Home Bibles ಅಪೋಸ್ತಲರ ಕೃತ್ಯಗಳು 23:19 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 23:19 · ಕನ್ನಡ ಬೈಬಲ್

ಆಗ ಮುಖ್ಯ ನಾಯಕನು ಅವನ ಕೈಹಿಡಿದು ಒಂದು ಕಡೆಗೆ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ--ನೀನು ನನಗೆ ಹೇಳಬೇಕಾದದ್ದು ಏನು ಎಂದು ಅವನನ್ನು ಕೇಳಿದನು.

Cross references

ನೆಹೆಮ್ಯ 2:4

ಅದಕ್ಕೆ ಅರಸನು ನನಗೆ--ನೀನು ಕೇಳುವದೇನು ಅಂದನು.

ಎಸ್ತೇರ್ 5:3

ಆಗ ಅರಸನು ಅವಳಿಗೆ--ರಾಣಿಯಾದ ಎಸ್ತೇರಳೇ, ನಿನಗೆ ಏನು ಬೇಕು? ನಿನ್ನ ವಿಜ್ಞಾಪನೆ ಏನು? ಅದು ರಾಜ್ಯದ ಅರ್ಧಭಾಗವಾಗಿದ್ದರೂ ನಿನಗೆ ಕೊಡಲ್ಪಡುವದ ಅಂದನು.

ಎಸ್ತೇರ್ 7:2

ಎರಡನೇ ದಿನ ದ್ರಾಕ್ಷಾರಸದ ಔತಣಕ್ಕೆ ಬಂದಾಗ ಅರಸನು ಮತ್ತೂ ಎಸ್ತೇರಳಿಗೆ--ರಾಣಿಯಾದ ಎಸ್ತೇರಳೇ, ನಿನ್ನ ಬೇಡುವಿಕೆ ಏನು? ಅದು ನಿನಗೆ ಕೊಡಲ್ಪಡುವದು; ನಿನ್ನ ವಿಜ್ಞಾಪನೆ ಏನು? ಅದು ನನ್ನ ರಾಜ್ಯದ ಅರ್ಧದ ವರೆಗೆ ಇದ್ದರೂ ಕೊಡಲ್ಪಡುವದು ಅಂದನು.

ಎಸ್ತೇರ್ 9:12

ಆಗ ಅರಸನು ರಾಣಿಯಾದ ಎಸ್ತೇರಳಿಗೆ--ಯೆಹೂ ದ್ಯರು ಶೂಷನಿನ ಅರಮನೆಯಲ್ಲಿ ಐನೂರು ಮಂದಿ ಯನ್ನೂ ಹಾಮಾನನ ಹತ್ತು ಮಕ್ಕಳನ್ನೂ ಕೊಂದು ನಾಶಮಾಡಿದ್ದಾರೆ. ಅವರು ಅರಸನ ಮಿಕ್ಕಾದ ಪ್ರಾಂತ್ಯ ಗಳಲ್ಲಿ ಮಾಡಿದ್ದೇನು? ಈಗ ನಿನ್ನ ವಿಜ್ಞಾಪನೆ ಏನು? ಅದು ನಿನಗೆ ಕೊಡಲ್ಪಡುವದು. ಇನ್ನೂ ನಿನ್ನ ಬೇಡುವಿಕೆ ಏನು? ಅದು ಮಾಡಲ್ಪಡುವದು ಎಂದು ಹೇಳಿದನು.

ಯೆರೆಮಿಯ 31:32

ಇಸ್ರಾಯೇಲಿನ ಮಕ್ಕಳೂ ಯೆಹೂದನ ಮಕ್ಕಳೂ ಅವರ ಅರಸರೂ ಪ್ರಧಾನರೂ ಯಾಜಕರೂ ಪ್ರವಾದಿ ಗಳೂ ಯೆಹೂದದ ಜನರೂ ಯೆರೂಸಲೇಮಿನ ನಿವಾಸಿಗಳೂ ಸಹಿತವಾಗಿ ನನಗೆ ಕೋಪೋದ್ರೇಕ ಎಬ್ಬಿಸುವ ಹಾಗೆ ಮಾಡಿದ ಎಲ್ಲಾ ಕೆಟ್ಟತನದ ನಿಮಿತ್ತ ನಾನು ಆ ಪಟ್ಟಣವನ್ನು ನನ್ನ ಸನ್ನಿಧಿಯಿಂದ ತೆಗೆದುಹಾಕಬೇಕು.

ಮಾರ್ಕ 8:23

ಆತನು ಆ ಕುರುಡನ ಕೈಹಿಡಿದು ಊರಿನ ಹೊರಗೆ ಕರಕೊಂಡು ಹೋಗಿ ಅವನ ಕಣ್ಣುಗಳ ಮೇಲೆ ಉಗುಳಿ ತನ್ನ ಕೈಗಳನ್ನು ಅವನ ಮೇಲೆ ಇಟ್ಟು ಏನಾದರೂ ಕಾಣುತ್ತದೋ ಎಂದು ಅವನನ್ನು ಕೇಳಿದನು.

ಮಾರ್ಕ 9:27

ಆದರೆ ಯೇಸು ಕೈ ಹಿಡಿದು ಅವನನ್ನು ಮೇಲಕ್ಕೆತ್ತಲು ಅವನು ಎದ್ದನು.

ಮಾರ್ಕ 10:51

ಯೇಸು ಅವನಿಗೆ--ನಾನು ನಿನಗೆ ಏನು ಮಾಡಬೇಕೆಂದು ನೀನು ಕೋರುತ್ತೀ ಎಂದು ಕೇಳಲು ಆ ಕುರುಡನು ಆತನಿಗೆ--ಕರ್ತನೇ, ನಾನು ನನ್ನ ದೃಷ್ಟಿಯನ್ನು ಹೊಂದುವಂತೆ ಮಾಡಬೇಕು ಅಂದನು.ಅದಕ್ಕೆ ಯೇಸು ಅವನಿಗೆ--ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಪಡಿಸಿದೆ ಅಂದನು. ಕೂಡಲೆ ಅವನು ತನ್ನ ದೃಷ್ಟಿಯನ್ನು ಹೊಂದಿ ಆ ಮಾರ್ಗದಲ್ಲಿ ಯೇಸು ವನ್ನು ಹಿಂಬಾಲಿಸಿದನು.

Interlinear

Choose Theme