ತನ್ನ ದಿವಸವನ್ನು ಶಪಿಸಿದನು.

ಯೋಬ 3:10

ಅದು ನನ್ನ ತಾಯಿಯ ಗರ್ಭದ ಬಾಗಲನ್ನು ಮುಚ್ಚಲಿಲ್ಲ; ದುಃಖವನ್ನು ನನ್ನ ಕಣ್ಣುಗಳಿಗೆ ಮರೆಮಾಡಲಿಲ್ಲ.

ಯೋಬ 3:20

ಕಷ್ಟದಲ್ಲಿರುವವನಿಗೆ ಬೆಳಕೂ ಕಹಿಯಾದ ಪ್ರಾಣ ವುಳ್ಳವರಿಗೆ ಜೀವವೂ ಯಾಕೆ ಕೊಡಲ್ಪಟ್ಟಿವೆ?

ಕೀರ್ತನೆಗಳು 78:19

ಹೌದು, ಅವರು ದೇವರಿಗೆ ವಿರೋಧ ವಾಗಿ ಮಾತನಾಡಿ--ದೇವರು ಅರಣ್ಯದಲ್ಲಿ ಮೇಜನ್ನು ಸಿದ್ಧ ಮಾಡಬಲ್ಲನೋ ಅಂದರು.

ಕೀರ್ತನೆಗಳು 107:5

ಹಸಿದು, ದಾಹಗೊಂಡು ಅವರ ಪ್ರಾಣವು ಅವರಲ್ಲಿ ಕುಗ್ಗಿಹೋಯಿತು.

ಯೆರೆಮಿಯ 2:6

ನಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿ ನಮ್ಮನ್ನು ಅರಣ್ಯದಲ್ಲಿ ಕಾಡೂ ಕುಣಿಗಳೂ ಉಳ್ಳ ದೇಶದಲ್ಲಿ, ಕ್ಷಾಮದ ಮತ್ತು ಮರಣದ ನೆರಳಾದಂಥ ದೇಶದಲ್ಲಿ, ಒಬ್ಬರೂ ಹಾದು ಹೋಗದೆ ಯಾರೂ ವಾಸಮಾಡದೆ ಇರುವಲ್ಲಿ ನಡಿಸಿದ ಕರ್ತನು ಎಲ್ಲಿ ಎಂದು ಅವರು ಅಂದುಕೊಳ್ಳಲಿಲ್ಲ.

ಯೆರೆಮಿಯ 20:14

ನಿಮ್ಮ ಕ್ರಿಯೆಗಳ ಫಲದ ಪ್ರಕಾರ ನಿಮ್ಮನ್ನು ಶಿಕ್ಷಿಸು ತ್ತೇನೆಂದು ಕರ್ತನು ಅನ್ನುತ್ತಾನೆ; ಅದರ ಅಡವಿಗೆ ಬೆಂಕಿಹಚ್ಚುತ್ತೇನೆ; ಅದರ ಸುತ್ತಲಿರುವದನ್ನೆಲ್ಲಾ ಅದು ತಿಂದುಬಿಡುವದು.

ವಿಲಾಪಗಳು 4:9

ಕತ್ತಿಯಿಂದ ಹತರಾದವರು ಹಸಿವೆ ಯಿಂದ ಹತರಾದವರಿಗಿಂತ ಲೇಸು, ಇವರು ಭೂಫಲ ಗಳಿಲ್ಲದೆ ಕ್ಷಾಮದಿಂದ ತಿವಿಯಲ್ಪಟ್ಟು ಕ್ಷೀಣಿಸಿ ಹೋಗುತ್ತಾರೆ.

ಯೋನ 4:8

ಆದದ್ದೇನಂದರೆ, ಸೂರ್ಯೋದಯವಾದಾಗ ದೇವರು ಉಗ್ರವಾದ ಮೂಡಣ ಗಾಳಿಯನ್ನು ಸಿದ್ಧ ಮಾಡಿದನು; ಆಗ ಬಿಸಿಲು ಯೋನನ ತಲೆಯ ಮೇಲೆ ಬಡಿದದ್ದರಿಂದ ಅವನು ಮೂರ್ಛೆಹೋಗಿ ತನ್ನಲ್ಲಿ ಮರಣವನ್ನು ಕೇಳಿಕೊಂಡು--ನಾನು ಬದುಕುವದಕ್ಕಿಂತ ಸಾಯುವದು ಒಳ್ಳೇದು ಅಂದನು.

ಅಪೋಸ್ತಲರ ಕೃತ್ಯಗಳು 26:29

ಆಗ ಪೌಲನು--ಈ ಬೇಡಿಗಳ ಹೊರತು ನೀನು ಮಾತ್ರವಲ್ಲದೆ ಈ ದಿವಸ ನನ್ನ ಮಾತುಗಳನ್ನು ಕೇಳುವವರೆಲ್ಲರೂ ನನ್ನ ಹಾಗೆ ಇರಬೇಕೆಂದು ನಾನು ದೇವರ ಮುಂದೆ ಇಚ್ಛೈಸುತ್ತೇನೆ ಎಂದು ಹೇಳಿದನು.

1 ಕೊರಿಂಥದವರಿಗೆ 4:8

ಈಗಾಗಲೇ ನೀವು ತೃಪ್ತರಾದಿರಿ, ಈಗಾಗಲೇ ಐಶ್ವರ್ಯವಂತರಾದಿರಿ, ನಾವಿಲ್ಲದೆ ನೀವು ಅರಸರಂತೆ ಆಳಿದಿರಿ; ನೀವು ಆಳುವಂತೆ ದೇವರು ಮಾಡಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು; ಆಗ ನಾವು ಸಹ ನಿಮ್ಮೊಂದಿಗೆ ಆಳುತ್ತಿದ್ದೆವು.

2 ಕೊರಿಂಥದವರಿಗೆ 11:1

ನನ್ನ ಬುದ್ಧಿಹೀನತೆಯನ್ನು ನೀವು ಸ್ವಲ್ಪ ಮಟ್ಟಿಗೆ ಸಹಿಸಿಕೊಳ್ಳಬೇಕೆಂದು ನಾನು ಅಪೇಕ್ಷಿಸುತ್ತೇನೆ; ನಿಜವಾಗಿಯೂ ನನ್ನನ್ನು ಸಹಿಸಿ ಕೊಳ್ಳಿರಿ;

Interlinear

Choose Theme