ನಾನು ಕುರಿಯ ಹಿಂಡನ್ನು ಹಿಂಬಾಲಿಸುವ ವೇಳೆ ಯಲ್ಲಿ ಕರ್ತನು ನನ್ನನ್ನು ಕರೆದು ಹೇಳಿದ್ದೇನಂದರೆ--ನೀನು ಹೋಗಿ ನನ್ನ ಜನರಾದ ಇಸ್ರಾಯೇಲ್ಯರಿಗೆ ಪ್ರವಾದಿಸು.
Cross references
ಈಗ ನೀನು ನನ್ನ ಸೇವಕನಾದ ದಾವೀದನಿಗೆ--ನೀನು ನನ್ನ ಜನ ರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗಿರುವಂತೆ ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ನಾನು ಕುರಿಯ ಹಟ್ಟಿಯಿಂದ ತೆಗೆದುಕೊಂಡೆನು;
ಹಾಗೆಯೇ ಅವನು ಅಲ್ಲಿಂದ ಹೊರಟು ಶಾಫಾ ಟನ ಮಗನಾದ ಎಲೀಷನನ್ನು ಕಂಡುಕೊಂಡನು; ಅವನು ತನ್ನ ಮುಂದೆ ಇರುವ ಹನ್ನೆರಡು ಜೋಡು ಎತ್ತುಗಳಿಂದ ಉಳುತ್ತಿದ್ದನು; ಅವನು ಹನ್ನೆರಡನೇ ಜೋಡಿನ ಸಂಗಡ ಇದ್ದನು. ಎಲೀಯನು ಅವನ ಪಕ್ಕದಲ್ಲಿ ಹಾದು ಹೋಗಿ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು.
ಇದಲ್ಲದೆ ತನ್ನ ಸೇವಕನಾದ ದಾವೀದನನ್ನು ಆದುಕೊಂಡು, ಕುರಿ ಹಟ್ಟಿಗಳಿಂದ ಅವನನ್ನು ತೆಗೆದು,
ಆಗ ಕರ್ತನು ನನಗೆ--ನಾನು ಚಿಕ್ಕವನೆಂದು ಹೇಳಬೇಡ; ನಾನು ನಿನ್ನನ್ನು ಕಳುಹಿಸುವವರೆಲ್ಲರ ಬಳಿಗೆ ಹೋಗಬೇಕು; ನಾನು ನಿನಗೆ ಆಜ್ಞಾಪಿಸುವದನ್ನೆಲ್ಲಾ ಮಾತನಾಡಬೇಕು.
ಆತನು ನನಗೆ ಹೇಳಿದ್ದೇನಂದರೆ--ಮನುಷ್ಯಪುತ್ರನೇ, ನನಗೆ ವಿರೋಧವಾಗಿ ತಿರುಗಿಬಿದ್ದಂಥ ಮತ್ತು ಬೀಳುವಂಥ ಜನಾಂಗದವರಾದ ಇಸ್ರಾಯೇಲ್ಯರ ಮಕ್ಕಳ ಬಳಿಗೆ ನಾನು ನಿನ್ನನ್ನು ಕಳುಹಿಸು ತ್ತೇನೆ; ಅವರೂ ಅವರ ಪಿತೃಗಳೂ ಇಂದಿನ ವರೆಗೂ ನನಗೆ ವಿರೋಧವಾಗಿ ದ್ರೋಹಮಾಡಿದ್ದಾರೆ.
ಸಿಂಹವು ಗರ್ಜಿಸಿದರೆ ಭಯಪಡದೆ ಇರುವ ವರು ಯಾರು? ಕರ್ತನಾದ ದೇವರು ಮಾತನಾಡಿದರೆ ಅದನ್ನು ಪ್ರವಾದಿಸದೆ ಇರುವವರು ಯಾರು?
ಮತ್ತು ಯೇಸು ಗಲಿಲಾಯ ಸಮುದ್ರದ ತೀರದಲ್ಲಿ ನಡೆದುಹೋಗುತ್ತಿದ್ದಾಗ ಪೇತ್ರನೆಂದು ಕರೆಯಲ್ಪಟ್ಟ ಸೀಮೋನ, ಅವನ ಸಹೋದರನಾದ ಅಂದ್ರೆಯ ಎಂಬ ಇಬ್ಬರು ಸಹೋದರರು ಸಮುದ್ರ ದಲ್ಲಿ ಬಲೆ ಬೀಸುವದನ್ನು ಕಂಡನು; ಯಾಕಂದರೆ ಅವರು ಬೆಸ್ತರಾಗಿದ್ದರು.
ತರುವಾಯ ಯೇಸು ಅಲ್ಲಿಂದ ಹಾದು ಹೋಗು ತ್ತಿದ್ದಾಗ ಮತ್ತಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯನು ಸುಂಕದ ಕಟ್ಟೆಯಲ್ಲಿ ಕೂತಿರುವದನ್ನು ನೋಡಿ ಅವ ನಿಗೆ--ನನ್ನನ್ನು ಹಿಂಬಾಲಿಸು ಅನ್ನಲು ಅವನು ಎದ್ದು ಆತನನ್ನು ಹಿಂಬಾಲಿಸಿದನು.
ಅವರಿಗೆ--ಕ್ರಿಸ್ತನು ಹೀಗೆ ಶ್ರಮೆಪಟ್ಟು ಸತ್ತವರೊಳಗಿಂದ ಮೂರನೆಯ ದಿನದಲ್ಲಿ ಎದ್ದು ಬರುವದು ಅಗತ್ಯವಾಗಿತ್ತೆಂತಲೂ
ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬಂದಾಗ ನೀವು ಬಲವನ್ನು ಹೊಂದುವಿರಿ; ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯದ ಲ್ಲಿಯೂ ಸಮಾರ್ಯದಲ್ಲಿಯೂ ಭೂಮಿಯ ಕಟ್ಟ ಕಡೆಯವರೆಗೂ ನೀವು ನನಗೆ ಸಾಕ್ಷಿಗಳಾಗಿರುವಿರಿ ಎಂದು ಹೇಳಿದನು.
ಯಾಕಂದರೆ ನಾವು ಕಂಡು ಕೇಳಿದವು ಗಳನ್ನು ಮಾತನಾಡದೆ ಇರಲಾರೆವು ಎಂದು ಹೇಳಿದರು.
ನೀವು ಹೋಗಿ ದೇವಾಲಯದಲ್ಲಿ ನಿಂತು ಕೊಂಡು ಈ ಜೀವ ವಾಕ್ಯಗಳನ್ನೆಲ್ಲಾ ಜನರಿಗೆ ತಿಳಿಸಿರಿ ಎಂದು ಹೇಳಿದನು.
ಆಗ ಪೇತ್ರನೂ ಉಳಿದ ಅಪೊಸ್ತಲರೂ ಪ್ರತ್ಯುತ್ತರವಾಗಿ--ನಾವು ಮನುಷ್ಯರಿಗಿಂತ ದೇವರಿಗೆ ವಿಧೇಯರಾಗತಕ್ಕದ್ದು.