Home Bibles ದಾನಿಯೇಲ 2:5 · ಕನ್ನಡ ಬೈಬಲ್
ದಾನಿಯೇಲ 2:5 · ಕನ್ನಡ ಬೈಬಲ್

ಅರಸನು ಕಸ್ದೀ ಯರಿಗೆ ಪ್ರತ್ಯುತ್ತರವಾಗಿ--ಆ ಕನಸಿನ ಸಂಗತಿಯು ನನ್ನನ್ನು ಬಿಟ್ಟು ಹೋಯಿತು; ನೀವು ಕನಸನ್ನು ಅದರ ಅರ್ಥದೊಂದಿಗೆ ನನಗೆ ತಿಳಿಸದಿದ್ದರೆ ನೀವು ತುಂಡು ತುಂಡಾಗಿ ಕತ್ತರಿಸಲ್ಪಡುವಿರಿ; ನಿಮ್ಮ ಮನೆಗಳು ತಿಪ್ಪೆ ಗುಂಡಿಗಳನ್ನಾಗಿ ಮಾಡಿಸುವೆನು.

Cross references

ದ್ವಿತೀಯೋಪದೇಶಕಾಂಡ 13:16

ಇದಲ್ಲದೆ ಅದರ ಎಲ್ಲಾ ಕೊಳ್ಳೆಯನ್ನು ಅದರ ಬೀದಿಯ ಮಧ್ಯದಲ್ಲಿ ಕೂಡಿಸಿ ಆ ಪಟ್ಟಣವನ್ನೂ ಅದರ ಎಲ್ಲಾ ಕೊಳ್ಳೆಯನ್ನೂ ಸಂಪೂರ್ಣವಾಗಿ ನಿನ್ನ ದೇವರಾದ ಕರ್ತನಿಗೆ ಬೆಂಕಿಯಿಂದ ಸುಟ್ಟುಬಿಡಬೇಕು; ಅದು ಎಂದೆಂದಿಗೂ ದಿಬ್ಬವಾಗಬೇಕು; ತರುವಾಯ ಅದನ್ನು ಕಟ್ಟಬಾರದು.

ಯೆಹೋಶುವ 6:26

ಆ ಕಾಲದಲ್ಲಿ ಯೆಹೋಶುವನು ಅವರಿಗೆ--ಈ ಯೆರಿಕೋ ಪಟ್ಟಣವನ್ನು ತಿರಿಗಿ ಕಟ್ಟಿಸುವ ಮನುಷ್ಯನು ಕರ್ತನ ಮುಂದೆ ಶಪಿಸಲ್ಪಡಲಿ; ತನ್ನ ಚೊಚ್ಚಲ ಮಗನಲ್ಲಿ ಅದರ ಅಸ್ತಿವಾರವನ್ನು ಹಾಕುವನು, ತನ್ನ ಕೊನೆಯ ಮಗನಲ್ಲಿ ಅದರ ಬಾಗಲುಗಳನ್ನು ಇಡುವನು ಎಂದು ಆಣೆ ಇಟ್ಟು ಹೇಳಿದನು.ಹೀಗೆಯೇ ಕರ್ತನು ಯೆಹೋಶುವನ ಸಂಗಡ ಇದ್ದನು; ಅವನ ಕೀರ್ತಿ ದೇಶದಲ್ಲೆಲ್ಲಾ ಇತ್ತು.

1 ಸಮುವೇಲ 15:33

ಆದರೆ ಸಮುವೇಲನು ಅವನಿಗೆನಿನ್ನ ಕತ್ತಿಯು ಹೇಗೆ ಸ್ತ್ರೀಯರನ್ನು ಮಕ್ಕಳಿಲ್ಲದವರಾಗ ಮಾಡಿತೋ ಹಾಗೆಯೇ ಸ್ತ್ರೀಯರಲ್ಲಿ ನಿನ್ನ ತಾಯಿಯು ಮಕ್ಕಳಿಲ್ಲದವಳಾಗುವಳು ಎಂದು ಹೇಳಿ ಸಮುವೇಲನು ಗಿಲ್ಗಾಲಿನಲ್ಲಿ ಕರ್ತನ ಮುಂದೆ ಅಗಾಗನನ್ನು ತುಂಡು ತುಂಡಾಗಿ ಮಾಡಿಬಿಟ್ಟನು.

2 ಅರಸುಗಳು 10:27

ಇದಲ್ಲದೆ ಅವರು ಬಾಳನ ವಿಗ್ರಹ ವನ್ನು ಒಡೆದುಹಾಕಿ ಬಾಳನ ಮನೆಯನ್ನು ಕೆಡವಿಬಿಟ್ಟು ಅದನ್ನು ಈ ಹೊತ್ತಿನ ವರೆಗೂ ತಿಪ್ಪೆಯಾಗಿ ಮಾಡಿದರು.

ಎಜ್ರಾ 6:11

ನಾನು ಕೊಡುವ ಅಪ್ಪಣೆ ಏನಂದರೆ--ಯಾವನಾದರೂ ಈ ಮಾತನ್ನು ಬದಲು ಮಾಡಿದರೆ ಅವನ ಮನೆಯಿಂದ ಮರ ಕಿತ್ತು ನೆಡಲ್ಪಡಲಿ; ಅವನು ಅದರಲ್ಲಿ ಗಲ್ಲಿಗೆ ಹಾಕಲ್ಪಡಲಿ; ಅವನ ಮನೆಯು ಇದರ ನಿಮಿತ್ತ ತಿಪ್ಪೆ ಮಾಡಲ್ಪಡಲಿ.

ಕೀರ್ತನೆಗಳು 50:22

ದೇವರನ್ನು ಮರೆತು ಬಿಡುವವರೇ, ನಾನು ನಿಮ್ಮನ್ನು ಹರಿದು ಚೂರುಮಾಡ ದಂತೆ ನನ್ನ ಕೈಯಿಂದ ನಿಮ್ಮನ್ನು ಬಿಡಿಸುವವರು ಯಾರೂ ಇರುವದಿಲ್ಲವೆಂಬದನ್ನು ಗ್ರಹಿಸಿಕೊಳ್ಳಿರಿ.ಸ್ತೊತ್ರವನ್ನು ಅರ್ಪಿಸುವವನು ನನ್ನನ್ನು ಘನ ಪಡಿಸುತ್ತಾನೆ; ತನ್ನ ನಡವಳಿಕೆಯನ್ನು ಕ್ರಮಪಡಿಸಿ ಕೊಳ್ಳುವವನಿಗೆ ದೇವರ ರಕ್ಷಣೆಯನ್ನು ನಾನು ತೋರಿಸುವೆನು.

ಕೀರ್ತನೆಗಳು 58:7

ಬಿಡದೆ ಹರಿಯುವ ನೀರಿನಂತೆ ಅವರು ಕರಗಿ ಹೋಗಲಿ; ಅವನು ತನ್ನ ಬಾಣಗಳನ್ನು ಗುರಿಯಿಟ್ಟಾಗ ಅವರು ಕಡಿಯಲ್ಪಟ್ಟ ತುಂಡುಗಳಂತಿರಲಿ.

ದಾನಿಯೇಲ 2:12

ಇದರಿಂದ ಅರಸನು ಕೋಪವುಳ್ಳವನಾಗಿ ಮಹಾರೌದ್ರದಿಂದ ಬಾಬೆಲಿನಲ್ಲಿ ರುವ ಎಲ್ಲಾ ಜ್ಞಾನಿಗಳನ್ನು ನಾಶಮಾಡಬೇಕೆಂದು ಆಜ್ಞಾ ಪಿಸಿದನು.

ದಾನಿಯೇಲ 3:29

ಆದದರಿಂದ ನಾನು ನಿರ್ಣಯಮಾಡುವದರಿಂದ ಸಕಲ ಪ್ರಜೆ, ಜನಾಂಗ ಮತ್ತು ಭಾಷೆಗಳಲ್ಲಿ ಯಾರು ಶದ್ರಕ್‌ ಮೇಷಕ್‌ ಅಬೇದ್‌ನೆಗೋ ಎಂಬವರ ದೇವ ರಿಗೆ ವಿರೋಧವಾಗಿ ದೂಷಣೆ ಮಾಡುವರೋ ಅವರು ತುಂಡುತುಂಡಾಗಿ ಕತ್ತರಿಸಲ್ಪಟ್ಟು ಅವರ ಮನೆಗಳು ತಿಪ್ಪೆಗುಂಡಿಗಳಾಗಿ ಮಾಡಲ್ಪಡುವದು. ಈ ವಿಧವಾಗಿ ರಕ್ಷಿಸುವ ದೇವರು ಇನ್ಯಾರು ಇರುವದಿಲ್ಲ.ಆಗ ಅರಸನು ಶದ್ರಕ್‌ ಮೇಷಕ್‌ ಅಬೇದ್‌ನೆಗೋ ಎಂಬ ವರನ್ನು ಬಾಬೆಲ್‌ ಪ್ರಾಂತ್ಯದಲ್ಲಿ ಉನ್ನತ ಪದವಿಗೆ ತಂದನು.

Interlinear

Choose Theme