Home Bibles ಎಸ್ತೇರ್ 7:2 · ಕನ್ನಡ ಬೈಬಲ್
ಎಸ್ತೇರ್ 7:2 · ಕನ್ನಡ ಬೈಬಲ್

ಎರಡನೇ ದಿನ ದ್ರಾಕ್ಷಾರಸದ ಔತಣಕ್ಕೆ ಬಂದಾಗ ಅರಸನು ಮತ್ತೂ ಎಸ್ತೇರಳಿಗೆ--ರಾಣಿಯಾದ ಎಸ್ತೇರಳೇ, ನಿನ್ನ ಬೇಡುವಿಕೆ ಏನು? ಅದು ನಿನಗೆ ಕೊಡಲ್ಪಡುವದು; ನಿನ್ನ ವಿಜ್ಞಾಪನೆ ಏನು? ಅದು ನನ್ನ ರಾಜ್ಯದ ಅರ್ಧದ ವರೆಗೆ ಇದ್ದರೂ ಕೊಡಲ್ಪಡುವದು ಅಂದನು.

Cross references

ಎಸ್ತೇರ್ 5:3

ಆಗ ಅರಸನು ಅವಳಿಗೆ--ರಾಣಿಯಾದ ಎಸ್ತೇರಳೇ, ನಿನಗೆ ಏನು ಬೇಕು? ನಿನ್ನ ವಿಜ್ಞಾಪನೆ ಏನು? ಅದು ರಾಜ್ಯದ ಅರ್ಧಭಾಗವಾಗಿದ್ದರೂ ನಿನಗೆ ಕೊಡಲ್ಪಡುವದ ಅಂದನು.

ಎಸ್ತೇರ್ 5:6

ದ್ರಾಕ್ಷಾರಸದ ಔತಣದಲ್ಲಿ ಅರಸನು ಎಸ್ತೇರಳಿಗೆ--ನೀನು ಬೇಡಿಕೊಳ್ಳುವದೇನು? ಅದು ನಿನಗೆ ಕೊಡಲ್ಪಡುವದು. ನಿನ್ನ ವಿಜ್ಞಾಪನೆ ಏನು? ಅದು ಅರ್ಧ ರಾಜ್ಯದವರೆಗೆ ಇದ್ದರೂ ಕೊಡಲ್ಪ ಡುವದು ಅಂದನು.

ಎಸ್ತೇರ್ 9:12

ಆಗ ಅರಸನು ರಾಣಿಯಾದ ಎಸ್ತೇರಳಿಗೆ--ಯೆಹೂ ದ್ಯರು ಶೂಷನಿನ ಅರಮನೆಯಲ್ಲಿ ಐನೂರು ಮಂದಿ ಯನ್ನೂ ಹಾಮಾನನ ಹತ್ತು ಮಕ್ಕಳನ್ನೂ ಕೊಂದು ನಾಶಮಾಡಿದ್ದಾರೆ. ಅವರು ಅರಸನ ಮಿಕ್ಕಾದ ಪ್ರಾಂತ್ಯ ಗಳಲ್ಲಿ ಮಾಡಿದ್ದೇನು? ಈಗ ನಿನ್ನ ವಿಜ್ಞಾಪನೆ ಏನು? ಅದು ನಿನಗೆ ಕೊಡಲ್ಪಡುವದು. ಇನ್ನೂ ನಿನ್ನ ಬೇಡುವಿಕೆ ಏನು? ಅದು ಮಾಡಲ್ಪಡುವದು ಎಂದು ಹೇಳಿದನು.

ಯೋಹಾನ 16:24

ನೀವು ಇದುವರೆಗೆ ನನ್ನ ಹೆಸರಿನಲ್ಲಿ ಏನೂ ಬೇಡಿಕೊಳ್ಳಲಿಲ್ಲ; ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಆಗ ನಿಮ್ಮ ಆನಂದವು ಪರಿಪೂರ್ಣವಾಗುವದು.

ಅಪೋಸ್ತಲರ ಕೃತ್ಯಗಳು 23:19

ಆಗ ಮುಖ್ಯ ನಾಯಕನು ಅವನ ಕೈಹಿಡಿದು ಒಂದು ಕಡೆಗೆ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ--ನೀನು ನನಗೆ ಹೇಳಬೇಕಾದದ್ದು ಏನು ಎಂದು ಅವನನ್ನು ಕೇಳಿದನು.

Interlinear

Choose Theme