ಆ ಸೆರೆಯವರಲ್ಲಿ ಸೌಂದರ್ಯವಾದ ಸ್ತ್ರೀಯನ್ನು ನೋಡಿ ಅವಳನ್ನು ನಿನಗೆ ಹೆಂಡತಿಯಾಗಿ ತಕ್ಕೊಳ್ಳುವಹಾಗೆ ಅವಳ ಮೇಲೆ ಅಪೇಕ್ಷೆಯನ್ನಿಟ್ಟರೆ
Cross references
ಆಗ ದೇವಕುಮಾರರು ಮನುಷ್ಯ ಕುಮಾರ್ತೆಯರ ಸೌಂದರ್ಯವನ್ನು ನೋಡಿ ತಾವು ಆರಿಸಿಕೊಂಡವರನ್ನೆಲ್ಲಾ ತಮಗೆ ಹೆಂಡತಿಯ ರನ್ನಾಗಿ ಮಾಡಿಕೊಂಡರು.
ಇದಾದ ಮೇಲೆ ಅಬ್ರಾಮನು ಐಗುಪ್ತಕ್ಕೆ ಬಂದಾಗ ಐಗುಪ್ತ್ಯರು ಆ ಸ್ತ್ರೀಯು ಬಹಳ ಸೌಂದರ್ಯ ವುಳ್ಳವಳೆಂದು ನೋಡಿದರು.
ಹೀಗಿರುವದರಿಂದ ಯಾಕೋಬನು ರಾಹೇಲಳನ್ನು ಪ್ರೀತಿಮಾಡಿ--ನಾನು ನಿನ್ನ ಕಿರಿಮಗಳಾಗಿರುವ ರಾಹೇಲಳಿಗೋಸ್ಕರ ನಿನ್ನಲ್ಲಿ ಏಳು ವರುಷ ಸೇವೆ ಮಾಡುತ್ತೇನೆ ಅಂದನು.
ಅವನ ಮನಸ್ಸು ಯಾಕೋಬನ ಮಗಳಾದ ದೀನಳನ್ನು ಅಂಟಿಕೊಂಡಿತ್ತು. ಅವನು ಆ ಹುಡುಗಿಯನ್ನು ಪ್ರೀತಿಮಾಡಿ ಆಕೆಯೊಂದಿಗೆ ದಯೆ ಯಿಂದ ಮಾತನಾಡಿದನು.
ಹಮೋರನು ಅವರಿಗೆ--ನನ್ನ ಮಗನಾದ ಶೆಕೆಮನ ಮನಸ್ಸು ನಿಮ್ಮ ಮಗಳಿಗಾಗಿ ಆಶಿಸುತ್ತದೆ. ಆಕೆಯನ್ನು ಅವನಿಗೆ ಹೆಂಡತಿಯಾಗಿ ಕೊಡಿರಿ ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ;
ಆದರೆ ಪುರುಷ ಸಂಗಮ ಮಾಡದಿರುವ ಎಲ್ಲಾ ಹೆಣ್ಣು ಮಕ್ಕಳನ್ನು ನಿಮಗೆ ಉಳಿಸಿಕೊಳ್ಳಿರಿ.
ತನ್ನ ತಂದೆತಾಯಿಗಳ ಬಳಿಗೆ ಬಂದು ಅವರಿಗೆ--ನಾನು ತಿಮ್ನಾದಲ್ಲಿ ಫಿಲಿಷ್ಟಿಯರ ಕುರ್ಮಾತೆಯರೊಳಗೆ ಒಬ್ಬ ಸ್ತ್ರೀಯನ್ನು ನೋಡಿದೆನು. ಈಗ ಅವಳನ್ನು ಹೆಂಡತಿಯಾಗುವದಕ್ಕೆ ನನಗೆ ತಕ್ಕೊಳ್ಳಿರಿ ಅಂದನು.
ನಿನ್ನ ಹೃದಯದಲ್ಲಿ ಅವಳ ಸೌಂದರ್ಯವನ್ನು ಮೋಹಿಸಬೇಡ; ಇದಲ್ಲದೆ ಅವಳ ಕಣ್ಣುರೆಪ್ಪೆಗಳಿಂದ ನಿನ್ನನ್ನು ಅವಳು ವಶಮಾಡಿಕೊಳ್ಳದೆ ಇರಲಿ.
ಗುಣವತಿಯಾದ ಸ್ತ್ರೀಯನ್ನು ಯಾವನು ಕಂಡು ಕೊಂಡಾನು? ಅವಳ ಕ್ರಯ ಹವಳಕ್ಕಿಂತಲೂ ಅಮೂ ಲ್ಯವೇ.
ಸೌಂದ ರ್ಯವು ಮೋಸಕರ; ಲಾವಣ್ಯವು ವ್ಯರ್ಥ; ಕರ್ತನಿಗೆ ಭಯಪಡುವವಳು ಹೊಗಳಲ್ಪಡುವಳು.ಆಕೆಯ ಕೈಕೆಲಸದ ಪ್ರತಿಫಲವನ್ನು ಸಲ್ಲಿಸಿರಿ; ದ್ವಾರಗಳಲ್ಲಿ ಆಕೆಯ ಕಾರ್ಯಗಳು ಆಕೆಯನ್ನು ಹೊಗಳಲಿ.