Home Bibles ದಾನಿಯೇಲ 11:20 · ಕನ್ನಡ ಬೈಬಲ್
ದಾನಿಯೇಲ 11:20 · ಕನ್ನಡ ಬೈಬಲ್

ಆಗ ಅವನಿಗೆ ಬದಲಾಗಿ ರಮ್ಯವಾದ ರಾಜ್ಯದಲ್ಲಿ ಗುತ್ತಿಗೆಯನ್ನು ಹೆಚ್ಚಿಸುವನು, ತನ್ನ ಸ್ಥಾನದಲ್ಲಿ ನಿಲ್ಲು ವನು ಮತ್ತು ಅವನು ಕೆಲವು ದಿನಗಳೊಳಗೆ ನಾಶ ವಾಗುವನು; ಆದರೆ ಕೋಪದ ಪೆಟ್ಟಿನಿಂದಲ್ಲ, ಯುದ್ಧ ದಿಂದಲೂ ಅಲ್ಲ.

Cross references

ದ್ವಿತೀಯೋಪದೇಶಕಾಂಡ 15:2

ಬಿಡು ಗಡೆಯ ಕ್ರಮವೇನೆಂದರೆ: ಸಾಲ ಕೊಟ್ಟವರೆಲ್ಲರೂ ತಮ್ಮ ನೆರೆಯವರಿಗೆ ಕೊಟ್ಟ ಸಾಲವನ್ನು ಬಿಟ್ಟುಬಿಡ ಬೇಕು; ಅದು ಕರ್ತನ ಬಿಡುಗಡೆ ಎಂದು ಕರೆಯಲ್ಪಟ್ಟ ಕಾರಣ ತನ್ನ ನೆರೆಯವನಿಂದಲೂ ತನ್ನ ಸಹೋದರ ನಿಂದಲೂ ಸಾಲ ತೆಗೆದುಕೊಳ್ಳಬಾರದು.

2 ಅರಸುಗಳು 23:35

ಯೆಹೋಯಾಕೀ ಮನು ಬೆಳ್ಳಿಯನ್ನೂ ಬಂಗಾರವನ್ನೂ ಫರೋಹನಿಗೆ ಕೊಟ್ಟನು. ಫರೋಹನೆಕೋವಿನ ಆಜ್ಞೆಯ ಪ್ರಕಾರ ಅವನು ಹಣವನ್ನು ಕೊಡುವಂತೆ ದೇಶಕ್ಕೆ ಕಪ್ಪವನ್ನು ನಿಷ್ಕರ್ಷೆ ಮಾಡಿದನು. ಅವನು ಬೆಳ್ಳಿಯನ್ನೂ ಬಂಗಾರ ವನ್ನೂ ನೇಕೊವೆಂಬ ಫರೋಹನಿಗೆ ಕೊಡುವ ಹಾಗೆ ದೇಶದ ಜನರಿಂದ ಪ್ರತಿ ಮನುಷ್ಯನ ತೆರಿಗೆಯ ಪ್ರಕಾರ ಬಲವಂತವಾಗಿ ತಕ್ಕೊಂಡನು.

ಸಾಮೇತಿಗಳು 30:33

ಹಾಲು ಕರೆಯುವದರಿಂದ ನಿಜವಾಗಿಯೂ ಬೆಣ್ಣೆ ಬರುತ್ತದೆ; ಮೂಗು ಹಿಂಡುವದರಿಂದ ರಕ್ತ ಬರುತ್ತದೆ; ಹಾಗೆಯೇ ಕೋಪವನ್ನೆಬ್ಬಿಸುವದರಿಂದ ಜಗಳ ಬರುತ್ತದೆ.

ಯೆಶಾಯ 60:17

ಹಿತ್ತಾಳೆಗೆ ಬದಲಾಗಿ ಬಂಗಾರವನ್ನು ತರುವೆನು; ಕಬ್ಬಿಣಕ್ಕೆ ಬದಲಾಗಿ ಬೆಳ್ಳಿಯನ್ನೂ ಮರಕ್ಕೆ ಬದಲಾಗಿ ಹಿತ್ತಾಳೆಯನ್ನೂ ಕಲ್ಲುಗಳಿಗೆ ಬದಲಾಗಿ ಕಬ್ಬಿಣವನ್ನೂ ತರುವೆನು, ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿಯೂ ನೀತಿಯನ್ನು ನಿನಗೆ ಅಧಿಕಾರಿ ಯನ್ನಾಗಿಯೂ ಮಾಡುವೆನು.

ದಾನಿಯೇಲ 11:7

ಆದರೆ ಅವಳ ಬೇರುಗಳ ಚಿಗುರಿನಿಂದ ಒಬ್ಬನು ಎದ್ದು ಆ ಸ್ಥಾನದಲ್ಲಿ ನಿಂತು ಸೈನ್ಯದೊಂದಿಗೆ ಬಂದು ಉತ್ತರದ ಅರಸನ ಕೋಟೆಯೊಳಗೆ ನುಗ್ಗಿ ಅವರನ್ನು ವಿರೋಧಿಸಿ ಪ್ರಬಲವಾಗುವನು.

ದಾನಿಯೇಲ 11:21

ಅವನ ಸ್ಥಾನದಲ್ಲಿ ಒಬ್ಬ ನೀಚನು ನಿಲ್ಲುವನು; ಅವನಿಗೆ ರಾಜ್ಯದ ಮರ್ಯಾದೆಯನ್ನು ಕೊಡುವದಿಲ್ಲ, ಆದರೆ ಅವನು ಸಮಾಧಾನವಾಗಿ ನಯನುಡಿಗಳಿಂದ ರಾಜ್ಯವನ್ನು ಪಡಕೊಳ್ಳುವನು.

Interlinear

Choose Theme