Home Bibles ದ್ವಿತೀಯೋಪದೇಶಕಾಂಡ 2:32 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 2:32 · ಕನ್ನಡ ಬೈಬಲ್

ಆಗ ಸೀಹೋನನು ತನ್ನ ಜನರೆಲ್ಲರ ಸಂಗಡ ಯುದ್ಧಮಾಡುವದಕ್ಕೆ ಯಹ ಜಿಗೆ ಸವಿಾಪದಲ್ಲಿ ನಮ್ಮೆದುರಿಗೆ ಹೊರಟನು.

Cross references

ಅಂಕೆಗಳ ಪುಸ್ತಕ 21:23

ಆದರೆ ಸೀಹೋನನು ಇಸ್ರಾಯೇಲ್ಯರನ್ನು ತನ್ನ ಮೇರೆಯಲ್ಲಿ ದಾಟಗೊಡಿಸದೆ ತನ್ನ ಜನರೆಲ್ಲರನ್ನು ಕೂಡಿಸಿಕೊಂಡು ಇಸ್ರಾಯೇಲ್ಯರಿಗೆದುರಾಗಿ ಅರಣ್ಯಕ್ಕೆ ಹೊರಟನು; ಅವನು ಯಹಚಕ್ಕೆ ಬಂದು ಇಸ್ರಾಯೇಲ್ಯರ ಸಂಗಡ ಯುದ್ಧಮಾಡಿದನು.

ದ್ವಿತೀಯೋಪದೇಶಕಾಂಡ 3:1

ಆಗ ನಾವು ತಿರುಗಿಕೊಂಡು ಬಾಷಾನಿನ ಕಡೆಗೆ ಹೊರಟೆವು. ಬಾಷಾನಿನ ಅರಸ ನಾದ ಓಗನು ತನ್ನ ಎಲ್ಲಾ ಜನರ ಸಂಗಡ ನಮ್ಮೆದುರಿಗೆ ಎದ್ರೈಗೆ ಯುದ್ಧಮಾಡುವದಕ್ಕೆ ಹೊರಟನು.

ಯೆಹೋಶುವ 12:1

ಯೊರ್ದನಿಗೆ ಆಚೆ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ಅರ್ನೋನ್‌ ನದಿಯಿಂದ ಹೆರ್ಮೋನ್‌ ಬೆಟ್ಟದ ವರೆಗೂ ಮೂಡಣ ಬೈಲಿನ ಎಲ್ಲಾದರಲ್ಲಿಯೂ ಇಸ್ರಾಯೇಲ್‌ ಮಕ್ಕಳು ಅವರನ್ನು ಹೊಡೆದು ಸ್ವಾಧೀನ ಪಡಿಸಿಕೊಂಡ ದೇಶಗಳ ಅರಸರು ಯಾರಂದರೆ:

ನ್ಯಾಯಾಧಿಪತಿಗಳು 11:20

ಆದರೆ ಸೀಹೋ ನನು ತನ್ನ ಮೇರೆಯನ್ನು ದಾಟುವದಕ್ಕೆ ಇಸ್ರಾಯೇಲನ್ನು ನಂಬದೆ ತನ್ನ ಜನವನ್ನೆಲ್ಲಾ ಕೂಡಿಸಿ ಯಹಚಿನಲ್ಲಿ ದಂಡಿಳಿದು ಇಸ್ರಾಯೇಲಿಗೆ ವಿರೋಧವಾಗಿ ಯುದ್ಧ ಮಾಡಿದನು.

ನೆಹೆಮ್ಯ 9:22

ಇದಲ್ಲದೆ ನೀನು ಅವರಿಗೆ ರಾಜ್ಯಗಳನ್ನೂ ಜನಾಂಗಗಳನ್ನೂ ಒಪ್ಪಿಸಿಕೊಟ್ಟು ಅವರಿಗೆ ಮೇರೆಗಳನ್ನು ವಿಭಾಗಿಸಿಕೊಟ್ಟಿ. ಹೀಗೆಯೇ ಅವರು ಸೀಹೋನನ ದೇಶವನ್ನೂ ಹೆಷ್ಬೋನಿನ ಅರಸನ ದೇಶವನ್ನೂ ಬಾಷಾ ನಿನ ಅರಸನಾದ ಓಗನ ದೇಶವನ್ನು ಸ್ವಾಧೀನಮಾಡಿ ಕೊಂಡರು.

ಕೀರ್ತನೆಗಳು 120:7

ನಾನು ಸಮಾಧಾನವಾಗಿದ್ದೇನೆ; ಆದರೆ ನಾನು ಮಾತಾಡಲು ಅವರು ಯುದ್ಧಮಾಡು ವದಕ್ಕಿದ್ದಾರೆ.

ಕೀರ್ತನೆಗಳು 135:11

ಅಮೋರಿ ಯರ ಅರಸನಾದ ಸೀಹೋನನನ್ನೂ ಬಾಷಾನಿನ ಅರಸನಾದ ಓಗನನ್ನೂ ಕಾನಾನಿನ ಎಲ್ಲಾ ರಾಜ್ಯ ಗಳನ್ನೂ ಹೊಡೆದನು.

ಕೀರ್ತನೆಗಳು 136:19

ಅಮೋರಿಯರ ಅರಸನಾದ ಸೀಹೋನನು ಒಬ್ಬ; ಆತನ ಕರುಣೆಯು ಎಂದೆಂದಿಗೂ ಅದೆ.

Interlinear

Choose Theme