ಆದರೆ ನಾನು ಈ ದೇಶದಲ್ಲಿ ಸಾಯಲೇಬೇಕು. ನಾನು ಯೊರ್ದನಿನ ಆಚೆಗೆ ಹೋಗ ತಕ್ಕದ್ದಲ್ಲ, ಆದರೆ ನೀವು ಆಚೆಗೆ ಹೋಗಿ ಆ ಒಳ್ಳೇ ದೇಶವನ್ನು ಸ್ವಾಧೀನ ಮಾಡಿಕೊಳ್ಳಿರಿ.
Cross references
ನೀನು ಮಿದ್ಯಾನ್ಯರ ಕಡೆಯಿಂದ ಇಸ್ರಾಯೇಲ್ ಮಕ್ಕಳ ಮುಯ್ಯನ್ನು ತೀರಿಸು, ತರು ವಾಯ ನಿನ್ನ ಜನರ ಸಂಗಡ ನೀನು ಕೂಡಿಸಲ್ಪಡುವಿ ಅಂದನು.
ನನ್ನ ಮೇಲೆಯೂ ಕರ್ತನು ನಿಮ್ಮ ದೆಸೆಯಿಂದ ಕೋಪಗೊಂಡು--ನೀನು ಸಹ ಅದರಲ್ಲಿ ಪ್ರವೇಶಿಸು ವದಿಲ್ಲ.
ಯೊರ್ದನಿನ ಆಚೆಯಲ್ಲಿರುವ ಆ ಒಳ್ಳೇ ದೇಶವನ್ನೂ ಆ ಒಳ್ಳೇ ಬೆಟ್ಟವನ್ನೂ ಲೆಬನೋನನ್ನೂ ನೋಡುವದಕ್ಕೆ ಅಪ್ಪಣೆಯಾಗಬೇಕು ಎಂಬದೇ.
ಪಿಸ್ಗಾದ ತುದಿಗೆ ಏರಿ ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಪೂರ್ವಕ್ಕೂ ಕಣ್ಣುಗಳನ್ನೆತ್ತಿ ಅದನ್ನು ಕಣ್ಣಾರೆ ನೋಡು; ಆದರೆ ಈ ಯೊರ್ದನನ್ನು ನೀನು ದಾಟಿಹೋಗುವದಿಲ್ಲ.
ಅವನು ಯೆಹೂದದಿಂದ ಬಂದ ದೇವರ ಮನುಷ್ಯನಿಗೆ--ನೀನು ಕರ್ತನ ಮಾತಿಗೆ ತಿರುಗಿಬಿದ್ದು ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾ ಪಿಸಿದ ಆಜ್ಞೆಯನ್ನು ಕೈಕೊಳ್ಳದೆ ಹಿಂದಕ್ಕೆ ಬಂದುರೊಟ್ಟಿ ತಿನ್ನಬೇಡ, ನೀರು ಕುಡಿಯಬೇಡ ಎಂದು ಕರ್ತನು ನಿನಗೆ ಹೇಳಿದ ಸ್ಥಳದಲ್ಲಿ
ಭೂಮಿಯ ಎಲ್ಲಾ ಕುಟುಂಬಗಳಲ್ಲಿ ನಿಮ್ಮನ್ನು ಮಾತ್ರವೇ ತಿಳಿದಿದ್ದೇನೆ; ಆದದರಿಂದ ನಾನು ನಿಮ್ಮ ಎಲ್ಲಾ ಅಕ್ರಮಗಳಿಗಾಗಿ ಶಿಕ್ಷಿಸುತ್ತೇನೆ.
ಕರ್ತನು ತಾನು ಪ್ರೀತಿಸುವವನನ್ನೇ ಶಿಕ್ಷಿಸು ತ್ತಾನೆ; ತಾನು ಸೇರಿಸಿಕೊಳ್ಳುವ ಪ್ರತಿಯೊಬ್ಬ ಮಗನನ್ನು ಹೊಡೆಯುತ್ತಾನೆ ಎಂಬದು.
ಹೌದು, ನಾನು ನನ್ನ (ದೇಹವೆಂಬ) ಗುಡಾರದಲ್ಲಿರುವ ತನಕ ನಿಮ್ಮನ್ನು ಜ್ಞಾಪಕಪಡಿಸಿ ಪ್ರೇರಿಸುವದು ಯುಕ್ತವೆಂದೆಣಿಸಿದ್ದೇನೆ.