ದ್ವಿತೀಯೋಪದೇಶಕಾಂಡ 21:20 · ಕನ್ನಡ ಬೈಬಲ್
ಪಟ್ಟಣದ ಹಿರಿಯರಿಗೆ--ಈ ನಮ್ಮ ಮಗನು ಮೊಂಡನೂ ತಿರುಗಿ ಬೀಳುವವನೂ ನಮ್ಮ ಮಾತು ಕೇಳದವನೂ ಹೊಟ್ಟೇ ಬಾಕನೂ ಕುಡಿಯುವವನೂ ಆಗಿದ್ದಾನೆ ಎಂದು ಹೇಳಬೇಕು.
Cross references
ಸಾಮೇತಿಗಳು 19:26
ತಂದೆಯನ್ನು ನಷ್ಟಪಡಿಸಿ ತಾಯಿಯನ್ನು ಓಡಿಸುವವನು ನಾಚಿಕೆಯನ್ನುಂಟು ಮಾಡಿ ನಿಂದೆಯನ್ನು ತರುತ್ತಾನೆ.
ಸಾಮೇತಿಗಳು 20:1
ದ್ರಾಕ್ಷಾರಸವು ಪರಿಹಾಸ್ಯಕರವಾಗಿದೆ; ಮಾದಕ ಮದ್ಯವು ಉದ್ರೇಕಿಸುತ್ತದೆ. ಇದ ರಿಂದ ಮೋಸಹೋದವನು ಜ್ಞಾನಿಯಲ್ಲ.
ಸಾಮೇತಿಗಳು 23:19
ನನ್ನ ಮಗನೇ, ಕೇಳಿ ಜ್ಞಾನವಂತನಾಗು; ನ್ಯಾಯಮಾರ್ಗ ದಲ್ಲಿ ನಿನ್ನ ಹೃದಯವನ್ನು ನಡಿಸು.
ಸಾಮೇತಿಗಳು 23:20
ಮದ್ಯಪಾನ ಮಾಡುವವರಲ್ಲಿಯೂ ಅತಿಮಾಂಸ ಭಕ್ಷಕರಲ್ಲಿಯೂ ಇರಬೇಡ.
ಸಾಮೇತಿಗಳು 23:29
ಯಾರಿಗೆ ಅಯ್ಯೋ? ಯಾರಿಗೆ ದುಃಖ? ಯಾರಿಗೆ ಕಲಹಗಳು? ಯಾರು ಗೋಳಾಡುತ್ತಾರೆ? ಯಾರು ಸುಮ್ಮಸುಮ್ಮನೆ ಗಾಯ ಪಡುತ್ತಾರೆ? ಯಾರಿಗೆ ಕೆಂಪೇ ರಿದ ಕಣ್ಣುಗಳು?
ಸಾಮೇತಿಗಳು 29:17
ನಿನ್ನ ಮಗನನ್ನು ಶಿಕ್ಷಿಸಿದರೆ ಅವ ನಿಂದ ನಿನಗೆ ನೆಮ್ಮದಿಯಾಗುವದು; ಹೌದು, ಅವನು ನಿನ್ನ ಪ್ರಾಣಕ್ಕೆ ಆನಂದವನ್ನುಂಟು ಮಾಡುವನು.