Home Bibles ಆಮೋಸ 7:16 · ಕನ್ನಡ ಬೈಬಲ್
ಆಮೋಸ 7:16 · ಕನ್ನಡ ಬೈಬಲ್

ಹೀಗಿರುವದರಿಂದ ನೀನು ಈಗ ಕರ್ತನ ವಾಕ್ಯವನ್ನು ಕೇಳು; ಇಸ್ರಾಯೇಲಿಗೆ ಪ್ರವಾದನೆ ಮಾಡಬೇಡವೆಂದೂ ಇಸಾಕನ ಮನೆತನಕ್ಕೆ ವಿರೋಧ ವಾಗಿ ಖಂಡನೆ ಮಾಡಬಾರದೆಂದೂ ನೀನು ಹೇಳುವಿ ಯಲ್ಲಾ.ಆದದರಿಂದ ಕರ್ತನು ಹೇಳುವದೇ ನಂದರೆ--ನಿನ್ನ ಹೆಂಡತಿ ಪಟ್ಟಣದಲ್ಲಿ ಸೂಳೆಯಾಗು ವಳು; ನಿನ್ನ ಕುಮಾರರೂ ಕುಮಾರ್ತೆಯರೂ ಕತ್ತಿ ಯಿಂದ ಬೀಳುವರು; ನಿನ್ನ ದೇಶವು ನೂಲಿನಿಂದ ವಿಭಾಗಿಸಲ್ಪಡುವದು; ನೀನು ಅಪವಿತ್ರವಾದ ದೇಶದಲ್ಲಿ ಸಾಯುವಿ. ಇಸ್ರಾಯೇಲ್‌ ನಿಶ್ಚಯವಾಗಿ ತನ್ನ ದೇಶದಿಂದ ಸೆರೆಯಾಗಿ ಒಯ್ಯಲ್ಪಡುವದು.

Cross references

ದ್ವಿತೀಯೋಪದೇಶಕಾಂಡ 32:2

ನನ್ನ ಬೋಧನೆಯು ಮಳೆಯಂತೆ ಸುರಿಯುವದು; ನನ್ನ ಮಾತು ಮಂಜಿನಂತೆಯೂ ಹುಲ್ಲಿನ ಮೇಲೆ ಬೀಳುವ ತುಂತುರಿನ ಹಾಗೆಯೂ ಪಲ್ಯದ ಮೇಲೆ ಬೀಳುವ ವೃಷ್ಟಿಗಳ ಹಾಗೆಯೂ ಬೀಳುವದು.

1 ಸಮುವೇಲ 15:16

ಆಗ ಸಮುವೇಲನು ಸೌಲನಿಗೆಅದಿರಲಿ ಕರ್ತನು ಈ ರಾತ್ರಿಯಲ್ಲಿ ನನಗೆ ಹೇಳಿದ್ದನ್ನು ನಿನಗೆ ತಿಳಿಸುವೆನು ಅಂದನು. ಅದಕ್ಕವನು--ಹೇಳು ಅಂದನು.

1 ಅರಸುಗಳು 13:1

ಯಾರೊಬ್ಬಾಮನು ಧೂಪವನ್ನರ್ಪಿಸಲು ಬಲಿಪೀಠದ ಬಳಿಯಲ್ಲಿ ನಿಂತಿರುವಾಗ ಇಗೋ, ಕರ್ತನ ಮಾತಿನಂತೆ ದೇವರ ಮನುಷ್ಯನು ಯೆಹೂದದಿಂದ ಬೇತೇಲಿಗೆ ಬಂದನು.

1 ಅರಸುಗಳು 22:19

ವಿಾಕಾಯೆಹುವು--ಆದದರಿಂದ ಕರ್ತನ ವಾಕ್ಯವನ್ನು ಕೇಳು--ಕರ್ತನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡಿರುವದನ್ನೂ ಆಕಾಶದ ಸಮಸ್ತ ಸೈನ್ಯವು ಆತನ ಬಲಪಾರ್ಶ್ವದಲ್ಲಿಯೂ ಎಡಪಾರ್ಶ್ವದಲ್ಲಿಯೂ ನಿಂತಿರುವದನ್ನೂ ನೋಡಿದೆನು ಅಂದನು.

2 ಅರಸುಗಳು 14:24

ಆದರೆ ಅವನು ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು; ಇಸ್ರಾಯೇಲನ್ನು ಪಾಪ ಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನೆಲ್ಲಾ ಅವನು ತೊರೆದು ಬಿಡಲಿಲ್ಲ.

ಯೆಶಾಯ 30:10

ಅವರು ನೋಡುವವರಿಗೆ--ನೋಡಬೇಡಿರೆಂದು, ದಿವ್ಯದರ್ಶಿಗಳಿಗೆ ನಿಮಗೆ ದರ್ಶನವಾಗದಿರಲೆನ್ನು ತ್ತಾರೆ. ಪ್ರವಾದಿಗಳಿಗೆ--ನಮಗೆ ನ್ಯಾಯವಾದವು ಗಳನ್ನು ಪ್ರವಾದಿಸಬೇಡಿರಿ ನಯವಾದವುಗಳನ್ನೇ ನುಡಿ ಯಿರಿ, ಮೋಸವಾದವುಗಳನ್ನೆ ಪ್ರವಾದಿಸಿರಿ ಅನ್ನು ತ್ತಾರೆ.

ಯೆರೆಮಿಯ 28:15

ಆದರೆ ಕರ್ತನು ನಮಗೆ ಬಾಬೆಲಿನಲ್ಲಿ ಪ್ರವಾದಿ ಗಳನ್ನು ಎಬ್ಬಿಸಿದ್ದಾನೆಂದು ನೀವು ಹೇಳಿದ್ದರಿಂದ

ಯೆಹೆಜ್ಕೇಲ 16:35

ಆದಕಾರಣ ಓ ವ್ಯಭಿಚಾರಿಣಿಯೇ, ನೀನು ಕರ್ತನ ವಾಕ್ಯವನ್ನು ಕೇಳು.

ಯೆಹೆಜ್ಕೇಲ 20:46

ಮನುಷ್ಯಪುತ್ರನೇ, ದಕ್ಷಿಣದ ಕಡೆಗೆ ಮುಖಮಾಡಿ ತೆಂಕಣದ ಕಡೆಗೆ ಮಾತ ನಾಡು; ದಕ್ಷಿಣ ಬಯಲು ಅರಣ್ಯಕ್ಕೆ ವಿರೋಧವಾಗಿ ಪ್ರವಾದಿಸು.

ಯೆಹೆಜ್ಕೇಲ 21:2

ಮನುಷ್ಯಪುತ್ರನೇ, ನೀನು ಯೆರೂಸಲೇಮಿಗೆ ಅಭಿಮುಖನಾಗಿ ಅಲ್ಲಿನ ಪರಿಶುದ್ಧ ಸ್ಥಳಗಳ ಕಡೆಗೆ ಮಾತನಾಡುತ್ತಾ ಇಸ್ರಾ ಯೇಲ್‌ ದೇಶಕ್ಕೆ ವಿರುದ್ಧವಾಗಿ ಪ್ರವಾದಿಸು.

ಆಮೋಸ 7:13

ಆದರೆ ಇನ್ನು ಮೇಲೆ ಬೇತೇಲಿನಲ್ಲಿ ಪ್ರವಾದಿಸಬೇಡ; ಅದು ಅರಸನ ಪರಿಶುದ್ಧ ಸ್ಥಾನವಾಗಿಯೂ ರಾಜನ ಅರಮನೆಯಾಗಿಯೂ ಇದೆ.

ಮೀಕ 2:6

ಪ್ರವಾದಿಸಬೇಡಿರೆಂದು ಪ್ರವಾದಿಸುವವರಿಗೆ ಅನ್ನು ತ್ತಾರೆ; ಅವರಿಗೆ ಆತನು ಪ್ರವಾದಿಸನು, ಆದರೆ ಅವರು ನಾಚಿಕೆಪಡುವದಿಲ್ಲ.

Interlinear

Choose Theme