Home Bibles ದ್ವಿತೀಯೋಪದೇಶಕಾಂಡ 2:31 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 2:31 · ಕನ್ನಡ ಬೈಬಲ್

ಇದಲ್ಲದೆ ಕರ್ತನು ನನಗೆ--ಇಗೋ, ಸೀಹೋ ನನನ್ನೂ ಅವನ ದೇಶವನ್ನೂ ನಿನ್ನ ಮುಂದೆ ಒಪ್ಪಿಸು ವದಕ್ಕೆ ಆರಂಭಮಾಡಿದ್ದೇನೆ; ಅವನ ದೇಶವನ್ನು ಸ್ವಾಸ್ತ್ಯವಾಗಿ ಹೊಂದುವ ಹಾಗೆ ಸ್ವತಂತ್ರಿಸಿಕೊಳ್ಳುವದಕ್ಕೆ ಆರಂಭಮಾಡು ಅಂದನು.

Cross references

ದ್ವಿತೀಯೋಪದೇಶಕಾಂಡ 1:8

ಇಗೋ, ಆ ದೇಶವನ್ನು ನಿಮ್ಮ ಮುಂದೆ ಇಟ್ಟಿದ್ದೇನೆ; ಹೋಗಿ ಕರ್ತನು ನಿಮ್ಮ ಪಿತೃಗಳಾದ ಅಬ್ರಹಾಮ ಇಸಾಕ ಯಾಕೋಬರಿಗೂ ಅವರ ತರುವಾಯ ಹುಟ್ಟುವ ಅವರ ಸಂತತಿಗೂ ಕೊಡುತ್ತೇನೆಂದು ಪ್ರಮಾಣಮಾಡಿದ ದೇಶವನ್ನು ಸ್ವತಂತ್ರಿಸಿಕೊಳ್ಳಿರಿ ಎಂದು ಹೇಳಿದನು.

ದ್ವಿತೀಯೋಪದೇಶಕಾಂಡ 2:24

ಏಳಿರಿ, ಹೊರಡಿರಿ; ಅರ್ನೋನ್‌ ನದಿಯನ್ನು ದಾಟಿರಿ; ಇಗೋ, ಹೆಷ್ಬೋನಿನ ಅರಸ ನಾದ ಅಮೋರಿಯನಾದ ಸೀಹೋನನನ್ನೂ ಅವನ ದೇಶವನ್ನೂ ನಿನ್ನ ಕೈಯಲ್ಲಿ ಕೊಟ್ಟಿದ್ದೇನೆ, ಸ್ವಾಧೀನ ಪಡಿಸಿಕೊಳ್ಳುವದಕ್ಕೆ ಆರಂಭಮಾಡು. ಅವನ ಸಂಗಡ ಜಗಳವಾಡಿ ಯುದ್ಧಮಾಡು.

Interlinear

Choose Theme