Home Bibles ದ್ವಿತೀಯೋಪದೇಶಕಾಂಡ 3:25 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 3:25 · ಕನ್ನಡ ಬೈಬಲ್

ಯೊರ್ದನಿನ ಆಚೆಯಲ್ಲಿರುವ ಆ ಒಳ್ಳೇ ದೇಶವನ್ನೂ ಆ ಒಳ್ಳೇ ಬೆಟ್ಟವನ್ನೂ ಲೆಬನೋನನ್ನೂ ನೋಡುವದಕ್ಕೆ ಅಪ್ಪಣೆಯಾಗಬೇಕು ಎಂಬದೇ.

Cross references

ನಿರ್ಗಮಕಾಂಡ 3:8

ಆದಕಾರಣ ಅವರನ್ನು ಐಗುಪ್ತ್ಯರ ಕೈಯೊ ಳಗಿಂದ ಬಿಡುಗಡೆ ಮಾಡುವದಕ್ಕೂ ಆ ದೇಶದಿಂದ ಬಿಡಿಸಿ ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ನಡಿಸಿ ಕೊಂಡು ಹೋಗುವದಕ್ಕೂ ಇಳಿದು ಬಂದಿದ್ದೇನೆ.

ಅಂಕೆಗಳ ಪುಸ್ತಕ 32:5

ಆದದರಿಂದ ನಮಗೆ ನಿಮ್ಮ ದೃಷ್ಟಿಯಲ್ಲಿ ದಯವು ಸಿಕ್ಕಿದ್ದಾದರೆ ಈ ದೇಶವನ್ನು ನಿಮ್ಮ ಸೇವಕರಿಗೆ ಸ್ವಾಸ್ತ್ಯಕ್ಕಾಗಿ ಕೊಡಬೇಕು; ನಮ್ಮನ್ನು ಯೊರ್ದನ್‌ ನದಿಯ ಆಚೆಗೆ ತಕ್ಕೊಂಡು ಹೋಗಬೇಡಿರಿ ಎಂದು ಹೇಳಿದರು.

ದ್ವಿತೀಯೋಪದೇಶಕಾಂಡ 4:21

ನಾನು ಯೊರ್ದನಿನ ಆಚೆಗೆ ಹೋಗದ ಹಾಗೆ ಯೂ ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ಆ ಒಳ್ಳೇ ದೇಶದಲ್ಲಿ ಪ್ರವೇಶಿಸದ ಹಾಗೆ ಯೂ ನಿಮ್ಮ ನಿಮಿತ್ತ ಕರ್ತನು ನನ್ನ ಮೇಲೆ ಕೋಪ ಮಾಡಿಕೊಂಡು ಪ್ರಮಾಣಮಾಡಿದನು.

ದ್ವಿತೀಯೋಪದೇಶಕಾಂಡ 11:11

ಆದರೆ ನೀವು ಸ್ವಾಧೀನಮಾಡಿ ಕೊಳ್ಳುವದಕ್ಕೆ ಹೋಗುವ ದೇಶವು ಬೆಟ್ಟಗಳೂ ತಗ್ಗು ಗಳೂ ಉಳ್ಳ ದೇಶವೇ; ಅದು ಆಕಾಶದ ಮಳೆಯಿಂದ ನೀರು ಕುಡಿಯುತ್ತದೆ;

ಯೆಹೆಜ್ಕೇಲ 20:6

ನಾನು ಅವರಿಗೆ ನನ್ನ ಕೈಯೆತ್ತಿ--ಐಗುಪ್ತ ದೇಶದಿಂದ ಹೊರಗೆ ತಂದು ಅವರಿಗೋಸ್ಕರ ನಾನೇ ನೋಡಿಕೊಂಡಂಥ ಹಾಲೂ ಜೇನೂ ಹರಿಯುವ ಕೀರ್ತಿಯುಳ್ಳ ಎಲ್ಲಾ ದೇಶಗಳಿಗೂ ಅವರನ್ನು ಆ ದಿವಸದಲ್ಲಿ ಕರೆತಂದೆನು.

Interlinear

Choose Theme