Home Bibles ದಾನಿಯೇಲ 11:19 · ಕನ್ನಡ ಬೈಬಲ್
ದಾನಿಯೇಲ 11:19 · ಕನ್ನಡ ಬೈಬಲ್

ಆಗ ಅವನು ತನ್ನ ಸ್ವದೇಶದ ಕೋಟೆಗೆ ಮುಖವನ್ನು ತಿರುಗಿಸುವನು; ಆದರೆ ಅವನು ಎಡವಿಬಿದ್ದು ಕಾಣದೆ ಹೋಗುವನು.

Cross references

ಯೋಬ 20:8

ಕನಸಿನ ಹಾಗೆ ಅವನು ಕಾಣದೆ ಹಾರಿಹೋಗುವನು; ರಾತ್ರಿಯ ದರ್ಶನದ ಹಾಗೆ ಓಡಿಸಲ್ಪಡುವನು.

ಯೋಬ 34:24

ಲೆಕ್ಕವಿಲ್ಲದ ಪರಾಕ್ರಮಿಗಳನ್ನು ಚೂರು ಚೂರು ಮಾಡಿ, ಮತ್ತೊಬ್ಬರನ್ನು ಅವರ ಸ್ಥಳದಲ್ಲಿ ನಿಲ್ಲಿಸು ತ್ತಾನೆ.

ಕೀರ್ತನೆಗಳು 27:2

ನನ್ನ ಮಾಂಸವನ್ನು ತಿನ್ನಬೇಕೆಂದು ದುಷ್ಟರು ಅಂದರೆ ನನ್ನ ವೈರಿಗಳೂ ಶತ್ರುಗಳೂ ಬಂದಾಗ ಅವರು ಎಡವಿಬಿದ್ದರು.

ಕೀರ್ತನೆಗಳು 37:35

ದುಷ್ಟನು ದೊಡ್ಡ ಅಧಿಕಾರದಲ್ಲಿರು ವದನ್ನು ನಾನು ನೋಡಿದೆನು; ಅವನು ಹಸುರಾಗಿ ವಿಸ್ತರಿಸಿಕೊಂಡ ಮರದ ಹಾಗೆ ಇದ್ದನು.

ಕೀರ್ತನೆಗಳು 37:36

ಆದರೆ ಅವನು ಅಳಿದು ಹೋದನು; ಇಗೋ, ಅವನು ಇಲ್ಲವಾದನು; ಹೌದು, ಅವನನ್ನು ನಾನು ಹುಡು ಕಿದೆನು; ಆದರೆ ಅವನು ಸಿಕ್ಕಲಿಲ್ಲ.

ಯೆರೆಮಿಯ 46:6

ಕರ್ತನ ಕತ್ತಿಯೇ, ಎಷ್ಟರ ವರೆಗೆ ವಿಶ್ರಮಿಸಿಕೊಳ್ಳದೆ ಇರುವಿ? ನಿನ್ನ ಒರೆಯಲ್ಲಿ ಅಡಗಿಕೋ! ವಿಶ್ರಮಿಸಿಕೋ, ಸುಮ್ಮನಿರು.ಅದು ಹೇಗೆ ಸುಮ್ಮನಿರುವದು? ಅಷ್ಕೆಲೋನಿಗೆ ವಿರೋಧವಾಗಿಯೂ ಸಮುದ್ರತೀರಕ್ಕೆ ವಿರೋಧ ವಾಗಿಯೂ ಕರ್ತನು ಅದಕ್ಕೆ ಆಜ್ಞೆ ಕೊಟ್ಟಿದ್ದಾನಲ್ಲಾ; ಅಲ್ಲಿ ಅದನ್ನು ನೇಮಿಸಿದ್ದಾನೆ.

ಯೆಹೆಜ್ಕೇಲ 26:21

ನಾನೂ ನಿನ್ನನ್ನು ದಿಗಿಲುಪಡಿಸುವೆನು, ಇನ್ನು ಮೇಲೆ ನೀನು ಇರುವದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡು ಕಿದರೂ ನೀನು ಸಿಗುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.

Interlinear

Choose Theme