ಹೀಗೆ ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಇದ್ದ ಎಲ್ಲರಿಗಿಂತಲೂ ನಾನು ಅಭಿವೃದ್ಧಿ ಹೊಂದಿ ದೊಡ್ಡವನಾಗಿದ್ದೆನು.
Cross references
ಇಗೋ, ನಾನು ನಿನ್ನ ಮಾತುಗಳ ಪ್ರಕಾರವೇ ಮಾಡಿದೆನು. ಇಗೋ, ನಿನಗಿಂತ ಮುಂಚೆ ನಿನಗೆ ಸಮಾನವಾದವನು ಇಲ್ಲದ ಹಾಗೆಯೂ ನಿನ್ನ ತರುವಾಯ ನಿನ್ನಂಥವನು ಯಾವನೂ ಏಳದ ಹಾಗೆಯೂ ನಿನಗೆ ಜ್ಞಾನವೂ ಗ್ರಹಿಕೆಯುಳ್ಳ ಹೃದ ಯವನ್ನು ಕೊಟ್ಟಿದ್ದೇನೆ.
ಆದರೆ ನಾನು ಬಂದು ನನ್ನ ಕಣ್ಣು ಗಳಿಂದ ನೋಡುವವರೆಗೂ ಆ ಮಾತುಗಳನ್ನು ನಂಬದೆ ಹೋದೆನು. ಇಗೋ, ಇದರಲ್ಲಿ ಅರ್ಧವೂ ನನಗೆ ಹೇಳಲ್ಪಟ್ಟಿದ್ದಿಲ್ಲ; ನಿನ್ನ ಜ್ಞಾನವೂ ಸಂಪತ್ತೂ ನಾನು ಕೇಳಿದ ಕೀರ್ತಿಗಿಂತ ಅಧಿಕವಾಗಿರುವದು.
ಹೀಗೆಯೇ ಅರಸನಾದ ಸೊಲೊಮೋನನು ಐಶ್ವರ್ಯದಿಂದಲೂ ಜ್ಞಾನ ದಿಂದಲೂ ಭೂಲೋಕದ ಸಮಸ್ತ ಅರಸುಗಳಿಗಿಂತ ದೊಡ್ಡವನಾಗಿದ್ದನು.
ಇದಲ್ಲದೆ ಕರ್ತನು ಸಮಸ್ತ ಇಸ್ರಾಯೇಲಿನ ಸಮ್ಮುಖದಲ್ಲಿ ಸೊಲೊಮೋನನನ್ನು ಅಧಿಕವಾಗಿ ಹೆಚ್ಚಿಸಿ ಇಸ್ರಾಯೇ ಲಿನಲ್ಲಿ ಅವನಿಗಿಂತ ಮುಂಚೆ ಇದ್ದ ಯಾವ ಅರಸ ನಿಗಾದರೂ ಇಲ್ಲದಂಥ ರಾಜ್ಯದ ಮಹಿಮೆಯನ್ನು ಅವನಿಗೆ ಕೊಟ್ಟನು.
ದಾವೀದನ ಮಗನಾದ ಸೊಲೊಮೋ ನನು ತನ್ನ ರಾಜ್ಯದಲ್ಲಿ ಬಲಗೊಂಡನು. ಅವನ ದೇವರಾದ ಕರ್ತನು ಅವನ ಸಂಗಡ ಇದ್ದು ಅವನನ್ನು ಅಧಿಕವಾಗಿ ಹೆಚ್ಚಿಸಿದನು.
ಹೀಗೆಯೇ ಅರಸನಾದ ಸೊಲೊಮೋನನು ಐಶ್ವರ್ಯದಲ್ಲಿಯೂ ಜ್ಞಾನದ ಲ್ಲಿಯೂ ಭೂಮಿಯ ಸಮಸ್ತ ಅರಸುಗಳಿಗಿಂತ ದೊಡ್ಡವನಾಗಿದ್ದನು.
ನಾನು ನನ್ನ ಮನಸ್ಸಿನಲ್ಲಿ ಯೋಚಿಸುತ್ತಾ--ಇಗೋ, ನಾನು ದೊಡ್ಡ ಸ್ಥಾನಕ್ಕೆ ಬಂದಿದ್ದೇನೆ ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಇದ್ದವರೆಲ್ಲರಿಗಿಂತ ನಾನು ಜ್ಞಾನವನ್ನು ಸಂಪಾದಿಸಿದ್ದೇನೆ. ಹೌದು, ಜ್ಞಾನದ ತಿಳುವಳಿಕೆಯ ದೊಡ್ಡ ಅನುಭವವು ನನ್ನ ಹೃದಯಕ್ಕೆ ಆಯಿತು ಎಂದು ಹೇಳಿದೆನು.