Home Bibles ☰ Books ಎಸ್ತೇರ್ 2:10 · ಕನ್ನಡ ಬೈಬಲ್
ಎಸ್ತೇರ್ 2:10 · ಕನ್ನಡ ಬೈಬಲ್

ಆದರೆ ಎಸ್ತೇರಳು ತನ್ನ ಜನರಿಗೂ ತನ್ನ ಬಂಧುಗಳಿಗೂ ತಿಳಿಸದೆ ಇದ್ದಳು. ಯಾಕಂದರೆ ತಿಳಿಸಬಾರದೆಂದು ಮೊರ್ದೆಕೈ ಅವಳಿಗೆ ಆಜ್ಞಾಪಿಸಿದ್ದನು.

Cross references

ರೂತ 3:6

ಅವಳು ಆ ಕಣಕ್ಕೆ ಹೋಗಿ ತನ್ನ ಅತ್ತೆ ತನಗೆ ಆಜ್ಞಾಪಿಸಿದ ಪ್ರಕಾರವೆಲ್ಲಾ ಮಾಡಿದಳು.

ಎಸ್ತೇರ್ 2:7

ಅವನು ತನ್ನ ಚಿಕ್ಕಪ್ಪನ ಮಗಳಾದ ಎಸ್ತೇರಳೆಂಬ ಹದಸ್ಸಳನ್ನು ಸಾಕಿದವನಾಗಿದ್ದನು; ಅವ ಳಿಗೆ ತಂದೆ ತಾಯಿಗಳು ಇರಲಿಲ್ಲ. ಈ ಕನ್ನಿಕೆಯು ರೂಪವತಿಯಾಗಿಯೂ ಸೌಂದರ್ಯವಂತಳಾಗಿಯೂ ಇದ್ದಳು. ಅವಳ ತಂದೆ ತಾಯಿಗಳು ಸತ್ತುಹೋದ ತರುವಾಯ ಮೊರ್ದೆಕೈ ಅವಳನ್ನು ತನ್ನ ಮಗಳ ಹಾಗೆ ತೆಗೆದುಕೊಂಡನು.

ಎಸ್ತೇರ್ 2:20

ಎಸ್ತೇರಳು ಮೊರ್ದೆಕೈ ತನಗೆ ಆಜ್ಞಾ ಪಿಸಿದ ಹಾಗೆ ತನ್ನ ಬಂಧುಗಳಿಗೂ ತನ್ನ ಜನರಿಗೂ ತಿಳಿಸದೆ ಇದ್ದಳು. ಎಸ್ತೇರಳು ಮೊರ್ದೆಕೈಯ ಆರೈಕೆಯಲ್ಲಿ ಇದ್ದಾಗ ಅವನ ಆಜ್ಞೆಯನ್ನು ಕೈಕೊಂಡಿದ್ದಂತೆಯೇ ಅವಳು ಮಾಡಿದಳು.

ಎಸ್ತೇರ್ 3:8

ಆಗ ಹಾಮಾ ನನು ಅರಸನಾದ ಅಹಷ್ವೇರೋಷನಿಗೆ ಹೇಳಿ ದ್ದೇನಂದರೆ--ನಿನ್ನ ರಾಜ್ಯದ ಸಕಲ ಪ್ರಾಂತ್ಯಗಳಲ್ಲಿರುವ ಜನರೊಳಗೆ ಚದುರಿಸಲ್ಪಟ್ಟು ವ್ಯಾಪಿಸಿರುವ ಜನರಿ ದ್ದಾರೆ. ಅವರ ನ್ಯಾಯ ಪ್ರಮಾಣಗಳು ಸಕಲ ಜನರಿಗೆ ಪ್ರತಿಕೂಲವಾಗಿವೆ. ಅವರು ಅರಸನ ಆಜ್ಞೆಗಳನ್ನು ಕೈಕೊಳ್ಳುವದಿಲ್ಲ. ಆದಕಾರಣ ಅವರನ್ನು ಇರಗೊಡಿ ಸುವದು ಅರಸನ ಪ್ರಯೋಜನಕ್ಕೆ ತಕ್ಕದ್ದಲ್ಲ.

ಎಸ್ತೇರ್ 4:13

ಆಗ ಮೊರ್ದೆಕೈ ಎಸ್ತೇರಳಿಗೆ ಹೇಳಿ ಕಳುಹಿಸಿದ ಪ್ರತ್ಯುತ್ತರವೇನಂದರೆ--ನೀನು ಅರಮನೆಯಲ್ಲಿರುವ ದರಿಂದ ಸಮಸ್ತ ಯೆಹೂದ್ಯರಲ್ಲಿ ತಪ್ಪಿಸಿಕೊಳ್ಳುವೆ ನೆಂದು ನೆನಸಬೇಡ.

ಎಸ್ತೇರ್ 7:4

ಯಾಕಂದರೆ ನಾನೂ ನನ್ನ ಜನವೂ ಸಂಹರಿಸಲ್ಪಡುವದಕ್ಕೂ ಕೊಲ್ಲಲ್ಪ ಡುವದಕ್ಕೂ ನಾಶಮಾಡಲ್ಪಡುವದಕ್ಕೂ ಮಾರಲ್ಪಟ್ಟೆವು. ನಾವು ದಾಸದಾಸಿಗಳಾಗಿ ಮಾರಲ್ಪಟ್ಟಿದ್ದರೆ ನಾನು ಸುಮ್ಮನೆ ಇರುತ್ತಿದ್ದೆನು; ಆದರೆ ವೈರಿ ಅರಸನ ನಷ್ಟಕ್ಕೆ ಸರಿಯಾಗಿ ಕೊಡಲಾರನು ಅಂದಳು.

ಮತ್ತಾಯ 10:16

ಇಗೋ, ತೋಳಗಳ ಮಧ್ಯದಲ್ಲಿ ಕುರಿಗಳನ್ನು ಕಳು ಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಆದದ ರಿಂದ ನೀವು ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳಾಗಿರ್ರಿ.

ಎಫೆಸದವರಿಗೆ 6:1

ಮಕ್ಕಳೇ, ನೀವು ಕರ್ತನಲ್ಲಿ ನಿಮ್ಮ ತಂದೆ ತಾಯಿಗಳಿಗೆ ವಿಧೇಯರಾಗಿರ್ರಿ; ಇದು ನ್ಯಾಯವಾದದ್ದು.

Interlinear

Choose Theme