Home Bibles ☰ Books ನಿರ್ಗಮಕಾಂಡ 14:27 · ಕನ್ನಡ ಬೈಬಲ್
ನಿರ್ಗಮಕಾಂಡ 14:27 · ಕನ್ನಡ ಬೈಬಲ್

ಆಗ ಮೋಶೆಯು ಸಮುದ್ರದ ಮೇಲೆ ಕೈಚಾಚಲಾಗಿ ಸಮುದ್ರವು ಬೆಳಗಾಗುವಾಗಲೇ ತನ್ನ ಶಕ್ತಿಗೆ ತಿರುಗಿಕೊಂಡಿತು. ಐಗುಪ್ತ್ಯರು ಅದಕ್ಕೆದುರಾಗಿ ಓಡಿಹೋದರು. ಕರ್ತನು ಐಗುಪ್ತ್ಯರನ್ನು ಸಮುದ್ರದ ಮಧ್ಯದಲ್ಲಿ ಸಂಹರಿಸಿದನು.

Cross references

ನಿರ್ಗಮಕಾಂಡ 14:21

ಆಗ ಮೋಶೆಯು ಸಮುದ್ರದ ಮೇಲೆ ತನ್ನ ಕೈಚಾಚಲಾಗಿ ಕರ್ತನು ರಾತ್ರಿಯೆಲ್ಲಾ ಬಲವಾದ ಮೂಡಣ ಗಾಳಿಯಿಂದ ಸಮುದ್ರವು ಹಿಂದಕ್ಕೆ ಹೋಗುವಂತೆ ಮಾಡಿ ಸಮುದ್ರವನ್ನು ಒಣನೆಲವನ್ನಾಗಿ ಮಾಡಿದನು; ಆಗ ನೀರುಗಳು ವಿಭಾಗವಾದವು.

ನಿರ್ಗಮಕಾಂಡ 15:1

ಆಗ ಮೋಶೆಯೂ ಇಸ್ರಾಯೇಲ್‌ ಮಕ್ಕಳೂ ಕರ್ತನಿಗೆ ಈ ಹಾಡನ್ನು ಹಾಡಿ ಹೇಳಿದ್ದೇನಂದರೆ--ನಾನು ಕರ್ತನಿಗೆ ಹಾಡುತ್ತೇನೆ; ಆತನು ಪ್ರಭಾವದಿಂದ ಜಯಶಾಲಿಯಾದನು; ಕುದುರೆ ಯನ್ನೂ (ಕುದುರೆಯ) ಸವಾರನನ್ನೂ ಸಮುದ್ರದಲ್ಲಿ ದೊಬ್ಬಿದ್ದಾನೆ.

ದ್ವಿತೀಯೋಪದೇಶಕಾಂಡ 11:4

ಐಗುಪ್ತದ ಸೈನ್ಯಕ್ಕೆ ಅವರ ಕುದುರೆಗಳಿಗೆ ಮತ್ತು ರಥಗಳಿಗೆ ಮಾಡಿದ್ದನ್ನೂ ಅವರು ನಿಮ್ಮನ್ನು ಹಿಂದಟ್ಟುವಾಗ ಕೆಂಪು ಸಮುದ್ರದ ನೀರು ಅವರ ಮೇಲೆ ಬರಮಾಡಿದ್ದನ್ನೂ ಕರ್ತನು ಇಂದಿನ ವರೆಗೆ ಅವರನ್ನು ನಾಶಮಾಡಿದ್ದನ್ನೂ

ಯೆಹೋಶುವ 4:18

ಆಗ ಆದದ್ದೇನಂದರೆ, ಕರ್ತನ ಒಡಂಬಡಿಕೆಯ ಮಂಜೂಷ ವನ್ನು ಹೊರುವ ಯಾಜಕರು ಯೊರ್ದನಿನ ಮಧ್ಯ ದಲ್ಲಿಂದ ತಮ್ಮ ಪಾದಗಳನ್ನು ಒಣಗಿದ ಭೂಮಿಗೆ ಇಟ್ಟಾಗ ಯೊರ್ದನಿನ ನೀರು ತಿರಿಗಿ ಮೊದಲಿನ ಹಾಗೆಯೇ ದಡಗಳ ಮೇಲೆಲ್ಲಾ ಹರಿಯಿತು.

ಯೆಹೋಶುವ 24:7

ಅವರು ಕರ್ತನಿಗೆ ಕೂಗಿದಾಗ ನಿಮಗೂ ಐಗುಪ್ತ್ಯರಿಗೂ ಮಧ್ಯದಲ್ಲಿ ಅಂಧಕಾರವನ್ನು ಇರಿಸಿ ಸಮುದ್ರವನ್ನು ಅವರ ಮೇಲೆ ಬರಮಾಡಿ ಅವರನ್ನು ಮುಚ್ಚಿಬಿಟ್ಟೆನು.

ನ್ಯಾಯಾಧಿಪತಿಗಳು 5:20

ಆಕಾಶದಲ್ಲಿ ಇರುವ ವುಗಳು ಯುದ್ಧಮಾಡಿದವು; ನಕ್ಷತ್ರಗಳು ತಮ್ಮ ಓಟಗ ಳಲ್ಲಿ ಸೀಸೆರನಿಗೆ ವಿರೋಧವಾಗಿ ಯುದ್ಧಮಾಡಿದವು.

ಕೀರ್ತನೆಗಳು 78:53

ಅವರನ್ನು ಸುರಕ್ಷಿತವಾಗಿ ನಡಿಸಿದಕಾರಣ ಅವರು ಹೆದರಲಿಲ್ಲ; ಆದರೆ ಸಮುದ್ರವು ಅವರ ಶತ್ರುಗಳನ್ನು ಮುಚ್ಚಿಬಿಟ್ಟಿತು.

ಕೀರ್ತನೆಗಳು 136:15

ಫರೋಹನನ್ನೂ ಅವನ ಸೈನ್ಯವನ್ನೂ ಕೆಂಪು ಸಮು ದ್ರದಲ್ಲಿ ಕೆಡವಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

ಹೆಬ್ರಿಯರಿಗೆ 11:29

ನಂಬಿಕೆಯಿಂದಲೇ ಇಸ್ರಾಯೇಲ್ಯರು ಒಣ ಭೂಮಿಯನ್ನು ದಾಟುವಂತೆ ಕೆಂಪು ಸಮುದ್ರವನ್ನು ದಾಟಿದರು; ಐಗುಪ್ತ ದೇಶದವರು ಅದನ್ನು ದಾಟು ವದಕ್ಕೆ ಪ್ರಯತ್ನಿಸಿ ಮುಳುಗಿಹೋದರು.

Interlinear

Choose Theme