ಅದಕ್ಕೆ ನಿಮಗೋಸ್ಕರ ನನಗೆ ಕೊಡಲ್ಪಟ್ಟ ದೇವರ ಯುಗಕ್ಕನುಸಾರ ದೇವರ ವಾಕ್ಯವನ್ನು ಪೂರೈಸು ವದಕ್ಕೆ ನಾನು ಸೇವಕನಾದೆನು.
Cross references
ಆದಾಗ್ಯೂ ಸಹೋದರರೇ, ದೇವರು ನನಗೆ ಕೊಟ್ಟ ಕೃಪೆಯಿಂದ ಇವುಗಳನ್ನು ನಿಮ್ಮ ಜ್ಞಾಪಕಕ್ಕೆ ತರುವ ಹಾಗೆ ನಾನು ಒಂದು ವಿಧದಲ್ಲಿ ಹೆಚ್ಚು ಧೈರ್ಯದಿಂದ ನಿಮಗೆ ಬರೆದಿದ್ದೇನೆ;
ನಾನು ಇದನ್ನು ಇಷ್ಟಪೂರ್ವಕವಾಗಿ ಮಾಡಿದರೆ ನನಗೆ ಬಹುಮಾನವುಂಟು. ನನ್ನ ಇಷ್ಟಕ್ಕೆ ವಿರೋಧ ವಾಗಿ ಮಾಡಿದರೆ ಸುವಾರ್ತೆಯ ವಿಷಯವಾದ ದೈವನೇಮವು ನನ್ನ ವಶಕ್ಕೆ ಕೊಡಲ್ಪಟ್ಟಿದೆ.
ಅದಕ್ಕೆ ಬದಲಾಗಿ ಸುನ್ನತಿಯವರ ಸುವಾರ್ತೆಯು ಪೇತ್ರನಿಗೆ ಹೇಗೋ ಹಾಗೆಯೇ ಸುನ್ನತಿಯಿಲ್ಲದವರ ಸುವಾ ರ್ತೆಯು ನನಗೆ ಒಪ್ಪಿಸಲ್ಪಟ್ಟಿತು.
ನಿಮಗೋಸ್ಕರ ವಾಗಿ ನನಗೆ ಕೊಡಲ್ಪಟ್ಟ ದೇವರ ಕೃಪಾಯುಗದ ವಿಷಯದಲ್ಲಿ ನೀವು ಕೇಳಿರುವದಾದರೆ
ಪೌಲನೆಂಬ ನಾನು ಈ ಸುವಾರ್ತೆಗೆ ಸೇವಕನಾದೆನು; ನೀವು ಕೇಳಿದಂಥ ಮತ್ತು ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪಟ್ಟಂಥ ಸುವಾರ್ತೆಯಿಂದ ಉಂಟಾದ ನಿರೀಕ್ಷೆ ಯನ್ನು ಬಿಟ್ಟು ತೊಲಗಿಹೋಗದೆ ಅಸ್ತಿವಾರದ ಮೇಲೆ ನಿಂತು ಸ್ಥಿರವಾಗಿದ್ದು ನಂಬಿಕೆಯಲ್ಲಿ ನೆಲೆಗೊಂಡಿರು ವದಾದರೆ
ನಿಮ್ಮನ್ನು ದೃಢಪಡಿಸುವದಕ್ಕೂ ನಿಮ್ಮ ನಂಬಿಕೆಯ ವೃದ್ಧಿಗಾಗಿ ನಿಮ್ಮನ್ನು ಆದರಿಸುವದಕ್ಕೂ ನಮ್ಮ ಸಹೋದರನೂ ದೇವರ ಸೇವಕನೂ ಕ್ರಿಸ್ತನ ಸುವಾರ್ತೆಯಲ್ಲಿ ನಮ್ಮ ಜೊತೆ ಸೇವಕನೂ ಆಗಿರುವ ತಿಮೊಥೆಯನನ್ನು ಕಳುಹಿಸಿದೆವು.
ಈ ಸಂಗತಿಗಳನ್ನು ಸಹೋದರರಿಗೆ ತಿಳಿಸಿದರೆ ನೀನು ಅನುಸರಿಸುವ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಪೋಷಣೆ ಹೊಂದುವವರಾಗಿ ಯೇಸು ಕ್ರಿಸ್ತನ ಒಳ್ಳೇ ಸೇವಕನಾಗಿರುವಿ.
ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತ ನಾಗಿರು; ಪೂರ್ಣದೀರ್ಘಶಾಂತಿಯಿಂದಲೂ ಉಪ ದೇಶದಿಂದಲೂ ಖಂಡಿಸು, ಗದರಿಸು, ಎಚ್ಚರಿಸು.