Home Bibles ದ್ವಿತೀಯೋಪದೇಶಕಾಂಡ 9:19 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 9:19 · ಕನ್ನಡ ಬೈಬಲ್

ಕರ್ತನು ನಿಮ್ಮನ್ನು ನಾಶಮಾಡುವ ಹಾಗೆ ನಿಮ್ಮ ಮೇಲೆ ಮಾಡುವ ಕೋಪ ರೌದ್ರಗಳಿಗೆ ಹೆದರಿದೆನು; ಆ ಕಾಲದಲ್ಲಿಯೂ ಕರ್ತನು ನನ್ನ ಪ್ರಾರ್ಥನೆ ಯನ್ನು ಕೇಳಿದನು.

Cross references

ನಿರ್ಗಮಕಾಂಡ 32:10

ಹೀಗಿರುವದರಿಂದ ನನ್ನ ಕೋಪವು ಅವರ ಮೇಲೆ ಉರಿದು ಅವರನ್ನು ದಹಿಸಿ ಬಿಡುವಂತೆ ನನ್ನನ್ನು ಬಿಡು. ತರುವಾಯ ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡುವೆನು ಅಂದನು.

ನಿರ್ಗಮಕಾಂಡ 32:14

ಆಗ ಕರ್ತನು ತನ್ನ ಜನರಿಗೆ ಮಾಡುತ್ತೇನೆಂದು ಹೇಳಿದ ಕೇಡಿನ ವಿಷಯದಲ್ಲಿ ಮನಸ್ಸನ್ನು ಬದಲಾಯಿಸಿ ಕೊಂಡನು.

ನಿರ್ಗಮಕಾಂಡ 33:17

ಅದಕ್ಕೆ ಕರ್ತನು ಮೋಶೆಗೆ--ನೀನು ಆಡಿದ ಈ ಮಾತಿನಂತೆಯೇ ನಾನು ಇದನ್ನು ಮಾಡುತ್ತೇನೆ. ನನ್ನ ದೃಷ್ಟಿಯಲ್ಲಿ ನಿನಗೆ ಕೃಪೆ ದೊರಕಿತು. ನಾನು ನಿನ್ನನ್ನು ಹೆಸರಿನಿಂದ ತಿಳಿದಿದ್ದೇನೆ ಅಂದನು.

ಅಂಕೆಗಳ ಪುಸ್ತಕ 11:2

ಆಗ ಜನರು ಮೋಶೆಗೆ ಕೂಗಿಕೊಂಡದ್ದರಿಂದ ಮೋಶೆಯು ಕರ್ತನಿಗೆ ಪ್ರಾರ್ಥನೆ ಮಾಡಿದನು. ಆಗ ಬೆಂಕಿಯು ಆರಿಹೋಯಿತು.

ದ್ವಿತೀಯೋಪದೇಶಕಾಂಡ 9:8

ಹೋರೇಬಿನಲ್ಲಿಯೂ ಕರ್ತನಿಗೆ ಕೋಪವನ್ನೆಬ್ಬಿಸಿದಾಗ ಕರ್ತನು ನಿಮ್ಮನ್ನು ನಾಶಮಾಡುವ ಹಾಗೆ ನಿಮ್ಮ ಮೇಲೆ ಸಿಟ್ಟುಮಾಡಿ ಕೊಂಡನು.

ದ್ವಿತೀಯೋಪದೇಶಕಾಂಡ 10:10

ಇದಲ್ಲದೆ ನಾನು ಮುಂಚಿನಂತೆ ನಾಲ್ವತ್ತು ಹಗಲು ನಾಲ್ವತ್ತು ರಾತ್ರಿ ಬೆಟ್ಟದಲ್ಲಿ ಇದ್ದೆನು. ಕರ್ತನು ಆ ಕಾಲದಲ್ಲಿ ಸಹ ನನ್ನ ಪ್ರಾರ್ಥನೆಯನ್ನು ಕೇಳಿ ನಿನ್ನನ್ನು ನಾಶಮಾಡುವದಕ್ಕೆ ಕರ್ತನು ಇಷ್ಟಪಡಲಿಲ್ಲ.

ನೆಹೆಮ್ಯ 1:2

ಆಗ ನಾನು ಸೆರೆಯಿಂದ ತಪ್ಪಿಸಿಕೊಂಡ ಯೆಹೂದ್ಯರನ್ನು ಕುರಿತೂ ಯೆರೂಸಲೇಮನ್ನು ಕುರಿತೂ ಅವರನ್ನು ವಿಚಾರಿಸಿದೆನು.

ಕೀರ್ತನೆಗಳು 99:6

ಆತನ ಯಾಜಕರಲ್ಲಿ ಮೋಶೆಯೂ ಆರೋನನೂ ಆತನ ಹೆಸರನ್ನು ಕರೆಯುವವರಲ್ಲಿ ಸಮುವೇಲನೂ; ಅವರು ಕರ್ತನನ್ನು ಕರೆದಾಗ ಆತನು ಅವರಿಗೆ ಉತ್ತರ ಕೊಟ್ಟನು.

ಕೀರ್ತನೆಗಳು 106:19

ಅವರು ಹೋರೇಬಿ ನಲ್ಲಿ ಕರುವನ್ನು ಮಾಡಿ ಎರಕದ ವಿಗ್ರಹಕ್ಕೆ ಅಡ್ಡ ಬಿದ್ದರು.

ಕೀರ್ತನೆಗಳು 106:23

ಆದದರಿಂದ ಆತನು ಅವರನ್ನು ನಾಶಮಾಡುತ್ತೇನೆಂದು ಹೇಳಿದನು. ಆದರೆ ಆತನು ಆದುಕೊಂಡ ಮೋಶೆಯು ಆತನ ಕೋಪ ವನ್ನು ತಿರುಗಿಸುವ ಹಾಗೆ ಆಪತ್ತಿನಲ್ಲಿ ಆತನ ಮುಂದೆ ನಿಂತುಕೊಂಡನು.

ಆಮೋಸ 7:2

ಆದದ್ದೇ ನಂದರೆ, ಅವು ಆ ದೇಶದ ಹುಲ್ಲನ್ನು ತಿಂದು ಮುಗಿಸಿದ ಮೇಲೆ ನಾನು--ಓ ಕರ್ತನಾದ ದೇವರೇ, ನನ್ನನ್ನು ಮನ್ನಿಸು; ಯಾಕೋಬನು ಹೇಗೆ ನಿಲ್ಲುವನು? ಅದು ಸಣ್ಣ ಜನಾಂಗ ಎಂದು ವಿಜ್ಞಾಪಿಸಿ ಕೊಳ್ಳಲು

ಆಮೋಸ 7:5

ಆಗ ನಾನು--ಓ ದೇವರಾದ ಕರ್ತನೇ, ನಿಲ್ಲಿಸಿಬಿಡು ಎಂದು ಬೇಡಿಕೊಳ್ಳುತ್ತೇನೆ; ಯಾಕೋಬು ಯಾರಿಂದ ಎಬ್ಬಿಸ ಲ್ಪಟ್ಟಿತು? ಅದು ಚಿಕ್ಕ ಜನಾಂಗ ಎಂದು ಹೇಳಿದನು.

ಲೂಕ 12:4

ನನ್ನ ಸ್ನೇಹಿತರಾದ ನಿಮಗೆ ನಾನು ಹೇಳುವದೇನಂದರೆ--ದೇಹವನ್ನು ಕೊಂದು ಅದಕ್ಕಿಂತ ಹೆಚ್ಚೇನೂ ಮಾಡಲಾರ ದವರಿಗೆ ಹೆದರಬೇಡಿರಿ.

ಯಾಕೋಬ 5:16

ನೀವು ಸ್ವಸ್ಥವಾಗಬೇಕಾದರೆ ನಿಮ್ಮ ತಪ್ಪುಗಳನ್ನು ಒಬ್ಬರಿಗೊಬ್ಬರು ಅರಿಕೆಮಾಡಿ ಒಬ್ಬರಿ ಗೋಸ್ಕರ ಒಬ್ಬರು ಪ್ರಾರ್ಥಿಸಿರಿ; ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಫಲಕಾರಿಯಾಗುತ್ತದೆ.

Interlinear

Choose Theme