ನೀನು ನಿನ್ನ ಗಾಳಿಯನ್ನು ಊದಿದಾಗ ಸಮುದ್ರವು ಅವರನ್ನು ಮುಚ್ಚಿಕೊಂಡಿತು. ಅವರು ಸೀಸದಂತೆ ಮಹಾಜಲಗಳಲ್ಲಿ ಮುಳುಗಿ ಹೊದರು.
Cross references
ಆಗ ದೇವರು ನೋಹನನ್ನೂ ಅವನ ಸಂಗಡ ನಾವೆಯಲ್ಲಿದ್ದ ಎಲ್ಲಾ ಜೀವರಾಶಿ ಗಳನ್ನೂ ಪಶುಗಳನ್ನೂ ಜ್ಞಾಪಕಮಾಡಿಕೊಂಡು ದೇವರು ಭೂಮಿಯ ಮೇಲೆ ಗಾಳಿ ಬೀಸುವಂತೆ ಮಾಡಲಾಗಿ ನೀರು ತಗ್ಗಿತು.
ಆಗ ಮೋಶೆಯು ಸಮುದ್ರದ ಮೇಲೆ ತನ್ನ ಕೈಚಾಚಲಾಗಿ ಕರ್ತನು ರಾತ್ರಿಯೆಲ್ಲಾ ಬಲವಾದ ಮೂಡಣ ಗಾಳಿಯಿಂದ ಸಮುದ್ರವು ಹಿಂದಕ್ಕೆ ಹೋಗುವಂತೆ ಮಾಡಿ ಸಮುದ್ರವನ್ನು ಒಣನೆಲವನ್ನಾಗಿ ಮಾಡಿದನು; ಆಗ ನೀರುಗಳು ವಿಭಾಗವಾದವು.
ಆಗ ಮೋಶೆಯು ಸಮುದ್ರದ ಮೇಲೆ ಕೈಚಾಚಲಾಗಿ ಸಮುದ್ರವು ಬೆಳಗಾಗುವಾಗಲೇ ತನ್ನ ಶಕ್ತಿಗೆ ತಿರುಗಿಕೊಂಡಿತು. ಐಗುಪ್ತ್ಯರು ಅದಕ್ಕೆದುರಾಗಿ ಓಡಿಹೋದರು. ಕರ್ತನು ಐಗುಪ್ತ್ಯರನ್ನು ಸಮುದ್ರದ ಮಧ್ಯದಲ್ಲಿ ಸಂಹರಿಸಿದನು.
ಅಗಾಧಗಳು ಅವರನ್ನು ಮುಚ್ಚಿಕೊಂಡವು. ಅವರು ಕಲ್ಲಿನಂತೆ (ಸಮುದ್ರದ) ತಳಕ್ಕೆ ಮುಳುಗಿದರು.
ಐಗುಪ್ತದ ಸೈನ್ಯಕ್ಕೆ ಅವರ ಕುದುರೆಗಳಿಗೆ ಮತ್ತು ರಥಗಳಿಗೆ ಮಾಡಿದ್ದನ್ನೂ ಅವರು ನಿಮ್ಮನ್ನು ಹಿಂದಟ್ಟುವಾಗ ಕೆಂಪು ಸಮುದ್ರದ ನೀರು ಅವರ ಮೇಲೆ ಬರಮಾಡಿದ್ದನ್ನೂ ಕರ್ತನು ಇಂದಿನ ವರೆಗೆ ಅವರನ್ನು ನಾಶಮಾಡಿದ್ದನ್ನೂ
ಆ ಹೊತ್ತು ಅಲ್ಲಿ ದೊಡ್ಡ ಸಂಹಾರವಾಯಿತು; ಇಪ್ಪತ್ತು ಸಾವಿರ ಜನರು ಬಿದ್ದರು. ಅಲ್ಲಿನ ಯುದ್ಧವು ದೇಶವೆ ಲ್ಲಾದರ ಮೇಲೆ ವಿಸ್ತರಿಸಲ್ಪಟ್ಟಿತು. ಆ ಹೊತ್ತು ಜನರಲ್ಲಿ ಕತ್ತಿಗಿಂತ ಅಡವಿಯು ಹೆಚ್ಚಾದವರನ್ನು ನುಂಗಿಬಿಟ್ಟಿತು.
ನೀನು ಅವರ ಮುಂದೆ ಸಮುದ್ರವನ್ನು ವಿಭಾಗಿಸಿದ್ದರಿಂದ ಅವರು ಸಮುದ್ರದ ಮಧ್ಯದಲ್ಲಿ ಒಣ ಭೂಮಿಯಲ್ಲಿ ಹಾದುಹೋದರು. ಆದರೆ ಅವರನ್ನು ಹಿಂದಟ್ಟಿದವರನ್ನು ಅಗಾಧಗಳಲ್ಲಿ ಕಲ್ಲಿನ ಹಾಗೆ ಮಹಾ ಜಲರಾಶಿಗಳಲ್ಲಿ ದೊಬ್ಬಿ ಬಿಟ್ಟಿ.
ನೀನು ನಿನ್ನ ಬಲದಿಂದ ಸಮುದ್ರವನ್ನು ಭೇದಿಸಿದಿ; ತಿಮಿಂಗಿಲಗಳ ತಲೆಗಳನ್ನು ನೀರುಗಳಲ್ಲಿ ಜಜ್ಜಿಬಿಟ್ಟಿ.
ಭೂಮಿಯ ಅಂತ್ಯಗಳಿಂದ ಮೋಡಗಳನ್ನು ಏಳ ಮಾಡಿ, ಮಳೆಗೋಸ್ಕರ ಮಿಂಚು ಗಳನ್ನು ಮಾಡಿ, ಗಾಳಿಯನ್ನು ತನ್ನ ಉಗ್ರಾಣಗಳಿಂದ ಹೊರಗೆ ಬರಮಾಡುತ್ತಾನೆ.
ಆತನು ತನ್ನ ವಾಕ್ಯವನ್ನು ಕಳುಹಿಸಿ ಅವುಗಳನ್ನು ಕರಗಿಸುತ್ತಾನೆ; ತನ್ನ ಗಾಳಿಯನ್ನು ಬೀಸಮಾಡುತ್ತಾನೆ; ನೀರು ಹರಿಯುತ್ತದೆ.
ಕರ್ತನು ಐಗುಪ್ತ ಸಮುದ್ರದ ನಾಲಿಗೆಯನ್ನು ಸಂಪೂರ್ಣವಾಗಿ ನಾಶಮಾಡುವನು; ಆತನು ತನ್ನ ಬಲವಾದ ಗಾಳಿಯಿಂದ ನದಿಯ ಮೇಲೆ ಕೈಯನ್ನು ಜಾಡಿಸಿ ಅದನ್ನು ಏಳು ಹೊಳೆಗಳಾಗಿ ಹೊಡೆದು ಮನುಷ್ಯರ ಕೆರಗಳು ನೆನೆಯದಂತೆ ದಾಟಿಸು ವನು.ಇದಲ್ಲದೆ ಇಸ್ರಾಯೇಲ್ಯರು ಐಗುಪ್ತದೇಶ ದಿಂದ ಹೊರಟುಬಂದ ಕಾಲದಲ್ಲಿ ಅವರಿಗೆ ಹೇಗೆ ಮಾರ್ಗವು ಇತ್ತೋ ಹಾಗೆಯೇ ಅಶ್ಶೂರದಿಂದ ತಪ್ಪಿಸಿ ಕೊಂಡು ಬರುವ ತನ್ನ ಉಳಿದ ಜನರಿಗೆ ವಿಶಾಲ ವಾದ ಮಾರ್ಗವು ಇರುವದು.
ಓ ಯೆಹೂದವೇ, ನಿನ್ನ ಪಟ್ಟಣಗಳಷ್ಟು ನಿನ್ನ ದೇವರುಗಳು ಇದ್ದವು; ಯೆರೂಸಲೇಮಿಗೆ ಎಷ್ಟು ಬೀದಿಗಳೋ ಅಷ್ಟು ಬಲಿಪೀಠಗಳನ್ನು ನಾಚಿಕೆಗೆ ಅಂದರೆ ಅಷ್ಟು ಬಲಿ ಪೀಠಗಳನ್ನು ಬಾಳನಿಗೆ ಧೂಪವನ್ನರ್ಪಿಸುವದಕ್ಕೆ ಇಟ್ಟಿ ದ್ದೀರಿ.
ಇಗೋ, ಬೆಟ್ಟಗಳನ್ನು ರೂಪಿಸಿ ಗಾಳಿ ಯನ್ನು ನಿರ್ಮಿಸಿ ಮನುಷ್ಯನಿಗೆ ಅವನ ಯೋಚನೆ ಏನೆಂದು ತಿಳಿಸಿ ಉದಯವನ್ನು ಅಂಧಕಾರವನ್ನಾಗಿ ಮಾಡಿ ಭೂಮಿಯ ಉನ್ನತ ಸ್ಥಳಗಳನ್ನು ತುಳಿದು ಬಿಡುವಾತನು ಆತನೇ. ಕರ್ತನೂ ಸೈನ್ಯಗಳ ದೇವರೂ ಎಂಬದು ಆತನ ಹೆಸರು.
ಆದರೆ ಅವರು ಆಶ್ಚರ್ಯದಿಂದ--ಈತನು ಎಂಥಾ ಮನುಷ್ಯ ನಾಗಿರಬಹುದು! ಗಾಳಿಯೂ ಸಮುದ್ರವೂ ಈತನಿಗೆ ವಿಧೇಯವಾಗುತ್ತವಲ್ಲಾ ಅಂದರು.