Home Bibles ☰ Books ಎಸ್ತೇರ್ 7:4 · ಕನ್ನಡ ಬೈಬಲ್
ಎಸ್ತೇರ್ 7:4 · ಕನ್ನಡ ಬೈಬಲ್

ಯಾಕಂದರೆ ನಾನೂ ನನ್ನ ಜನವೂ ಸಂಹರಿಸಲ್ಪಡುವದಕ್ಕೂ ಕೊಲ್ಲಲ್ಪ ಡುವದಕ್ಕೂ ನಾಶಮಾಡಲ್ಪಡುವದಕ್ಕೂ ಮಾರಲ್ಪಟ್ಟೆವು. ನಾವು ದಾಸದಾಸಿಗಳಾಗಿ ಮಾರಲ್ಪಟ್ಟಿದ್ದರೆ ನಾನು ಸುಮ್ಮನೆ ಇರುತ್ತಿದ್ದೆನು; ಆದರೆ ವೈರಿ ಅರಸನ ನಷ್ಟಕ್ಕೆ ಸರಿಯಾಗಿ ಕೊಡಲಾರನು ಅಂದಳು.

Cross references

ಆದಿಕಾಂಡ 37:26

ಆಗ ಯೆಹೂದನು ತನ್ನ ಸಹೋದರರಿಗೆ--ನಾವು ನಮ್ಮ ಸಹೋದರನನ್ನು ಕೊಂದುಹಾಕಿ ಅವನ ರಕ್ತವನ್ನು ಮರೆಮಾಡುವದರಲ್ಲಿ ಲಾಭವೇನು?

ದ್ವಿತೀಯೋಪದೇಶಕಾಂಡ 28:68

ಇದಲ್ಲದೆ ಕರ್ತನು--ನೀನು ಇನ್ನು ಮೇಲೆ ನೋಡುವದಿಲ್ಲವೆಂದು ನಾನು ಹೇಳಿದ ಮಾರ್ಗದಿಂದ ಹಡಗುಗಳಲ್ಲಿ ನಿನ್ನನ್ನು ಐಗುಪ್ತ್ಯಕ್ಕೆ ತಿರಿಗಿ ಬರಮಾಡುವೆನು; ಅಲ್ಲಿ ದಾಸ ರಾಗಿಯೂ ದಾಸಿಗಳಾಗಿಯೂ ನಿಮ್ಮ ಶತ್ರುಗಳಿಗೆ ಮಾರಲ್ಪಡುವಿರಿ. ಆದರೆ ಕೊಂಡುಕೊಳ್ಳುವವ ನೊಬ್ಬನೂ ಇರುವದಿಲ್ಲ.

ಯೆಹೋಶುವ 9:23

ಈಗ ನೀವು ಶಪಿಸಲ್ಪಟ್ಟವರು; ನಿಮ್ಮಲ್ಲಿ ಒಬ್ಬನಾದರೂ ದಾಸತ್ವ ದಿಂದ ಬಿಡಿಸಲ್ಪಡುವದಿಲ್ಲ; ನನ್ನ ದೇವರ ಮನೆಗೆ ಕಟ್ಟಿಗೆ ಕಡಿಯುವವರೂ ನೀರು ತರುವವರೂ ಆಗಿರು ವಿರಿ ಎಂದು ಹೇಳಿದನು.

1 ಸಮುವೇಲ 22:23

ನನ್ನ ಬಳಿಯಲ್ಲಿ ಇರು; ಭಯಪಡಬೇಡ; ಯಾಕಂದರೆ ನನ್ನ ಪ್ರಾಣವನ್ನು ತೆಗೆಯಬೇಕೆಂದಿರು ವವನೇ ನಿನ್ನ ಪ್ರಾಣವನ್ನು ತೆಗೆಯಬೇಕೆಂದಿರುತ್ತಾನೆ; ಆದರೆ ನೀನು ನನ್ನ ಸಂಗಡ ಸುರಕ್ಷಿತನಾಗಿರುವಿ ಅಂದನು.

ನೆಹೆಮ್ಯ 5:5

ಆದರೂ ನಮ್ಮ ಶರೀರವು ನಮ್ಮ ಸಹೋದರರ ಶರೀರದ ಹಾಗೆ, ನಮ್ಮ ಮಕ್ಕಳು ಅವರ ಮಕ್ಕಳ ಹಾಗೆ ಆದರೆ ಇಗೋ, ಸೇವಕರಾಗಿರಲು ನಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ದಾಸರಾಗುವದಕ್ಕೆ ತಂದಿದ್ದೇವೆ. ನಮ್ಮ ಕುಮಾರ್ತೆ ಯರಲ್ಲಿ ಕೆಲವರು ಆಗಲೇ ದಾಸರಾದರು. ಅವರನ್ನು ಬಿಡಿಸಲು ನಮಗೆ ಶಕ್ತಿ ಇಲ್ಲ. ಯಾಕಂದರೆ ನಮ್ಮ ಹೊಲಗಳೂ ದ್ರಾಕ್ಷೇ ತೋಟಗಳೂ ಅನ್ಯರಿಗೆ ಸೇರಿ ದವು ಅಂದರು.

ಎಸ್ತೇರ್ 3:9

ಅದು ಅರಸನಿಗೆ ಸಮ್ಮತಿಯಾದರೆ ಅವರು ಸಂಹರಿಸಲ್ಪಡುವ ಹಾಗೆ ಬರೆಯಲ್ಪಡಲಿ. ಆಗ ನಾನು ಅರಸನ ಬೊಕ್ಕಸಕ್ಕೆ ತರುವದಕ್ಕೆ ಈ ಕೆಲಸ ಮಾಡುವವರ ಕೈಗಳಲ್ಲಿ ಹತ್ತು ಸಾವಿರ ಬೆಳ್ಳಿಯ ತಲಾಂತುಗಳನ್ನು ಕೊಡು ವೆನು ಅಂದನು.

ಎಸ್ತೇರ್ 3:13

ಒಂದೇ ದಿನದಲ್ಲಿ ಅಂದರೆ ಅಡಾರ್‌ ತಿಂಗಳೆಂಬ ಹನ್ನೆರಡನೇ ತಿಂಗಳ ಹದಿಮೂರನೇ ದಿನದಲ್ಲಿ ಹಿರಿಯರೂ ಕಿರಿಯರೂ ಮಕ್ಕಳೂ ಸ್ತ್ರೀಯರೂ ಸಹಿತವಾಗಿ ಎಲ್ಲಾ ಯೆಹೂದ್ಯರನ್ನು ಸಂಹರಿಸುವದಕ್ಕೂ ಕೊಂದುಹಾಕು ವದಕ್ಕೂ ನಾಶಮಾಡುವದಕ್ಕೂ ಅವರ ಆಸ್ತಿಯನ್ನು ಕೊಳ್ಳೆಹೊಡೆಯುವದಕ್ಕೂ ಅರಸನ ಸಮಸ್ತ ಪ್ರಾಂತ್ಯಗಳಿಗೆ ಅಂಚೆಯವರ ಮೂಲಕ ಪತ್ರಿಕೆಗಳು ಕಳುಹಿಸ ಲ್ಪಟ್ಟವು.

ಎಸ್ತೇರ್ 4:7

ಆಗ ಮೊರ್ದೆಕೈ ತನಗೆ ಆದದ್ದನ್ನೂ ಹಾಮಾನನು ಯೆಹೂದ್ಯರನ್ನು ನಾಶಮಾಡುವ ನಿಮಿತ್ತ ಅರಸನ ಬೊಕ್ಕಸಕ್ಕೆ ಕೊಡಲು ವಾಗ್ದಾನಮಾಡಿಕೊಂಡ ಹಣ ವನ್ನೂ ಅವನಿಗೆ ತಿಳಿಸಿದನು.

ಎಸ್ತೇರ್ 7:6

ಅದಕ್ಕೆ ಎಸ್ತೇರಳು--ವೈರಿಯೂ ಶತ್ರುವೂ ಯಾರಂದರೆ ಈ ಕೆಟ್ಟವನಾದ ಹಾಮಾನನೇ ಅಂದಳು. ಆಗ ಹಾಮಾನನು ಅರಸನ, ರಾಣಿಯ ಸಮ್ಮುಖದಲ್ಲಿ ಹೆದರಿ ಕೊಂಡನು.

ಎಸ್ತೇರ್ 8:6

ಯಾಕಂದರೆ ನನ್ನ ಜನರ ಮೇಲೆ ಬರುವ ಕೆಡನ್ನು ನಾನು ನೋಡಿ ಹೇಗೆ ಸಹಿಸಲಿ? ಇಲ್ಲವೆ ನನ್ನ ಬಂಧುಗಳ ನಾಶನವನ್ನು ನಾನು ನೋಡಿ ಹೇಗೆ ಸಹಿಸಲಿ ಅಂದಳು.

ಎಸ್ತೇರ್ 8:11

ಅವುಗಳಲ್ಲಿ ಅರಸನು ಯೆಹೂದ್ಯರಿಗೆ ಕೊಟ್ಟದ್ದೇನಂದರೆ--ಅರಸ ನಾದ ಅಹಷ್ವೇರೋಷನ ಸಮಸ್ತ ಪ್ರಾಂತ್ಯಗಳಲ್ಲಿ, ಒಂದು ದಿನದಲ್ಲಿ ಅಡಾರ್‌ ತಿಂಗಳೆಂಬ ಹನ್ನೆರಡನೇ ತಿಂಗಳ ಹದಿಮೂರನೇ ದಿನದಲ್ಲಿ

ಕೀರ್ತನೆಗಳು 44:22

ಹೌದು, ನಿನ್ನ ನಿಮಿತ್ತ ದಿನ ವೆಲ್ಲಾ ಕೊಲ್ಲಲ್ಪಡುತ್ತೇವೆ; ಕೊಯ್ಗುರಿಗಳ ಹಾಗೆ ಎಣಿಸಲ್ಪಡುತ್ತೇವೆ.

ಯೋವೇಲ 3:6

ಯೆಹೂದದ ಮಕ್ಕಳನ್ನೂ ಯೆರೂಸಲೇಮಿನ ಮಕ್ಕ ಳನ್ನೂ ತಮ್ಮ ಪ್ರಾಂತ್ಯಗಳಿಂದ ದೂರ ಮಾಡುವ ಹಾಗೆ ಗ್ರೀಕರಿಗೆ ಮಾರಿದ್ದೀರಿ.

ಆಮೋಸ 2:6

ಕರ್ತನು ಹೀಗೆ ಹೇಳುತ್ತಾನೆ--ಇಸ್ರಾಯೇಲಿನ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತವಾಗಿ ನಾನು ಅವರನ್ನು ದಂಡನೆಯಿಂದ ತಪ್ಪಿಸುವದಿಲ್ಲ. ಅವರು ನೀತಿವಂತರನ್ನು ಬೆಳ್ಳಿಗೆ ಬಡವರನ್ನು ಕೆರಗಳ ಜೋಡಿಗೆ ಮಾರಿದರು.

Interlinear

Choose Theme