ಅರಸನು ರಾಜ ಭೋಜನದಲ್ಲಿಯೂ ತಾನು ಕುಡಿಯುವ ದ್ರಾಕ್ಷಾರಸ ದಲ್ಲಿಯೂ ಪ್ರತಿದಿನವೂ ಅವರಿಗೆ ಪಾಲನ್ನು ನೇಮಿ ಸಿದನು; ಹೀಗೆ ಅವರು ಮೂರು ವರುಷಗಳ ಕಾಲ ಪೋಷಿಸಲ್ಪಟ್ಟ ಮೇಲೆ ಅರಸನ ಮುಂದೆ ನಿಲ್ಲತಕ್ಕವರಾಗುವರು.
Cross references
ಯೋಸೇಫನು ಐಗುಪ್ತದ ಅರಸನಾದ ಫರೋ ಹನ ಮುಂದೆ ನಿಂತಾಗ ಮೂವತ್ತು ವರುಷದ ವನಾಗಿದ್ದನು. ತರುವಾಯ ಯೋಸೇಫನು ಫರೋಹನ ಸನ್ನಿಧಿಯಿಂದ ಹೊರಟು ಐಗುಪ್ತದೇಶವನ್ನೆಲ್ಲಾ ಸಂಚರಿಸಿದನು.
ಸೌಲನು ಇಷಯನ ಬಳಿಗೆ ಮನುಷ್ಯನನ್ನು ಕಳುಹಿಸಿ--ದಾವೀದನು ನನ್ನ ಸಮ್ಮುಖ ದಲ್ಲಿ ನಿಲ್ಲುವ ಹಾಗೆ ಕೇಳಿಕೊಳ್ಳುತ್ತೇನೆ; ಯಾಕಂದರೆ ನನ್ನ ಸಮ್ಮುಖದಲ್ಲಿ ಅವನಿಗೆ ದಯೆದೊರಕಿತು ಅಂದನು.ಹಾಗೆಯೇ ದೇವರಿಂದ ಬಂದ ದುರಾತ್ಮವು ಸೌಲನ ಮೇಲೆ ಬಂದಾಗ ದಾವೀದನು ಕಿನ್ನರಿಯನ್ನು ತೆಗೆದು ಕೊಂಡು ತನ್ನ ಕೈಯಿಂದ ಬಾರಿಸುವನು. ಅದರಿಂದ ಸೌಲನು ಉಪಶಮನ ಹೊಂದಿ ಚೆನ್ನಾಗಿರುವನು; ದುರಾತ್ಮವು ಅವನನ್ನು ಬಿಟ್ಟು ಹೋಗುವದು.
ಸೊಲೊಮೋನನ ಒಂದು ದಿನದ ಭೋಜನ ವೇನಂದರೆ--ನಯವಾದ ಹಿಟ್ಟು ಮೂವತ್ತು ಅಳತೆ, ಹಿಟ್ಟು ಅರವತ್ತು ಅಳತೆ,
ನಿನ್ನ ಮನುಷ್ಯರು ಭಾಗ್ಯವಂತರು; ನಿನ್ನ ಮುಂದೆ ಯಾವಾ ಗಲೂ ನಿಂತು ನಿನ್ನ ಜ್ಞಾನವನ್ನು ಕೇಳುವ ಈ ನಿನ್ನ ಸೇವಕರು ಭಾಗ್ಯವಂತರು.
ಇದಲ್ಲದೆ ಅವನು ಬದುಕಿರುವ ವರೆಗೂ ಪ್ರತಿ ದಿನಕ್ಕೆ ನೇಮಕವಾದ ಭೋಜನವು ಅರಸನಿಂದ ಯಾವಾಗಲೂ ಕೊಡಲ್ಪಡುತ್ತಾ ಇತ್ತು.
ನಿನ್ನ ಮನುಷ್ಯರು ಭಾಗ್ಯವಂತರು; ನಿನ್ನ ಮುಂದೆ ಯಾವಾಗಲೂ ನಿಂತು ನಿನ್ನ ಜ್ಞಾನವನ್ನು ಕೇಳುವ ಈ ನಿನ್ನ ಸೇವಕರು ಭಾಗ್ಯ ವಂತರು.
ಓ ಕರ್ತನೇ, ನನ್ನ ಬಲವೇ, ನನ್ನ ಕೋಟೆಯೇ, ಇಕ್ಕಟ್ಟಿನ ದಿವಸದಲ್ಲಿ ನನ್ನ ಆಶ್ರಯವೇ, ಭೂಮಿಯ ಅಂತ್ಯಗಳಿಂದ ಅನ್ಯರು ನಿನ್ನ ಬಳಿಗೆ ಬಂದು--ನಿಶ್ಚಯ ವಾಗಿ ನಮ್ಮ ತಂದೆಗಳು ಸುಳ್ಳನ್ನು ವ್ಯರ್ಥವನ್ನು ಲಾಭ ವಿಲ್ಲದವುಗಳನ್ನು ಬಾಧ್ಯವಾಗಿ ಹೊಂದಿದ್ದಾರೆ.
ಆದರೆ ದಾನಿಯೇಲನು ತಾನು ಅರಸನ ಭೋಜನದ ಪಾಲಿನಿಂದಲಾದರೂ ಅವನು ಕುಡಿಯುವ ದ್ರಾಕ್ಷಾರಸದಿಂದಾದರೂ ತನ್ನನ್ನು ಅಶುದ್ಧಪಡಿಸಿಕೊಳ್ಳುವದಿಲ್ಲವೆಂದು ತನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡನು; ಆದುದರಿಂದ ತಾನು ಅಶುದ್ಧ ವಾಗದ ಹಾಗೆ ಕಂಚುಕಿಯರ ಯಜಮಾನನ್ನು ಬೇಡಿ ಕೊಂಡನು.
ಅರಸನು ಅವರ ಸಂಗಡ ಮಾತನಾಡಿದನು; ಅವರೆಲ್ಲರಲ್ಲಿ ದಾನಿ ಯೇಲ, ಹನನ್ಯ, ವಿಾಶಾಯೇಲ ಮತ್ತು ಅಜರ್ಯ ಇವರ ಹಾಗೆ ಒಬ್ಬನೂ ಸಿಗಲಿಲ್ಲ. ಆದದರಿಂದಲೇ ಇವರು ಅರಸನ ಸನ್ನಿಧಾನದಲ್ಲಿ ನಿಂತರು.
ನಮ್ಮ ಅನುದಿನದ ರೊಟ್ಟಿಯನ್ನು ಈ ದಿನವು ನಮಗೆ ದಯಪಾಲಿಸು.
ಅದಕ್ಕೆ ಆ ದೂತನು ಪ್ರತ್ಯುತ್ತರವಾಗಿ--ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು, ಈಗ ನಿನ್ನ ಸಂಗಡ ಮಾತನಾಡುವದಕ್ಕೂ ಈ ಸಂತೋಷದ ವರ್ತಮಾನವನ್ನು ನಿನಗೆ ತಿಳಿಸುವದಕ್ಕೂ ಕಳುಹಿಸ ಲ್ಪಟ್ಟಿದ್ದೇನೆ.
ನಮ್ಮ ರೊಟ್ಟಿಯನ್ನು ಪ್ರತಿದಿನವೂ ನಮಗೆ ಕೊಡು.
ಆದಕಾರಣ ಸಂಭವಿಸುವದಕ್ಕಿರುವ ಇವೆಲ್ಲವುಗಳಿಂದ ನೀವು ತಪ್ಪಿಸಿಕೊಳ್ಳುವದಕ್ಕೆ ಯೋಗ್ಯರೆಂದು ಎಣಿಸಲ್ಪಡು ವಂತೆಯೂ ಮನುಷ್ಯಕುಮಾರನ ಮುಂದೆ ನಿಂತು ಕೊಳ್ಳುವಂತೆಯೂ ಎಚ್ಚರವಾಗಿದ್ದು ಯಾವಾಗಲೂ ಪ್ರಾರ್ಥಿಸುತ್ತಾ ಇರ್ರಿ ಅಂದನು.