ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತ ನಾಗಿರು; ಪೂರ್ಣದೀರ್ಘಶಾಂತಿಯಿಂದಲೂ ಉಪ ದೇಶದಿಂದಲೂ ಖಂಡಿಸು, ಗದರಿಸು, ಎಚ್ಚರಿಸು.
Cross references
ನಾನು ನೀತಿಯನ್ನು ದೊಡ್ಡ ಸಭೆಯಲ್ಲಿ ಸಾರಿಬಿಟ್ಟಿದ್ದೇನೆ; ಇಗೋ, ಓ ಕರ್ತನೇ, ನಾನು ನನ್ನ ತುಟಿಗಳಿಗೆ ಅಡ್ಡಿ ಮಾಡಲಿಲ್ಲವೆಂಬ ಸಂಗತಿ ನೀನು ತಿಳಿದವ ನಾಗಿದ್ದೀ.
ದೇವರಾದ ಕರ್ತನ ಆತ್ಮವು ನನ್ನ ಮೇಲೆ ಅದೆ; ದೀನರಿಗೆ ಶುಭಸಮಾಚಾರವನ್ನು ಸಾರುವದಕ್ಕೆ ಕರ್ತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯವುಳ್ಳವರನ್ನು ಕಟ್ಟುವದಕ್ಕೂ ಸೆರೆಯವರಿಗೆ ಬಿಡುಗಡೆಯನ್ನು ಬಂಧಿಸಲ್ಪಟ್ಟವರಿಗೆ ಸೆರೆಮನೆಯ ಕದ ತೆರೆಯುವದನ್ನು ಪ್ರಸಿದ್ಧಿ ಮಾಡುವದಕ್ಕೂ
ಏನಂದರೆ--ಎದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ನಾನು ನಿನಗೆ ಹೇಳಿದ ಪ್ರಕಟನೆಯನ್ನು ಅದಕ್ಕೆ ಸಾರು ಎಂದು ಹೇಳಿದನು.
ಕರ್ತನ ಆತ್ಮವು ನನ್ನ ಮೇಲೆ ಇದೆ; ಯಾಕಂದರೆ ಬಡವರಿಗೆ ಸುವಾರ್ತೆ ಸಾರುವದಕ್ಕೆ ಆತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯ ವುಳ್ಳವರನ್ನು ಸ್ವಸ್ಥಮಾಡುವದಕ್ಕೂ ಸೆರೆಯಲ್ಲಿದ್ದವರಿಗೆ ಬಿಡುಗಡೆಯನ್ನು ಸಾರುವದಕ್ಕೂ ಕುರುಡರಿಗೆ ದೃಷ್ಟಿ ಕೊಡುವದಕ್ಕೂ ಜಜ್ಜಲ್ಪಟ್ಟವರನ್ನು ಬಿ
ಅವರು ಯೇಸುವಿನ ಬಳಿಗೆ ಬಂದು ಆತನಿಗೆ ಒತ್ತಾಯ ಮಾಡಿ--ನೀನು (ಅವನ ಆಳನ್ನು) ಸ್ವಸ್ಥಮಾಡಬೇಕು; ಯಾಕಂದರೆ ಅವನು ಯೋಗ್ಯನಾಗಿದ್ದಾನೆ.
ನನ್ನ ವಿಷಯದಲ್ಲಿ ಸಂದೇಹಪಡದವನೇ ಧನ್ಯನು ಅಂದನು.
ಆದರೆ ಯೇಸು ಅವ ನಿಗೆ--ಸತ್ತವರು ತಮ್ಮ ಸತ್ತವರನ್ನು ಹೂಣಿಡಲಿ; ಆದರೆ ನೀನು ಹೋಗಿ ದೇವರ ರಾಜ್ಯವನ್ನು ಸಾರು ಅಂದನು.
ಅಲ್ಲಿ ಯಾಕೋಬನ ಬಾವಿ ಇತ್ತು; ಯೇಸು ಪ್ರಯಾಣದಿಂದ ಆಯಾಸಗೊಂಡಿರಲಾಗಿ ಆ ಬಾವಿಯ ಬಳಿಯಲ್ಲಿ ಹಾಗೆಯೇ ಕೂತುಕೊಂಡನು. ಆಗ ಸುಮಾರು ಆರನೇ ತಾಸಾಗಿತ್ತು. (ಅಂದರೆ ಮಧ್ಯಾಹ್ನ ಹನ್ನೆರಡು ಗಂಟೆಯಾ ಗಿತ್ತು).
ಆದರೆ ಆತನು ಅವರಿಗೆ--ನಿಮಗೆ ತಿಳಯದಿರುವ ಆಹಾರವು ನನಗೆ ಊಟಕ್ಕೆ ಇದೆ ಅಂದನು.
ಅವರು ಸಲವಿಾಸಿನಲ್ಲಿದ್ದಾಗ ಯೆಹೂದ್ಯರ ಸಭಾ ಮಂದಿರಗಳಲ್ಲಿ ದೇವರವಾಕ್ಯವನ್ನು ಸಾರಿದರು. ಯೋಹಾನನು ಸಹ ಪರಿಚಾರಕನಾಗಿ ಅವರ ಸಂಗಡ ಇದ್ದನು.
ಸಬ್ಬತ್ತಿನಲ್ಲಿ ನಾವು ಪಟ್ಟಣದೊಳಗಿಂದ ನದೀತೀರದ ಕಡೆಗೆ ಹೋಗಿದ್ದೆವು. ಅಲ್ಲಿ ವಾಡಿಕೆಯಂತೆ ಪ್ರಾರ್ಥನೆ ನಡೆಯುತ್ತಿತ್ತು; ಕೂಡಿ ಬಂದಿದ್ದ ಸ್ತ್ರೀಯರೊಂದಿಗೆ ನಾವು ಕೂತು ಕೊಂಡು ಮಾತನಾಡಿದೆವು.
ಅವರು--ಕರ್ತನಾದ ಯೇಸು ಕ್ರಿಸ್ತನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆ ಹೊಂದುವಿ, ನಿನ್ನ ಮನೆಯವರೂ ರಕ್ಷಣೆ ಹೊಂದು ವರು ಎಂದು ಹೇಳಿದರು.
ವಾರದ ಮೊದಲನೆಯ ದಿವಸದಲ್ಲಿ ಶಿಷ್ಯರು ರೊಟ್ಟಿಮುರಿಯುವದಕ್ಕಾಗಿ ಕೂಡಿ ಬಂದಾಗ ಮರು ದಿನ ಹೊರಡಬೇಕೆಂದಿದ್ದ ಪೌಲನು ಅವರಿಗೆ ಪ್ರಸಂಗಿಸುತ್ತಾ ಮಧ್ಯರಾತ್ರಿಯ ವರೆಗೂ ಉಪದೇಶ ವನ್ನು ನಡಿಸಿದನು.
ನಾನು ಆಸ್ಯಕ್ಕೆ ಬಂದ ಮೊದಲನೆಯ ದಿವಸದಿಂದ ನಿಮ್ಮ ಮಧ್ಯೆ ಎಲ್ಲಾ ಕಾಲಗಳಲ್ಲಿ ಹೇಗೆ ನಡೆದುಕೊಂಡೆನೆಂಬದನ್ನು ನೀವೇ ಬಲ್ಲಿರಿ.
ನಾವು ರೋಮ್‌ಗೆ ಬಂದಾಗ ಕಾವಲುಗಾರರ ನಾಯಕನಿಗೆ ಶತಾಧಿಪತಿಯು ಸೆರೆಯವರನ್ನು ಒಪ್ಪಿಸಿ ದನು; ಆದರೆ ತನ್ನನ್ನು ಕಾಯುತ್ತಿದ್ದ ಒಬ್ಬ ಸೈನಿಕನೊಂದಿಗೆ ಪೌಲನು ಪ್ರತ್ಯೇಕವಾಗಿ ಇರಬಹುದೆಂದು ಅಪ್ಪಣೆ ಹೊಂದಿದನು.
ಪೌಲನು ತನ್ನ ಸ್ವಂತ ಬಾಡಿಗೆಯ ಮನೆಯಲ್ಲಿ ಪೂರಾ ಎರಡು ವರಷವಿದ್ದು ತನ್ನ ಬಳಿಗೆ ಬರುವವರ ನ್ನೆಲ್ಲಾ ಸೇರಿಸಿಕೊಂಡನು.ಅವನು ತುಂಬಾ ಧೈರ್ಯ ದೊಂದಿಗೆ ದೇವರರಾಜ್ಯವನ್ನು ಸಾರುತ್ತಾ ಕರ್ತನಾದ ಯೇಸು ಕ್ರಿಸ್ತನ ವಿಷಯವಾದವುಗಳನ್ನು ಬೋಧಿಸುತ್ತಿ ದ್ದನು. ಯಾವ ಮನುಷ್ಯನೂಅವನಿಗೆ ಅಡ್ಡಿಮಾಡಲಿಲ್ಲ.
ಇದ ಲ್ಲದೆ ಸಾರುವವರನ್ನು ಕಳುಹಿಸದಿದ್ದರೆ ಅವರು ಸಾರು ವದು ಹೇಗೆ? ಮತ್ತು--ಸಮಾಧಾನದ ಸುವಾರ್ತೆ ಯನ್ನು ಸಾರುವವರ ಮತ್ತು ಸಂತೋಷದ ಸುವರ್ತ ಮಾನವನ್ನು ತರುವವರ ಪಾದಗಳು ಎಷ್ಟೋ ಅಂದ ವಾಗಿವೆ ಎಂದು ಬರೆದದೆ.
ನಿರೀಕ್ಷೆಯಲ್ಲಿ ಸಂತೋಷಿಸುತ್ತಾ ಸಂಕಟದಲ್ಲಿ ತಾಳ್ಮೆಯುಳ್ಳವರಾಗಿದ್ದು ಆಸಕ್ತಿಯುಳ್ಳವರಾಗಿ ಪ್ರಾರ್ಥನೆ ಯಲ್ಲಿ ನಿರತರಾಗಿರ್ರಿ.
ವಾಕ್ಯದಲ್ಲಿ ಉಪದೇಶಹೊಂದುವವನು ಉಪದೇಶ ಮಾಡುವವನಿಗೆ ತನಿಗರುವ ಎಲ್ಲಾ ಒಳ್ಳೆಯವುಗಳಲ್ಲಿ ಪಾಲುಕೊಡಲಿ.
ಅದಕ್ಕೆ ನಿಮಗೋಸ್ಕರ ನನಗೆ ಕೊಡಲ್ಪಟ್ಟ ದೇವರ ಯುಗಕ್ಕನುಸಾರ ದೇವರ ವಾಕ್ಯವನ್ನು ಪೂರೈಸು ವದಕ್ಕೆ ನಾನು ಸೇವಕನಾದೆನು.
ಕ್ರಿಸ್ತ ಯೇಸುವಿನಲ್ಲಿ ಪ್ರತಿಯೊಬ್ಬನನ್ನು ಪರಿಪೂರ್ಣ ನನ್ನಾಗಿ ಮಾಡುವಂತೆ ಪ್ರತಿಯೊಬ್ಬನನ್ನು ಎಚ್ಚರಿಸುತ್ತಾ ಎಲ್ಲಾ ಜ್ಞಾನದಲ್ಲಿ ಪ್ರತಿಯೊಬ್ಬನಿಗೂ ಬೋಧಿಸುತ್ತಾ ನಾವು ಆತನನ್ನು ಸಾರುವವರಾಗಿದ್ದೇವೆ.ನನ್ನಲ್ಲಿ ಬಲದಿಂದ ಕಾರ್ಯ ಮಾಡುವಾತನ ಕೆಲಸಕ್ಕನು ಸಾರವಾಗಿ ನಾನು ಸಹ ಅದಕ್ಕಾಗಿ ಪ್ರಯಾಸಪಡುತ್ತಾ ಹೋರಾಡುತ್ತೇನೆ.
ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಬುದ್ದಿ ಹೇಳುತ್ತಾ ಆದರಿಸುತ್ತಾ ಬಂದೆವು.
ಸಹೋದರರೇ, ಅಕ್ರಮವಾಗಿ ನಡೆಯುವವ ರನ್ನು ಎಚ್ಚರಿಸಿರಿ, ಮನಗುಂದಿದವರನ್ನಾದರಿಸಿರಿ. ಬಲ ಹೀನರಿಗೆ ಆಧಾರವಾಗಿರ್ರಿ. ಎಲ್ಲರಲ್ಲಿಯೂ ತಾಳ್ಮೆಯುಳ್ಳ ವರಾಗಿರ್ರಿ ಎಂದು ನಿಮ್ಮನ್ನು ಪ್ರಬೋಧಿಸುತ್ತೇವೆ.
ಪ್ರವಾದನೆಗಳನ್ನು ಹೀನೈಸಬೇಡಿರಿ;
ನಾನು ಬರುವ ತನಕ ಓದುವದರಲ್ಲಿಯೂ ಎಚ್ಚರಿಸುವದರಲ್ಲಿಯೂ ಬೋಧಿ ಸುವದರಲ್ಲಿಯೂ ಲಕ್ಷ್ಯಕೊಡು.
ಈ ವಿಷಯಗಳನ್ನು ಧ್ಯಾನಿಸು ವವನಾಗಿರು; ನಿನ್ನನ್ನು ಸಂಪೂರ್ಣವಾಗಿ ಅವುಗಳಿಗೆ ಒಪ್ಪಿಸಿಕೊಡು; ಹೀಗೆ ನಿನಗಾದ ಲಾಭವು ಎಲ್ಲರಿಗೂ ತೋರಿಬಂದೀತು.ನಿನ್ನ ವಿಷಯದಲ್ಲಿಯೂ ಉಪ ದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಇವುಗಳಲ್ಲಿ ನಿರತನಾಗಿರು; ಹೀಗೆ ಮಾಡುವದರಿಂದ ನೀನು ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.
ಪಾಪಮಾಡುವವರನ್ನು ಎಲ್ಲರ ಮುಂದೆಯೇ ಗದರಿಸು; ಇದರಿಂದ ಮಿಕ್ಕಾದವರಿಗೂ ಭಯವುಂಟಾಗುವದು.
ಒಬ್ಬನು ತನ್ನನ್ನು ಇಂಥವುಗಳಿಂದ ಶುದ್ಧಪಡಿಸಿಕೊಂಡರೆ ಅವನು ಪ್ರತಿಷ್ಠಿತನೂ ಯಜಮಾನನ ಬಳಿಕೆಗೆ ಯೋಗ್ಯನೂ ಸಕಲಸತ್ಕಾರ್ಯಕ್ಕೆ ಸಿದ್ಧನೂ ಆಗಿದ್ದು ಗೌರವಕ್ಕೆ ಪಾತ್ರೆಯಾಗಿರುವನು.
ಎದುರಿಸುವವರನ್ನು ಸಾತ್ವಿಕತ್ವದಿಂದ ತಿದ್ದುವವನು ಆಗಿರಬೇಕು. ಒಂದು ವೇಳೆ ದೇವರು ಆ ಎದುರಿಸುವವರಲ್ಲಿ ಪಶ್ಚಾತ್ತಾಪವನ್ನುಂಟುಮಾಡಿ ಸತ್ಯದ ತಿಳುವಳಿಕೆಯನ್ನು ಅವರಿಗೆ ಕೊಟ್ಟಾನು.ಸೈತಾ ನನ ಉರ್ಲಿಗೆ ಬಿದ್ದು ಅವನ ಇಷ್ಟದಿಂದ ಸೆರೆ ಒಯ್ಯಲ್ಪಟ್ಟವರಾದ ಇವರು ಒಂದು ವೇಳೆ ಎಚ್ಚೆತ್ತಾರು.
ನೀನಾದರೋ ನನ್ನ ಬೋಧನೆ ನಡತೆ ಉದ್ದೇಶ ನಂಬಿಕೆ ದೀರ್ಘ ಶಾಂತಿ ಪ್ರೀತಿ ಸೈರಣೆ ಇವುಗಳನೂ
ಈ ಸಾಕ್ಷಿಯು ನಿಜವೇ; ಆದದರಿಂದ ಅವರು ನಂಬಿಕೆಯಲ್ಲಿ ಸ್ವಸ್ಥ ಚಿತ್ತರಾಗಿರುವಂತೆ ಅವ ರನ್ನು ಕಠಿಣವಾಗಿ ಖಂಡಿಸು.
ಈ ಕಾರ್ಯಗಳ ವಿಷಯದಲ್ಲಿ ಮಾತನಾಡುತ್ತಾ ಎಚ್ಚರಿಸುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದಿರಲಿ.
ಸಹೋದರರೇ, ಈ ಎಚ್ಚರಿಕೆಯ ಮಾತನ್ನು ಸಹಿಸಿಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುವ ಹಾಗೆ ಸಂಕ್ಷೇಪವಾಗಿ ನಾನು ಈ ಪತ್ರವನ್ನು ಬರೆದಿದ್ದೇನೆ.
ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.