Home Bibles ಲೂಕ 11:3 · ಕನ್ನಡ ಬೈಬಲ್
ಲೂಕ 11:3 · ಕನ್ನಡ ಬೈಬಲ್

ನಮ್ಮ ರೊಟ್ಟಿಯನ್ನು ಪ್ರತಿದಿನವೂ ನಮಗೆ ಕೊಡು.

Cross references

ನಿರ್ಗಮಕಾಂಡ 16:15

ಇಸ್ರಾಯೇಲ್‌ ಮಕ್ಕಳು ಅದನ್ನು ನೋಡಿದಾಗ ಅವರು ಒಬ್ಬರಿಗೊಬ್ಬರು--ಇದು ಮನ್ನಾ ಅಂದರು. ಯಾಕಂದರೆ ಅದು ಏನಾಗಿತ್ತೆಂದು ಅವರಿಗೆ ತಿಳಿಯಲಿಲ್ಲ. ಆಗ ಮೋಶೆಯು ಅವರಿಗೆ--ಕರ್ತನು ನಿಮಗೆ ಕೊಟ್ಟಿರುವ ರೊಟ್ಟಿಯು ಇದೇ ಎಂದು ಹೇಳಿದನು.

ಸಾಮೇತಿಗಳು 30:8

ವ್ಯರ್ಥತ್ವವನ್ನೂ ಸುಳ್ಳುಗಳನ್ನೂ ನನ್ನಿಂದ ದೂರವಾಗಿ ತೆಗೆದುಹಾಕು. ಬಡತನವಾಗಲಿ ಐಶ್ವರ್ಯವಾಗಲಿ ನನಗೆ ಕೊಡಬೇಡ; ನನಗೆ ತಕ್ಕಷ್ಟು ಆಹಾರವನ್ನು ಭೋಜನ ಮಾಡಿಸು;

ಯೆಶಾಯ 33:16

ಬಂಡೆಗಳ ಕೋಟೆಗಳು ಅವನಿಗೆ ಆಶ್ರಯವಾಗಿ ರುವವು. ರೊಟ್ಟಿಯು ಅವನಿಗೆ ಕೊಡಲ್ಪಡುವದು, ನೀರು ತಪ್ಪುವದಿಲ್ಲ.

ಮತ್ತಾಯ 6:11

ನಮ್ಮ ಅನುದಿನದ ರೊಟ್ಟಿಯನ್ನು ಈ ದಿನವು ನಮಗೆ ದಯಪಾಲಿಸು.

ಮತ್ತಾಯ 6:34

ಆದಕಾರಣ ನಾಳೆಗೋಸ್ಕರ ಚಿಂತೆ ಮಾಡಬೇಡಿರಿ; ಯಾಕಂದರೆ ನಾಳಿನ ದಿನವು ತನಗೆ ಸಂಬಂಧ ಪಟ್ಟವುಗಳಿಗಾಗಿ ತಾನೇ ಚಿಂತಿಸುವದು. ಆ ದಿನಕ್ಕೆ ಅದರ ಕಾಟ ಸಾಕು.

ಯೋಹಾನ 6:27

ನಾಶವಾಗುವ ಆಹಾರಕ್ಕಾಗಿ ಅಲ್ಲ, ನಿತ್ಯಜೀವ ವನ್ನುಂಟು ಮಾಡುವ ಆಹಾರಕ್ಕೋಸ್ಕರ ದುಡಿಯಿರಿ; ಅದನ್ನು ಮನುಷ್ಯಕುಮಾರನು ನಿಮಗೆ ಕೊಡುವನು; ತಂದೆಯಾದ ದೇವರು (ಇದಕ್ಕಾಗಿ) ಆತನಿಗೆ ಮುದ್ರೆ ಹಾಕಿದ್ದಾನೆ ಅಂದನು.

Interlinear

Choose Theme